• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, October 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಕ್ಟೋಬರ್ 24ರಿಂದ ಹೊಸ ರೂಪದಲ್ಲಿ ‘ಗೋಲ್ಡನ್ ಚಾರಿಯಟ್’ ಸಂಚಾರ: ಸಚಿವ ಕೆ.ಜೆ. ಜಾರ್ಜ್ ಮಾಹಿತಿ

ಪ್ರತಿಧ್ವನಿ by ಪ್ರತಿಧ್ವನಿ
October 22, 2026
in Top Story, ಕರ್ನಾಟಕ
0
'Golden Chariot' to resume operations in a new avatar from October 24: Minister K.J. George shares details
Share on WhatsAppShare on FacebookShare on Telegram
ADVERTISEMENT

ಬೆಂಗಳೂರು : ಕರ್ನಾಟಕದ ಪ್ರತಿಷ್ಠಿತ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್ (Golden Chariot) 2026–27ರ ಪ್ರವಾಸಿ ಋತುವಿಗಾಗಿ ಹೊಸ ಮೆರುಗಿನೊಂದಿಗೆ ಅಕ್ಟೋಬರ್ 24ರಿಂದ ಸಂಚಾರ ಆರಂಭಿಸಲಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ (K.J. George) ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಕಾಳಜಿ ಮತ್ತು ಆಸಕ್ತಿಯ ಮೇರೆಗೆ ಈ ರೈಲಿಗೆ ನವೀಕೃತ ಸ್ಪರ್ಶ ನೀಡಲಾಗಿದ್ದು, ದೇಶ-ವಿದೇಶಗಳ ಪ್ರವಾಸಿ ಮಾರುಕಟ್ಟೆಯಲ್ಲಿ ರಾಜ್ಯದ ಪ್ರವಾಸೋದ್ಯಮ ಹೆಗ್ಗುರುತಾಗಿ ಇದನ್ನು ರೂಪಿಸಲಾಗಿದೆ.

ಮೊದಲ ‘ಪ್ರೈಡ್ ಆಫ್ ಕರ್ನಾಟಕ’ ಯಾತ್ರೆ ಸಂಪೂರ್ಣ ಭರ್ತಿ

ಐದು ರಾತ್ರಿ ಹಾಗೂ ಆರು ದಿನಗಳ ಮೊದಲ ‘ಪ್ರೈಡ್ ಆಫ್ ಕರ್ನಾಟಕ’ ಯಾತ್ರೆಗೆ ಭರ್ಜರಿ ಬೇಡಿಕೆ ವ್ಯಕ್ತವಾಗಿದ್ದು, ಶೇ. 100ರಷ್ಟು ಬುಕ್ಕಿಂಗ್ ಆಗಿದೆ. ಒಟ್ಟು 75 ಪ್ರವಾಸಿಗರು ಈ ಯಾತ್ರೆಯ ಐಷಾರಾಮಿ ಅನುಭವ ಪಡೆಯಲಿದ್ದು, ಅವರ ಸೇವೆ ಮತ್ತು ಆತಿಥ್ಯಕ್ಕಾಗಿ ರೈಲಿನಲ್ಲಿ ಸುಮಾರು 60 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಹಾಗೂ ಕೆಎಸ್‌ಟಿಡಿಸಿ ಅಧ್ಯಕ್ಷ ಎಂ. ಶ್ರೀನಿವಾಸ್ ಅವರು ಮೊದಲ ಯಾತ್ರೆಗೆ ಸಿಕ್ಕಿರುವ ಈ ಅದ್ಭುತ ಸ್ಪಂದನೆಯನ್ನು ಶ್ಲಾಘಿಸಿದ್ದು, ಇಡೀ ಪ್ರವಾಸಿ ಋತುವಿನಲ್ಲಿ ಇದೇ ರೀತಿಯ ಬೇಡಿಕೆಯನ್ನು ಮುಂದುವರಿಸಿಕೊಂಡು ಹೋಗುವ ಭರವಸೆ ವ್ಯಕ್ತಪಡಿಸಿದ್ದಾರೆ.

ಒಂದೇ ಪಯಣದಲ್ಲಿ ನಾಡಿನ ಬಹುಮುಖಿ ಸೌಂದರ್ಯ

ಈ ವಿಶೇಷ ಯಾತ್ರೆಯು ಪ್ರವಾಸಿಗರಿಗೆ ಕರ್ನಾಟಕದ ಅಪೂರ್ವ ವೈವಿಧ್ಯತೆಯನ್ನು ಕಣ್ತುಂಬಿಕೊಳ್ಳುವ ಅಪರೂಪದ ಅವಕಾಶವನ್ನು ಒದಗಿಸುತ್ತದೆ. ಬಂಡೀಪುರದ ವನ್ಯಜೀವಿ ಲೋಕ, ಮೈಸೂರಿನ ಗತವೈಭವ, ಬೇಲೂರು-ಹಳೇಬೀಡಿನ ಶಿಲ್ಪಕಲಾ ಶ್ರೀಮಂತಿಕೆ, ಚಿಕ್ಕಮಗಳೂರಿನ ಹಸಿರು ಹೊದಿಕೆಯ ಕಾಫಿ ತೋಟಗಳು, ಯುನೆಸ್ಕೋ ಮಾನ್ಯತೆಯ ವಿಶ್ವ ಪರಂಪರೆ ತಾಣ ಹಂಪಿ ಹಾಗೂ ಗೋವಾದ ಕರಾವಳಿ ಸೊಬಗಿನ ಇಂಡೋ-ಪೋರ್ಚುಗೀಸ್ ಸಂಸ್ಕೃತಿಯನ್ನು ಈ ಒಂದೇ ಯಾತ್ರೆಯಲ್ಲಿ ಪ್ರವಾಸಿಗರು ಆಸ್ವಾದಿಸಬಹುದಾಗಿದೆ.

ಆಧುನಿಕ ತಂತ್ರಜ್ಞಾನ ಮತ್ತು ಮೇಲ್ದರ್ಜೆಗೇರಿದ ಸೌಲಭ್ಯಗಳು

ಹೊಸ ಸಂಚಾರಕ್ಕೆ ಅಣಿಯಾಗುವ ಮುನ್ನ ಮೈಸೂರಿನ ವರ್ಕ್‌ಶಾಪ್‌ನಲ್ಲಿ 2026ರ ಮೇ ತಿಂಗಳಿಂದ ಆಗಸ್ಟ್‌ವರೆಗೆ ರೈಲಿನ ನಿಗದಿತ ನಿರ್ವಹಣಾ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ರೈಲಿನ ಹೊರಾಂಗಣ ವಿನ್ಯಾಸವನ್ನು ಆಕರ್ಷಕವಾಗಿ ಬದಲಾಯಿಸಲಾಗಿದ್ದು, ಅಡುಗೆ ಮತ್ತು ಅತಿಥಿ ಸತ್ಕಾರದ ವಿಭಾಗಗಳಿಗೆ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ಅಡುಗೆ ಕೋಣೆಗೆ ಕಾಂಬಿ ಓವನ್, ಸುಧಾರಿತ ಇಂಡಕ್ಷನ್ ಕುಕ್ಕಿಂಗ್ ವ್ಯವಸ್ಥೆ ಹಾಗೂ ಉನ್ನತ ಮಟ್ಟದ ಆರ್‌ಒ ನೀರಿನ ಶುದ್ಧೀಕರಣ ಘಟಕಗಳನ್ನು ಸೇರಿಸಿ ಪ್ರಯಾಣಿಕರ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಪ್ರಸಕ್ತ ಋತುವಿನಲ್ಲಿ ಒಟ್ಟು 13 ಐಷಾರಾಮಿ ಯಾತ್ರೆಗಳು

2026–27ರ ಪ್ರವಾಸಿ ಅವಧಿಯಲ್ಲಿ ಒಟ್ಟು 13 ಐಷಾರಾಮಿ ಯಾತ್ರೆಗಳನ್ನು ಆಯೋಜಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಇದರಲ್ಲಿ ಅತ್ಯಂತ ಜನಪ್ರಿಯವಾಗಿರುವ ‘ಪ್ರೈಡ್ ಆಫ್ ಕರ್ನಾಟಕ’ ಅಡಿಯಲ್ಲಿ 7 ಯಾತ್ರೆಗಳು, ‘ಗ್ಲಿಂಪ್ಸಸ್ ಆಫ್ ಕರ್ನಾಟಕ’ ಅಡಿಯಲ್ಲಿ 3 ಯಾತ್ರೆಗಳು ಮತ್ತು ‘ಜ್ಯುವೆಲ್ಸ್ ಆಫ್ ಸೌತ್’ ಅಡಿಯಲ್ಲಿ 3 ಯಾತ್ರೆಗಳು ಸಂಚರಿಸಲಿವೆ. ಈ ಮೂಲಕ ರಾಜ್ಯದ ಸಂಸ್ಕೃತಿ ಮತ್ತು ನೈಸರ್ಗಿಕ ಸೊಬಗನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಇಲಾಖೆ ಸಜ್ಜಾಗಿದೆ.

