ಬೆಂಗಳೂರು (Bengaluru): ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ಕೊಟ್ಟಿದೆ.
ಹೌದು, ಗೃಹಜ್ಯೋತಿ ಮೂಲಕ 200 ಯೂನಿಟ್ ಒಳಗೆ ವಿದ್ಯುತ್ ಬಳಸುವ ಎಲ್ಲರಿಗೂ ಉಚಿತ ವಿದ್ಯುತ್ ನೀಡುತ್ತಿರುವ ಸರ್ಕಾರ ಇದೀಗ ವಿದ್ಯುತ್ ದರದಲ್ಲಿ ಇಳಿಕೆ ಮಾಡಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿತ್ತು. ಕೊಟ್ಟ ಮಾತಿನಂತೆ 200 ಯೂನಿಟ್ ಒಳಗೆ ವಿದ್ಯುತ್ ಬಳಸುವ ಎಲ್ಲರಿಗೂ ಉಚಿತ ವಿದ್ಯುತ್ ನೀಡುವ ಆದೇಶ ಮಾಡಿಯೂ ಆಗಿತ್ತು. ಇದಿಗ ವಿದ್ಯುತ್ ದರದಲ್ಲಿ ಇಳಿಕೆ ಮಾಡಿಯೂ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಬಂಪರ್ ನೀಡಿದೆ. ಅದರಲ್ಲೂ 100 ಯೂನಿಟ್ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಬಂಪರ್ ಗಿಫ್ಟ್ ಸಿಕ್ಕಂತಾಗಿದೆ.
ವಿದ್ಯುತ್ ದರ ಇಳಿಕೆ ಮಾಡಿ ಸರ್ಕಾರ ಆದೇಶ ಮಾಡಿದೆ. ವಿದ್ಯುತ್ ದರ ಪರಿಷ್ಕರಣೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಮಾಡಿದೆ. ವಿದ್ಯುತ್ ದರ ಇಳಿಕೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. 100 ಯೂನಿಟ್ಗಿಂತ ಹೆಚ್ಚು ಬಳಸುವ ಗ್ರಾಹಕರಿಗೆ ವಿದ್ಯುತ್ ದರ ಇಳಿಸಿದ್ದು, ಪ್ರತಿ ಯೂನಿಟ್ ಮೇಲೆ 1 ರೂಪಾಯಿ 10 ಪೈಸೆ ಇಳಿಕೆ ಮಾಡಲಾಗಿದೆ. ಇನ್ನೂ ವಾಣಿಜ್ಯ ಬಳಕೆದಾರರಿಗೂ ಬಂಪರ್ ಗಿಫ್ಟ್ ಸಿಕ್ಕಿದ್ದು, ಪ್ರತಿ ಯೂನಿಟ್ಗೆ 125 ಪೈಸೆ ಅಂದ್ರೆ 1 ರೂಪಾಯಿ 25 ಪೈಸೆ ದರ ಇಳಿಕೆ ಮಾಡಲಾಗಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದ ವಿದ್ಯುತ್ ಬಳಕೆದಾರರಿಗೆ ಸಿಹಿ ನೀಡಿದೆ.
ಮಾರ್ಚ್ 1ರಿಂದ ಹೊಸ ದರ ಪರಿಷ್ಕರಣೆ ಜಾರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ವಿದ್ಯುತ್ ದರ ಇಳಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ವಿದ್ಯುತ್ ಬಳಕೆ ಗ್ರಾಹಕರಿಗೆ ಸರ್ಕಾರ ಬಂಪರ್ ಕೊಡುಗೆ ಕೊಟ್ಟಿದೆ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೂ ಸರ್ಕಾರ ಗಿಫ್ಟ್ ಕೊಟ್ಟಿದ್ದು, ಪ್ರತಿ ಯೂನಿಟ್ಗೆ 40 ಪೈಸೆ ಕಡಿತ ಮಾಡಲಾಗಿದೆ. ಖಾಸಗಿ ಏತ ನೀರಾವರಿ ವಿದ್ಯುತ್ ಬಳಕೆದಾರರಿಗೂ 2 ರೂಪಾಯಿ ಇಳಿಕೆ ಮಾಡಲಾಗಿದೆ. 100 ಯೂನಿಟ್ಗಿಂತ ಹೆಚ್ಚು ಬಳಸುವವರಿಗೆ ಮಾತ್ರ ಹೊಸ ದರ ಮಾರ್ಚ್ 1ರಿಂದ ಜಾರಿ ಆಗಲಿದೆ.
ರಾಜ್ಯದಲ್ಲಿ ಉಚಿತ ವಿದ್ಯುತ್ ಘೋಷಣೆ ಮಾಡಿದಾಗ ವಿದ್ಯುತ್ ಹೆಚ್ಚಳ ಮಾಡಲಾಯ್ತು ಎಂದು ಸಾಕಷ್ಟು ಆಕ್ರೋಶ ಹೊರ ಹಾಕಲಾಗಿತ್ತು. ಕಾರ್ಖಾನೆಗಳು ಹಾಗು ವಾಣಿಜ್ಯ ಸಂಸ್ಥೆಗಳಿಗೆ ವಿದ್ಯುತ್ ಬರೆ ಎಂದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಆಗಿತ್ತು. ಇನ್ನು ವಾರ್ಷಿಕ ಸರಾಸರಿ ಮೇಲೆ 200 ಯೂನಿಟ್ ಬಳಕೆದಾರರನ್ನು ಆಯ್ಕೆ ಮಾಡಿದ್ರಿಂದ ಕೆಲವು ಒಂದಿಷ್ಟು ಕುಟುಂಬಗಳು ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗಿಲ್ಲ ಎನ್ನುವ ಆರೋಪವೂ ಇತ್ತು. ಇದೀಗ ಕಾಂಗ್ರೆಸ್ ಸರ್ಕಾರ ತನ್ನ ಮೇಲೆ ಬಂದಿದ್ದ ಆರೋಪದಿಂದ ಮುಕ್ತವಾಗಲು ವಿದ್ಯುತ್ ದರ ಇಳಿಕೆ ಮಾಡಿ ಆದೇಶ ಮಾಡಿದೆ.
#Karnataka #bengaluru #power #government #congress #KJGeorge






