ಬೆಂಗಳೂರು : ದೇಶಾದ್ಯಂತ ಇಂದು ಬೆಳಂಬೆಳಿಗ್ಗೆ ವಾಹನ ಸವಾರರಿಗೆ ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ಏರಿಕೆಯ ಬಿಸಿ ತಟ್ಟಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿಯೇ ಇಂಧನ ಕಂಪನಿಗಳು ಮೂರನೇ ಬಾರಿಗೆ ಇಂಧನ ದರವನ್ನು ಅಧಿಕ ಮಾಡಿವೆ. ಹೀಗಾಗಿ ಪ್ರತಿ ಲೀಟರ್ ಇಂಧನ ಬೆಲೆಯಲ್ಲಿ ಗರಿಷ್ಠ 91 ಪೈಸೆವರೆಗೆ ಏರಿಕೆ ಕಂಡಿದ್ದು, ಗ್ರಾಹಕರ ಜೇಬನ್ನು ಸುಡುತ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 87 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ಅಲ್ಲಿ 98.64 ರೂಪಾಯಿಯಿಂದ 99.51 ರೂಪಾಯಿಗಳಷ್ಟು ದರವಿದೆ. ಅಲ್ಲದೆ, ಡೀಸೆಲ್ ಬೆಲೆಯು ಲೀಟರ್ಗೆ 91 ಪೈಸೆ ಏರಿಕೆ ಕಂಡಿದ್ದು,, 91.58 ರೂಪಾಯಿಯಿಂದ 92.49 ರೂಪಾಯಿಗೆ ಜಿಗಿತ ಕಂಡಿದೆ.
ಇನ್ನೂ ಪ್ರಮುಖವಾಗಿ ಮೇ 15 ರಿಂದ ಇತ್ತೀಚೆಗೆ ತೈಲ ದರ ಪರಿಷ್ಕರಣೆ ಆರಂಭವಾದ ಬಳಿಕ ಇದು ಕೆಲವೇ ದಿನಗಳಲ್ಲಿ ನಡೆದಿರುವ ಮೂರನೇಯ ಸರಣಿ ಬೆಲೆ ಏರಿಕೆಯಾಗಿದೆ. ಮೇ 15 ರಂದು ಬೆಲೆಗಳನ್ನು ಲೀಟರ್ಗೆ 3 ರೂ. ಹೆಚ್ಚಿಸಲಾಯಿತು. ನಂತರ ಮೇ 19 ರಂದು 90 ಪೈಸೆ ಹೆಚ್ಚಳವಾಯಿತು. ಒಟ್ಟಾರೆಯಾಗಿ, ದರಗಳು ಲೀಟರ್ಗೆ ಸುಮಾರು 5 ರೂ.ಗಳಷ್ಟು ಹೆಚ್ಚಾಗಿದೆ.
ಎಲ್ಲೆಲ್ಲಿ ದರ ಎಷ್ಟು?
ಪೆಟ್ರೋಲ್
ದೆಹಲಿ: 99.51 (+0.87)
ಕೋಲ್ಕತ್ತಾ: 110.64 (+0.94)
ಮುಂಬೈ: 108.49 (+0.90)
ಚೆನ್ನೈ: 105.31 (+0.82)
ಇದನ್ನೂ ಓದಿ : ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ
ಡೀಸೆಲ್
ದೆಹಲಿ: 92.49 (+0.91)
ಕೋಲ್ಕತ್ತಾ: 97.02 (+0.95)
ಮುಂಬೈ: 95.02 (+0.94)
ಚೆನ್ನೈ: 96.98 (+0.87)
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ತೀವ್ರವಾಗಿ ಏರುತ್ತಿವೆ. ಇದರ ಪರಿಣಾಮವಾಗಿ ಉಂಟಾಗಿರುವ ತೈಲ ಬೆಲೆ ಏರಿಕೆಯ ಹೊರೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಂತಹಂತವಾಗಿ ಗ್ರಾಹಕರಿಗೆ ವರ್ಗಾಯಿಸಲು ಆರಂಭಿಸಿವೆ.





