ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದ ಮತದಾನ ನಡೆದಿದೆ. ಈ ಪೈಕಿ ಮಂಡ್ಯ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ.

ಕಳೆದ ಬಾರಿ ತೀವ್ರ ಮುಖಭಂಗ ಅನುಭವಿಸಿದ್ದ ದಳಪತಿ. ಈ ಬಾರಿ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಚುರುಕಿನಿಂದ ಮತದಾನವಾಗುತ್ತಿದ್ದು, ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಈಗಿನಿಂದಲೇ ಶುರುವಾಗಿದೆ. ಕ್ಷೇತ್ರದಲ್ಲಿ ಸಂಜೆ 5 ಗಂಟೆ ವೇಳೆಗೆ ಕ್ಷೇತ್ರದಲ್ಲಿ ಶೇ. 74.87ರಷ್ಟು ಮತದಾನವಾಗಿದೆ.

ಇನ್ನುಳಿದಂತೆ ಕೆ ಆರ್ ಪೇಟೆ ತಾಲೂಕಿನಲ್ಲಿ 75.76%, ಮದ್ದೂರು – .78.03%, ಮಳವಳ್ಳಿ -69.99%, ಮಂಡ್ಯ – 72.22%, ಮೇಲುಕೋಟೆ- 79.03%, ನಾಗಮಂಗಲ -78.01%, ಶ್ರೀರಂಗಪಟ್ಟಣ -75.17%, ಕೆ ಆರ್ ನಗರ – 72.00%ರಷ್ಟು ಮತದಾನವಾಗಿದೆ.






