• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ

ಪ್ರತಿಧ್ವನಿ by ಪ್ರತಿಧ್ವನಿ
January 14, 2026
in Top Story, ಕರ್ನಾಟಕ, ಸಿನಿಮಾ
0
BBK 12: ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯಲು ಬರಲ್ಲ-ಅಶ್ವಿನಿ ಗೌಡ ವಿರುದ್ಧ ಭಾರೀ ಟೀಕೆ
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ಕನ್ನಡದ ವಿಚಾರದಲ್ಲಿ ಸದಾ ಧ್ವನಿ ಎತ್ತುತ್ತಾ ಬಂದಿರುವ ಬಿಗ್‌ಬಾಸ್ ಕನ್ನಡ ಸ್ಪರ್ಧಿ ಅಶ್ವಿನಿ ಗೌಡ ಇದೀಗ ಫಿನಾಲೆ ವೀಕ್ ಟಾಸ್ಕ್‌ನಲ್ಲಿ ಮಾಡಿದ ತಪ್ಪಿನಿಂದ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ. ಸೋಮವಾರ ಪ್ರಸಾರವಾದ ಬಿಗ್‌ಬಾಸ್ ಎಪಿಸೋಡ್‌ನಲ್ಲಿ ನೀಡಲಾಗಿದ್ದ ವಿಶೇಷ ಟಾಸ್ಕ್ ವೇಳೆ, ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಸೋಶಿಯಲ್ ಮೀಡಿಯಾ ಹ್ಯಾಶ್‌ಟ್ಯಾಗ್ ಬರೆಯುವಾಗ ಅಶ್ವಿನಿ ಕನ್ನಡದ ಕೆಲ ಪದಗಳನ್ನು ತಪ್ಪಾಗಿ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.

BIGG BOSS 12 :  ಬಿಗ್‌ ಬಾಸ್‌ ಮನೆಯಲ್ಲಿ ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌..! #pratidhvani

ಫಿನಾಲೆ ವೀಕ್‌ಗೆ ಕಾಲಿಟ್ಟಿರುವ ಸ್ಪರ್ಧಿಗಳಿಗೆ ಬಿಗ್‌ಬಾಸ್ ಒಂದು ವಿಭಿನ್ನ ಟಾಸ್ಕ್ ನೀಡಿದ್ದರು. ಅದರಂತೆ, ಪ್ರತಿ ಸ್ಪರ್ಧಿಯೂ ತಮ್ಮ ಆಟ, ವ್ಯಕ್ತಿತ್ವ ಹಾಗೂ ಜನಪ್ರಿಯತೆಯನ್ನು ಪ್ರತಿಬಿಂಬಿಸುವ ಹ್ಯಾಶ್‌ಟ್ಯಾಗ್‌ನ್ನು ಬೋರ್ಡ್ ಮೇಲೆ ಸ್ವತಃ ಬರೆಯಬೇಕಿತ್ತು. ಈ ವೇಳೆ ರಕ್ಷಿತಾ ಅವರು ತಮ್ಮನ್ನು #ಪಟಾಕಿರಕ್ಷಿತಾ, ಕಾವ್ಯ ಖದರ್‌ ಕಾವ್ಯ ಎಂದು ಗುರುತಿಸಿಕೊಳ್ಳಲು ಬಯಸಿದರೆ, ಅಶ್ವಿನಿ ಗೌಡ ತಮ್ಮ ಗೇಮ್‌ನ್ನು ಗಮನಿಸಿ ಜನರು ತಮ್ಮನ್ನು ಛಲಗಾರ್ತಿ ಅಶ್ವಿನಿ ಎಂದು ಕರೆಯಬೇಕು ಎಂದು ಅಭಿಪ್ರಾಯಪಟ್ಟರು.

ಆದರೆ, ಬೋರ್ಡ್ ಮೇಲೆ ಬರೆಯುವ ವೇಳೆ ‘ಛಲಗಾರ್ತಿ’ ಪದವನ್ನು ತಪ್ಪಾಗಿ ಬರೆಯಲಾಗಿದ್ದು, ಮೊದಲಿಗೆ ‘ಚಲಗಾರ್ಥಿ’ ಎಂದು ಬರೆದು ನಂತರ ಅದನ್ನು ತಿದ್ದಿ ‘ಚಲಗಾರ್ತಿ’ ಎಂದು ಬರೆಯಲಾಗಿದೆ. ಕನ್ನಡ ಭಾಷೆಯ ಸರಿಯಾದ ಪದ ‘ಛಲಗಾರ್ತಿ’ ಆಗಿದ್ದು, ‘ಚ’ ಬದಲು ‘ಛ’ ಬಳಕೆ ಅಗತ್ಯವಾಗಿತ್ತು. ಈ ತಪ್ಪು ತಿದ್ದಲಾಗದೇ ಉಳಿದಿರುವುದು ವೀಕ್ಷಕರ ಗಮನ ಸೆಳೆದಿದೆ.

BIGG BOSS 12 :  ಬಿಗ್‌ ಬಾಸ್‌ನಲ್ಲಿ ಗಿಲ್ಲಿಗೆ ಅನ್ಯಾಯ.? ಕಿಚ್ಚ ಸುದೀಪ್‌ ವಾಹಿನಿ ವಿರುದ್ಧ ಸಿಡಿದೆದ್ದ ಫ್ಯಾನ್ಸ್‌

ಇಷ್ಟೇ ಅಲ್ಲದೆ, ಹ್ಯಾಶ್‌ಟ್ಯಾಗ್‌ನಲ್ಲಿ ಮತ್ತೊಂದು ತಪ್ಪು ಕಂಡುಬಂದಿದೆ. #ಹಠವಾದಿ_ಅಶ್ವಿನಿ ಎಂದು ಬರೆಯಬೇಕಿದ್ದಲ್ಲಿ, #ಹಠವಾಧಿಅಶ್ವಿನಿ ಎಂದು ಬರೆಯಲಾಗಿದೆ. ‘ಧ’ ಬಳಕೆಯೂ ತಪ್ಪಾಗಿದ್ದು, ಇದರಿಂದ ಕನ್ನಡ ಭಾಷೆಯ ಮೇಲಿನ ಅಶ್ವಿನಿಯ ಹಿಡಿತದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಕನ್ನಡ ಪರ ಹೋರಾಟಗಾರ್ತಿ ಎಂದು ತಮನ್ನು ಪರಿಚಯಿಸಿಕೊಳ್ಳುವ ಅಶ್ವಿನಿ ಗೌಡ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಗೌರವಾಧ್ಯಕ್ಷೆಯಾಗಿರುವ ಹಿನ್ನೆಲೆಯಲ್ಲಿ, ಈ ತಪ್ಪುಗಳು ಮತ್ತಷ್ಟು ಟೀಕೆಗೆ ಕಾರಣವಾಗಿವೆ. ಕನ್ನಡದ ಹೋರಾಟದ ಮಾತು ಹೇಳುವವರಿಗೆ ಕನ್ನಡವೇ ಸರಿಯಾಗಿ ಬರೆಯಲು ಬರೋದಿಲ್ಲವೇ? ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಬಿಗ್‌ಬಾಸ್ ಫಿನಾಲೆ ವಾರದಲ್ಲಿ ಈ ಸಣ್ಣ ಟಾಸ್ಕ್ ಅಶ್ವಿನಿ ಗೌಡ ಅವರ ಕನ್ನಡ ಭಾಷೆಯ ಜ್ಞಾನ ಹಾಗೂ ಕನ್ನಡ ಪರ ಹೋರಾಟದ ನಿಜಾಸತ್ಯದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಅಶ್ವಿನಿ ಈ ಟೀಕೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Gilli Nata bigg boss 12 : ಗೆಲುವಿನ ಹಾದಿಯಲ್ಲಿ ಗಿಲ್ಲಿ.. ಕಾಮಿಡಿ ಕಿಂಗ್‌ನ ಆಟದ ಗುಟ್ಟೇನು..? #pratidhvani
Tags: Ashwini GowdaBBKbbk 12Bigg Bossbigg boss kannadabigg boss kannada 12Kannada
Previous Post

ನಡುರಸ್ತೆಯಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ

Next Post

BBK 12: ಮತ್ತೊಂದು ಅರುಣ್ ಸಾಗರ್ ಆಗ್ತಾರಾ ಗಿಲ್ಲಿ? ಜನಮೆಚ್ಚಿದ ಆಟಗಾರನಿಗೆ ರನ್ನರ್ ಅಪ್ ಪಟ್ಟನಾ..?

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post
BBK 12: ಮತ್ತೊಂದು ಅರುಣ್ ಸಾಗರ್ ಆಗ್ತಾರಾ ಗಿಲ್ಲಿ? ಜನಮೆಚ್ಚಿದ ಆಟಗಾರನಿಗೆ ರನ್ನರ್ ಅಪ್ ಪಟ್ಟನಾ..?

BBK 12: ಮತ್ತೊಂದು ಅರುಣ್ ಸಾಗರ್ ಆಗ್ತಾರಾ ಗಿಲ್ಲಿ? ಜನಮೆಚ್ಚಿದ ಆಟಗಾರನಿಗೆ ರನ್ನರ್ ಅಪ್ ಪಟ್ಟನಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada