• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BBK 12: ಮತ್ತೊಂದು ಅರುಣ್ ಸಾಗರ್ ಆಗ್ತಾರಾ ಗಿಲ್ಲಿ? ಜನಮೆಚ್ಚಿದ ಆಟಗಾರನಿಗೆ ರನ್ನರ್ ಅಪ್ ಪಟ್ಟನಾ..?

ಪ್ರತಿಧ್ವನಿ by ಪ್ರತಿಧ್ವನಿ
January 14, 2026
in Top Story, ಕರ್ನಾಟಕ, ಸಿನಿಮಾ
0
BBK 12: ಮತ್ತೊಂದು ಅರುಣ್ ಸಾಗರ್ ಆಗ್ತಾರಾ ಗಿಲ್ಲಿ? ಜನಮೆಚ್ಚಿದ ಆಟಗಾರನಿಗೆ ರನ್ನರ್ ಅಪ್ ಪಟ್ಟನಾ..?
Share on WhatsAppShare on FacebookShare on Telegram

ಬಿಗ್ ಬಾಸ್ ಕನ್ನಡ ಸೀಸನ್‌ 12(Boss Kannada season 12 )ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಸ್ಪರ್ಧಿಗಳ ಆಟ, ಅಭಿಮಾನಿಗಳ ಅಭಿಪ್ರಾಯ, ಸೋಶಿಯಲ್ ಮೀಡಿಯಾದ ಟ್ರೆಂಡ್ಸ್‌ ಎಲ್ಲವೂ ಫೈನಲ್ ಹಂತಕ್ಕೆ ಬರುವಾಗ ವಿನ್ನರ್‌ ವಿಚಾರದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಬಾರಿಯ ಬಿಗ್‌ ಬಾಸ್‌ ಒನ್‌ ಮ್ಯಾನ್‌ ಶೋ ಆಗಿದ್ದು, ಗಿಲ್ಲಿ ನಟ(Gilli Nata) ಸಂಪೂರ್ಣ ಶೋ ಆವರಿಸಿಕೊಂಡಿದ್ದರು.

ADVERTISEMENT
BIGG BOSS 12 :  ಬಿಗ್‌ ಬಾಸ್‌ ಮನೆಯಲ್ಲಿ ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌..! #pratidhvani

ಬಿಗ್‌ ಬಾಸ್‌ ಮನೆಯೊಳಗೆ ಗಿಲ್ಲಿ ಹವಾ ಸೋಶಿಯಲ್‌ ಮೀಡಿಯಾದದಲ್ಲಿ ಅವರ ಜನಪ್ರಿಯತೆ ಕಂಡು ಈ ಬಾರಿ ಗಿಲ್ಲಿಯೇ ವಿನ್ನರ್‌ ಎಂದು ಬಹುತೇಕರು ಅಂದುಕೊಂಡಿದ್ದರು. ಆದರೆ ಇದೀಗ ಆಟ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆ ಹೊಸ ಟ್ವಿಸ್ಟ್‌ ಎನ್ನುವಂತೆ ಗಿಲ್ಲಿ ವಿನ್ನರ್ ಬದಲು ರನ್ನರ್ ಅಪ್ ಆಗುತ್ತಾರಾ..? ಎನ್ನುವ ಅನುಮಾನ ವೀಕ್ಷರಲ್ಲಿ ಮೂಡಿದೆ. ಅಲ್ಲದೇ ಗಿಲ್ಲಿ ಇನ್ನೊಂದು ಅರುಣ್‌ ಸಾಗರ್‌ ಆಗುತ್ತಾರಾ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.

ಬಿಗ್ ಬಾಸ್ ಕನ್ನಡ ಸೀಸನ್ ಆರಂಭವಾದ ದಿನದಿಂದಲೂ ಒಂದು ಹೆಸರು ನಿರಂತರವಾಗಿ ಕೇಳಿ ಬರುತ್ತಿದೆ—ಅದೇ ಗಿಲ್ಲಿ ನಟ . ತಮ್ಮ ಸಹಜ ಹಾಸ್ಯ, ಸರಳ ವ್ಯಕ್ತಿತ್ವ ಮತ್ತು ಎಲ್ಲರೊಂದಿಗೆ ಬೆರೆತು ಹೋಗುವ ಗುಣದಿಂದ ಗಿಲ್ಲಿ ಮನೆ ಮನೆಯಮಾತಾಗಿದ್ದಾರೆ. ಗಂಭೀರ ಆಟಕ್ಕಿಂತ ಮನರಂಜನೆಯ ಮೂಲಕವೇ ಪ್ರೇಕ್ಷಕರ ಮನ ಗೆಲ್ಲುತ್ತಿರುವ ಗಿಲ್ಲಿ, ಬಿಗ್ ಬಾಸ್ ಮನೆಯೊಳಗೆ ನಗು, ನಲಿವು ತರಿಸುವ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.