ಗೋಲ್ಡನ್ ಚಾರಿಯಟ್ 2026–27ರ ಪ್ರಯಾಣಕ್ಕಾಗಿ, ಅಧಿಕೃತ ಗೋಲ್ಡನ್ ಚಾರಿಯಟ್ ಮಾರ್ಗಗಳ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು.

ವೆಬ್‌ಸೈಟ್: www.goldenchariot.org

ಇಮೇಲ್: pd@goldenchariot.org / marketing@kstdc.co

ದೂರವಾಣಿ: +91 89706 50010

ಟೈಗರ್ ಶ್ರಾಫ್ ಮೇಲಿನ ದಾಳಿ ಬೆನ್ನಲ್ಲೇ ಸಲ್ಮಾನ್ ಖಾನ್ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ

Tags: Golden ChariotMinister K.J.Georgenew avatarOctober 24
Previous Post

ಟೈಗರ್ ಶ್ರಾಫ್ ಮೇಲಿನ ದಾಳಿ ಬೆನ್ನಲ್ಲೇ ಸಲ್ಮಾನ್ ಖಾನ್ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ

Next Post

ಶರಾವತಿ, ಮೇಕೆದಾಟು ಯೋಜನೆಗಳಿಗೆ ವನ್ಯಜೀವಿ ಮಂಡಳಿ ಅನುಮೋದನೆಗೆ ಸಿಎಂ ಡಿಕೆಶಿ ಮನವಿ

Related Posts

Peacock motif at Mysuru Dasara: Minister K.J. George lauds drone show that set a Guinness record
Top Story

ಮೈಸೂರು ದಸರಾದಲ್ಲಿ ನವಿಲಿನ ಚಿತ್ತಾರ: ಗಿನ್ನಿಸ್ ದಾಖಲೆ ಬರೆದ ಡ್ರೋನ್ ಪ್ರದರ್ಶನಕ್ಕೆ ಸಚಿವ ಕೆ.ಜೆ. ಜಾರ್ಜ್ ಶ್ಲಾಘನೆ

by ಪ್ರತಿಧ್ವನಿ
October 22, 2026
0

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESC) ಆಯೋಜಿಸಿದ್ದ ಬೃಹತ್ ಡ್ರೋನ್ ಪ್ರದರ್ಶನವು ಹೊಸ ಗಿನ್ನಿಸ್ ದಾಖಲೆ...

Read moreDetails
Firecrackers burst from midnight until dawn: Actress Ramya expresses outrage against Fun World

ಮಧ್ಯರಾತ್ರಿಯಿಂದ ಮುಂಜಾನೆವರೆಗೂ ಪಟಾಕಿ ಸಿಡಿತ  : ಫನ್ ವರ್ಲ್ಡ್ ವಿರುದ್ಧ ನಟಿ ರಮ್ಯಾ ಆಕ್ರೋಶ

October 22, 2026
CM, DK Shivakumar urge Wildlife Board to approve Sharavathi and Mekedatu projects

ಶರಾವತಿ, ಮೇಕೆದಾಟು ಯೋಜನೆಗಳಿಗೆ ವನ್ಯಜೀವಿ ಮಂಡಳಿ ಅನುಮೋದನೆಗೆ ಸಿಎಂ ಡಿಕೆಶಿ ಮನವಿ

October 22, 2026
Tight police security at Salman Khan's residence following the attack on Tiger Shroff

ಟೈಗರ್ ಶ್ರಾಫ್ ಮೇಲಿನ ದಾಳಿ ಬೆನ್ನಲ್ಲೇ ಸಲ್ಮಾನ್ ಖಾನ್ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ

October 22, 2026
South-East Graduates' Constituency: Vigorous campaigning in support of Congress candidate Shashi Hulikuntemath

ಪದವೀಧರರ ಧ್ವನಿಯಾಗಿ ಶಶಿ ಹುಲಿಕುಂಟೆಮಠ: ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಯುವ ನಾಯಕತ್ವದ ಭರವಸೆ

October 22, 2026
Next Post
CM, DK Shivakumar urge Wildlife Board to approve Sharavathi and Mekedatu projects

ಶರಾವತಿ, ಮೇಕೆದಾಟು ಯೋಜನೆಗಳಿಗೆ ವನ್ಯಜೀವಿ ಮಂಡಳಿ ಅನುಮೋದನೆಗೆ ಸಿಎಂ ಡಿಕೆಶಿ ಮನವಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada