ನವದೆಹಲಿ : ಕರ್ನಾಟಕದ ಪ್ರಮುಖ ಯೋಜನೆಗಳಾದ ಶರಾವತಿ ಪಂಪ್ಡ್ ಸ್ಟೋರೇಜ್ (Sharavati Pumped Storage) ಹಾಗೂ ಮೇಕೆದಾಟು (Mekedatu) ಯೋಜನೆಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಅನುಮೋದನೆ ನೀಡಬೇಕು ಹಾಗೂ ಕಸ್ತೂರಿ ರಂಗನ್ ವರದಿ ವಿಚಾರವಾಗಿ ಭೌತಿಕ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಕರಡು ಅಧಿಸೂಚನೆ ಅಂತಿಮಗೊಳಿಸಬೇಡಿ ಎಂದು ಸಿಎಂ ಡಿ ಕೆ ಶಿವಕುಮಾರ್ (CM D. K. Shivakumar) ಅವರು ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡುವಂತೆ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಯುವಂತೆ ವಿಸ್ತೃತ ಮನವಿ ಸಲ್ಲಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತ್ವರಿತ ಕ್ಲಿಯರೆನ್ಸ್
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾವನೆಯು 2026ರ ಫೆಬ್ರವರಿಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 89ನೇ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಈ ವೇಳೆ ತಾಂತ್ರಿಕ ಸಮಿತಿ ಕೇಳಿದ್ದ ಸ್ಪಷ್ಟನೆಗಳಿಗೆ ರಾಜ್ಯ ಸರ್ಕಾರವು ಸಮಗ್ರ ವಿವರಣೆ ನೀಡಿದೆ. ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (NIAS) ಸಂಸ್ಥೆಯ ತಾಂತ್ರಿಕ ವರದಿ ಸೇರಿದಂತೆ ಅಗತ್ಯವಿರುವ ಎಲ್ಲಾ ಪೂರಕ ದಾಖಲೆಗಳನ್ನು ಈಗಾಗಲೇ ಸಲ್ಲಿಸಲಾಗಿದ್ದು, ಯೋಜನೆಗೆ ತ್ವರಿತವಾಗಿ ಅನುಮತಿ ನೀಡಬೇಕೆಂದು ಮುಖ್ಯಮಂತ್ರಿಗಳು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
Met with Hon’ble Union Minister for Environment, Forest and Climate Change Shri Bhupender Yadav (@byadavbjp) in New Delhi to discuss key issues concerning Karnataka’s development and the welfare of our people.
I urged the Union Minister’s intervention on the following matters:
• Early consideration of the 2,000 MW Sharavathy Pumped Storage Project, for which Karnataka has submitted the required clarifications and NIAS report.
• Early consideration of the Mekedatu Balancing Reservoir and Drinking Water Project’s geo-technical survey proposal, which involves 20 boreholes and does not seek diversion of the protected area.
• Deferring the finalisation of the Western Ghats Ecologically Sensitive Area notification until Karnataka’s High-Level Committee submits its report and the physical survey is completed within a year.
• Removal of Eco Cane Sugar Energy Limited from the Eco-Sensitive Zone, keeping in mind that the factory predates 2016 and the livelihoods of over 500 workers and 5,000 families depend on it.
Karnataka’s progress must go hand in hand with the protection of our forests, the security of our water resources and the well-being of our people. Every decision must recognise the aspirations of our farmers, the concerns of local communities and the livelihoods of families who depend on these resources. We will continue to work towards a future where development and environmental responsibility move forward together, in the best interests of Karnataka and our people.
— DK Shivakumar (@DKShivakumar) October 22, 2026
ಮೇಕೆದಾಟು ಸಮೀಕ್ಷೆಗೆ ಹಸಿರು ನಿಶಾನೆ ನೀಡಲು ಕೋರಿಕೆ
ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಭೂ-ತಾಂತ್ರಿಕ ಸಮೀಕ್ಷೆಗಾಗಿ ಕಾವೇರಿ ವನ್ಯಜೀವಿ ಅಭಯಾರಣ್ಯದ ಅಲ್ಪ ವಿಸ್ತೀರ್ಣದಲ್ಲಿ (0.0000352 ಹೆಕ್ಟೇರ್) 20 ಬೋರ್‌ಹೋಲ್‌ಗಳನ್ನು ಕೊರೆಯಲು ಅನುಮತಿ ಕೋರಲಾಗಿದೆ. ಈ ಪ್ರಸ್ತಾವನೆಯು ಕೇವಲ ಸಮೀಕ್ಷೆ ಮತ್ತು ತನಿಖಾ ಹಂತಕ್ಕೆ ಮಾತ್ರ ಸೀಮಿತವಾಗಿದ್ದು, ಸಂರಕ್ಷಿತ ಅರಣ್ಯ ಭೂಮಿಯನ್ನು ಯೋಜನೆಗೆ ಬಳಸಿಕೊಳ್ಳುವ ಉದ್ದೇಶ ಸದ್ಯಕ್ಕಿಲ್ಲ. ಸರ್ವೋಚ್ಚ ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಚಿವಾಲಯಕ್ಕೆ ಶೀಘ್ರವೇ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅಧ್ಯಕ್ಷರ ನೆಲೆಯಲ್ಲಿ ಈ ಪ್ರಸ್ತಾವನೆಗೆ ಶೀಘ್ರ ಶಿಫಾರಸು ನೀಡಲು ಕೋರಿದರು.
ಕಸ್ತೂರಿ ರಂಗನ್ ವರದಿ: ಭೌತಿಕ ಸಮೀಕ್ಷೆ ಮುಗಿಯುವವರೆಗೆ ಕರಡು ಅಮಾನತಿನಲ್ಲಿಡಲು ಆಗ್ರಹ
ಕಸ್ತೂರಿ ರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯ (ESA) ಘೋಷಣೆಗೆ ಕೇಂದ್ರ ಹೊರಡಿಸಿರುವ ಏಳನೇ ಕರಡು ಅಧಿಸೂಚನೆಯನ್ನು ಸದ್ಯಕ್ಕೆ ಅಂತಿಮಗೊಳಿಸಬಾರದು ಎಂದು ಸಚಿವರಲ್ಲಿ ಒತ್ತಾಯಿಸಲಾಯಿತು. ಈ ವಿಚಾರವಾಗಿ ಈಗಾಗಲೇ ಪ್ರಧಾನಮಂತ್ರಿಗಳಿಗೂ ಪತ್ರ ಬರೆಯಲಾಗಿದೆ. ರಾಜ್ಯ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ವರದಿ ಬಂದ ನಂತರ, ಒಂದು ವರ್ಷದ ಅವಧಿಯಲ್ಲಿ ಭೌತಿಕ ಸಮೀಕ್ಷೆಯನ್ನು ಪೂರ್ಣಗೊಳಿಸಿ ರಾಜ್ಯದೊಂದಿಗೆ ಸಮಾಲೋಚನೆ ನಡೆಸಿದ ಮೇಲಷ್ಟೇ ಮುಂದಿನ ತೀರ್ಮಾನ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದರು.
ಎಕೊ ಕೇನ್ ಶುಗರ್ಸ್ ಕಾರ್ಖಾನೆಗೆ ಇಎಸ್ಝಡ್ನಿಂದ ವಿನಾಯಿತಿ ನೀಡಲು ಮನವಿ
ಬೆಳಗಾವಿಯ ಎಕೊ ಕೇನ್ ಶುಗರ್ ಅಂಡ್ ಎನರ್ಜಿ ಲಿಮಿಟೆಡ್ ಸಕ್ಕರೆ ಕಾರ್ಖಾನೆಯು 2016ಕ್ಕಿಂತ ಮೊದಲೇ ಸ್ಥಾಪನೆಯಾಗಿರುವುದರಿಂದ ಅದನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಈ ಕಾರ್ಖಾನೆಯಲ್ಲಿ 500ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದು, ಸುಮಾರು 5,000 ಕುಟುಂಬಗಳು ಜೀವನೋಪಾಯಕ್ಕಾಗಿ ಇದನ್ನು ಅವಲಂಬಿಸಿವೆ. ಈ ಭಾಗದ ಜನರ ಹಿತದೃಷ್ಟಿಯಿಂದ ಕಾರ್ಖಾನೆಗೆ ಸೂಕ್ತ ವಿನಾಯಿತಿ ನೀಡಬೇಕೆಂದು ಕೇಂದ್ರ ಸಚಿವರಿಗೆ ಮುಖ್ಯಮಂತ್ರಿಗಳು ಕೋರಿದರು.
ಅಕ್ಟೋಬರ್ 24ರಿಂದ ಹೊಸ ರೂಪದಲ್ಲಿ ‘ಗೋಲ್ಡನ್ ಚಾರಿಯಟ್’ ಸಂಚಾರ: ಸಚಿವ ಕೆ.ಜೆ. ಜಾರ್ಜ್ ಮಾಹಿತಿ