Ramenahalli Jagannatha Interview : ಒಳ್ಳೆಯ ಕಥೆಗಳನ್ನು ಕನ್ನಡದ ಸ್ಟಾರ್‌ ನಟರು ಒಪ್ಪಲ್ವಾ..? Sandalwood |

ಹಾಸ್ಯ ನಟನಾಗಿ ಹಲವು ವರ್ಷಗಳಿಂದ ಕನ್ನಡ ಪ್ರೇಕ್ಷಕರನ್ನು ರಂಜಿಸಿರುವಗಿಲ್ಲಿ, ಈಗ ಬಿಗ್ ಬಾಸ್ ಮನೆಗೂ ಅದೇ ಮನರಂಜನೆ ತಂದುಕೊಟ್ಟಿದ್ದಾರೆ. ಟಾಸ್ಕ್‌ಗಳ ವೇಳೆ ಆಗಲಿ, ಸಾಮಾನ್ಯ ಮಾತುಕತೆಯಲ್ಲಾಗಲಿ, ಗಿಲ್ಲಿಯ ಕಾಮಿಡಿ ಟೈಮಿಂಗ್ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಅವರಿಗೆ ದೊಡ್ಡ ಅಭಿಮಾನಿ ಬಳಗ ನಿರ್ಮಾಣವಾಗಿದೆ.

ಸೋಷಿಯಲ್ ಮೀಡಿಯಾದಲ್ಲೂ ಗಿಲ್ಲಿ ಪರ ಬೆಂಬಲ ಜೋರಾಗಿದೆ. ‘ಗಿಲ್ಲಿಯೇ ವಿನ್ನರ್’, ‘ಈ ಬಾರಿ ಗಿಲ್ಲಿಗೆ ಕಪ್ ಬೇಕು’ ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ಅನೇಕ ವೀಕ್ಷಕರು, ಇಡೀ ಸೀಸನ್‌ನಲ್ಲಿ ನಿರಂತರವಾಗಿ ಮನರಂಜನೆ ನೀಡಿರುವ ಸ್ಪರ್ಧಿ ಗಿಲ್ಲಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಗಿಲ್ಲಿ ವಿಚಾರದಲ್ಲಿ ಹಳೆಯ ಇತಿಹಾಸವೊಂದು ಮತ್ತೆ ಚರ್ಚೆಗೆ ಬಂದಿದೆ. ಅದು 2013. ಬಿಗ್ ಬಾಸ್ ಕನ್ನಡದ ಮೊದಲ ಸೀಸನ್. ಕಿಚ್ಚ ಸುದೀಪ್ ಅವರ ಹೋಸ್ಟ್‌ನೊಂದಿಗೆ ಈಟಿವಿ ಕನ್ನಡದಲ್ಲಿ ಪ್ರಸಾರವಾಗಿದ್ದ ಈ ಮೊದಲ ಸೀಸನ್‌ನಲ್ಲಿ, ವಿಜಯ್ ರಾಘವೇಂದ್ರ ವಿನ್ನರ್ ಆಗಿ ಹೊರಹೊಮ್ಮಿದರು. ಅರುಣ್ ಸಾಗರ್ ರನ್ನರ್ ಅಪ್ ಆದರು. ಆದರೆ ವೀಕ್ಷಕರ ಬಹುಮತದ ಅಭಿಪ್ರಾಯವೇ ಬೇರೆ ಆಗಿತ್ತು. ಮೊಟ್ಟಮೊದಲ ಸೀಸನ್‌ನಲ್ಲಿಯೇ ಸಂಪೂರ್ಣ ಶೋ ಮನೋರಂಜನೆ ನೀಡಿದ್ದ ಅರುಣ್ ಸಾಗರ್ ನಿಜವಾದ ವಿನ್ನರ್ ಎಂಬುದು ವೀಕ್ಷಕರ ಅಭಿಪ್ರಾಯವಾಗಿತ್ತು. ಇಂದು ಅದೇ ಕಥೆ ಗಿಲ್ಲಿ ವಿಚಾರದಲ್ಲೂ ಮರುಕಳಿಸುತ್ತಿದೆಯೇ? ಅರುಣ್ ಸಾಗರ್ ಅವರಂತೆ, ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದ್ದರೂ, ಕೊನೆ ಕ್ಷಣದಲ್ಲಿ ಬಿಗ್ ಬಾಸ್ ಕಿರೀಟ ಗಿಲ್ಲಿ ಕೈತಪ್ಪುತ್ತದೆಯೇ, ಗಿಲ್ಲಿ ಇನ್ನೊಂದು ಅರುಣ್‌ ಸಾಗರ್‌ ಆಗುತ್ತಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಈ ಅನುಮಾನ ಹುಟ್ಟಿಸಿದ ಮಹತ್ವದ ಬೆಳವಣಿಗೆ ಎಂದರೆ, ಕಳೆದ ವಾರಾಂತ್ಯದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ‘ಸೀಸನ್ ಚಪ್ಪಾಳೆ’ಯನ್ನು ಧ್ರುವಂತ್ ಅವರಿಗೆ ನೀಡಿದ್ದು. ಇದು ಗಿಲ್ಲಿ ಅಭಿಮಾನಿಗಳಿಗೆ ಸ್ವಲ್ಪ ನಿರಾಶೆ ತಂದಿದೆ. ಏಕೆಂದರೆ ಇಡೀ ಸೀಸನ್ ಉದ್ದಕ್ಕೂ ಮನರಂಜನೆಯ ಹೊಣೆ ಹೊತ್ತಿದ್ದವರು ಗಿಲ್ಲಿ ಎನ್ನುವುದು ಅವರ ವಾದ. ಹೀಗಾಗಿ ವಾಹಿನಿ ಹಾಗೂ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್‌ ವಿರುದ್ಧ ನೇರವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

BIGG BOSS 12 :  ಬಿಗ್‌ ಬಾಸ್‌ನಲ್ಲಿ ಗಿಲ್ಲಿಗೆ ಅನ್ಯಾಯ.? ಕಿಚ್ಚ ಸುದೀಪ್‌ ವಾಹಿನಿ ವಿರುದ್ಧ ಸಿಡಿದೆದ್ದ ಫ್ಯಾನ್ಸ್‌

ಸಾಮಾನ್ಯವಾಗಿ ಕಿಚ್ಚನ ಚಪ್ಪಾಳೆ ಅಂದ್ರೆ ಕೇವಲ ಒಂದು ವಾರದ ಪ್ರದರ್ಶನಕ್ಕೆ ಸೀಮಿತವಾಗಿರುತ್ತಿತ್ತು. ಆದರೆ ಈ ಬಾರಿ ಇಡೀ ಸೀಸನ್‌ಗೆ ಒಟ್ಟಾಗಿ ಪ್ರಶಂಸೆ ನೀಡಲಾಗಿದೆ. ಇದೇ ವಿಚಾರ ಗಿಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ #JusticeForGilli, #GilliDeservesCup ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ಈ ಮೂಲಕ ಗಿಲ್ಲಿಯ ಜನಪ್ರಿಯತೆಯನ್ನು ಕಡಿಮೆ ಮಾಡಿ ತಮ್ಮಿಷ್ಟದ ಸ್ಪರ್ಧಿಯನ್ನು ಗೆಲ್ಲಿಸುವ ಹುನ್ನಾರವನ್ನು ವಾಹಿನಿ ಮಾಡುತ್ತಿದೆ ಎನ್ನುವ ಆರೋಪ ಜೋರಾಗಿದೆ.

Gilli Nata bigg boss 12 : ಗೆಲುವಿನ ಹಾದಿಯಲ್ಲಿ ಗಿಲ್ಲಿ.. ಕಾಮಿಡಿ ಕಿಂಗ್‌ನ ಆಟದ ಗುಟ್ಟೇನು..? #pratidhvani

ವಾಸ್ತವವೆಂದರೆ ಗಿಲ್ಲಿಗೆ ರಿಯಾಲಿಟಿ ಶೋಗಳಲ್ಲೊಂದು ವಿಚಿತ್ರ ಇತಿಹಾಸವಿದೆ. ಅವರು ಭಾಗವಹಿಸಿದ ಹಲವಾರು ಶೋಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಅಂತಿಮ ಗೆಲುವು ಮಾತ್ರ ಸಿಗದೆ, ರನ್ನರ್ ಅಪ್ ಸ್ಥಾನಕ್ಕೆ ಸೀಮಿತವಾಗಿದ್ದಾರೆ. ಆದರೆ ಈ ಬಾರಿ ಬಿಗ್‌ ಬಾಸ್‌ನಲ್ಲಿ ಅವರು ವಿನ್‌ ಆಗಲೇ ಬೇಕು. ಯಾವುದೇ ಕಾರಣಕ್ಕೂ ಯಾವ ಇತಿಹಾಸ ಮರುಕಳಿಸಬಾರದು ಎಂದು ಅಭಿಮಾನಿಗಳು ಬಿಗ್‌ ಬಾಸ್‌ ತಂಡಕ್ಕೆ ಮನವಿ ಮಾಡುತ್ತಿದ್ದಾರೆ.

Tags: BBKbbk 12Bigg Bossbigg boss kannadabigg boss kannada 12Gilli NataKannadakannada news
Previous Post

BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ

Next Post

500 ಬೀದಿ ನಾಯಿ ಕೊಂ* ಗ್ರಾಮಸ್ಥರು : 15 ಮಂದಿ ವಿರುದ್ಧ ಕೇಸ್ ದಾಖಲು

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post
500 ಬೀದಿ ನಾಯಿ ಕೊಂ* ಗ್ರಾಮಸ್ಥರು : 15 ಮಂದಿ ವಿರುದ್ಧ ಕೇಸ್ ದಾಖಲು

500 ಬೀದಿ ನಾಯಿ ಕೊಂ* ಗ್ರಾಮಸ್ಥರು : 15 ಮಂದಿ ವಿರುದ್ಧ ಕೇಸ್ ದಾಖಲು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada