• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಡಿಸೆಂಬರ್ 10ಕ್ಕೆ ವಿಧಾನಪರಿಷತ್ನ 25 ಸ್ಥಾನಗಳಿಗೆ ಚುನಾವಣೆ; ಮೂರು ಪಕ್ಷಗಳಿಂದ ಭಾರೀ ಸಿದ್ಧತೆ

ನಚಿಕೇತು by ನಚಿಕೇತು
November 17, 2021
in ಕರ್ನಾಟಕ, ರಾಜಕೀಯ
0
ಡಿಸೆಂಬರ್ 10ಕ್ಕೆ ವಿಧಾನಪರಿಷತ್ನ 25 ಸ್ಥಾನಗಳಿಗೆ ಚುನಾವಣೆ; ಮೂರು ಪಕ್ಷಗಳಿಂದ ಭಾರೀ ಸಿದ್ಧತೆ
Share on WhatsAppShare on FacebookShare on Telegram

ಎರಡು ಕ್ಷೇತ್ರಗಳ ಉಪಕದನದ ಬಳಿಕ ರಾಜ್ಯ ಮತ್ತೊಂದು ಮಿನಿ ಸಮರಕ್ಕೆ ರೆಡಿಯಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ವಿಧಾನಪರಿಷತ್ ಪ್ರವೇಶಿಸಿದ್ದ  ಸದಸ್ಯರ ಅವಧಿ ಮುಗಿಯೋದಕ್ಕೆ ಎರಡು ತಿಂಗಳು ಬಾಕಿ ಇರುವಂತೆಯೇ ಮುಂದಿನ ತಿಂಗಳು ಚುನಾವಣೆ ಘೋಷಿಸಲಾಗಿದೆ. ಮೇಲ್ಮನೆ ಸೀಟು ಗೆಲ್ಲಲು ಇದೀಗ ಭರ್ಜರಿ ತಯಾರಿ ನಡೀತಿದೆ.

ADVERTISEMENT

ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ವಿಧಾನಪರಿಷತ್‌ ಪ್ರವೇಶಿಸಿ ಸದಸ್ಯರಾಗಿದ್ದ 25 ಮಂದಿಯ ಅಧಿಕಾರದ ಅವಧಿ ಮುಂದಿನ ವರ್ಷದ ಜನವರಿ 5ಕ್ಕೆ ಮುಕ್ತಾಯವಾಗಲಿದೆ. ಇದೇ ಕಾರಣಕ್ಕಾಗಿ ಚುನಾವಣಾ ಆಯೋಗ, ಅಧಿಕಾರದ ಅವಧಿ ಮುಕ್ತಾಯವಾಗುವ ಮುನ್ನವೇ, 25 ಸ್ಥಾನಗಳಿಗೂ ನಿನ್ನೆಯೇ ಚುನಾವಣಾ ಅಧಿಸೂಚನೆಯನ್ನು ಹೊರಡಿಸಿ ಆದೇಶಿಸಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌‌ಗೆ 25 ಮಂದಿ ನೂತನ ಸದಸ್ಯರ ಆಯ್ಕೆಯಾಗಬೇಕಿದ್ದು, ಆಕಾಂಕ್ಷಿಗಳು ನಾಮಪತ್ರ ಸಲ್ಲಿಕೆ ಮಾಡಲು ನವೆಂಬರ್ 23 ಕೊನೆಯ ದಿನವಾಗಿದೆ. ನವೆಂಬರ್ 24 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿಸೆಂಬರ್ 10 ರಂದು ಮತದಾನ ಹಾಗೂ 14 ರಂದು ಫಲಿತಾಂಶ ಘೋಷಣೆಯಾಗಲಿದೆ. ಇನ್ನು ವಿಧಾನಪರಿಷತ್‌‌ನ ಒಟ್ಟು ಸ್ಥಾನಗಳು 75 ಆಗಿದ್ದು, ಈ ಪೈಕಿ ಡಿಸೆಂಬರ್ 10 ರಂದು 25 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಇನ್ನು ವಿಧಾನಪರಿಷತ್ನಲ್ಲಿ ಪಕ್ಷಗಳ ಒಟ್ಟಾರೆ ಬಲಾಬಲ ಹೀಗಿದೆ.  ಸದ್ಯ ವಿಧಾನಪರಿಷತ್‌ ಸದಸ್ಯರ ಪೈಕಿ ಬಿಜೆಪಿಯಿಂದ 32, ಕಾಂಗ್ರೆಸ್‌ನಿಂದ 29, ಜೆಡಿಎಸ್‌‌ನಿಂದ 13 ಹಾಗೂ ಪಕ್ಷೇತರರಾಗಿ 1 ಸದಸ್ಯರು ಹೀಗೆ ಒಟ್ಟು 75 ಸದಸ್ಯರು ಮೇಲ್ಮನೆಯಲ್ಲಿದ್ದಾರೆ.

ಈ 75 ಸದಸ್ಯರ ಪೈಕಿ 2022ರ ಜನವರಿ 5 ಕ್ಕೆ 25 ಸದಸ್ಯರ ಅಧಿಕಾರ ಮುಕ್ತಾಯವಾಗುತ್ತಿದ್ದು, ಹೊಸ ಸದಸ್ಯರ ಆಯ್ಕೆ ಡಿಸೆಂಬರ್ 10 ರಂದೇ ಆಗಲಿದೆ. ಸದ್ಯ ವಿಧಾನಪರಿಷತ್‌‌ನಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟವಾದ ಬಹುಮತವಿಲ್ಲ. ಆದ್ರೆ ಜೊತೆಗೆ ವಿಧಾನಸಭೆಯಲ್ಲಿ ಯಾರು ಅಧಿಕಾರ ಹಿಡಿಯುತ್ತಾರೋ, ಅವರೇ ಸಹಜವಾಗಿ ಮೇಲ್ಮನೆಯಲ್ಲೂ ಅಧಿಕಾರದ ಗಾದಿಯಲ್ಲಿ ಇರುತ್ತಾರೆ.

ಇನ್ನು ಕಾಂಗ್ರೆಸ್‌ನ 14, ಬಿಜೆಪಿಯ 6, ಜೆಡಿಎಸ್‌‌ನ 4 ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಹೀಗೆ ವಿಧಾನಪರಿಷತ್ನ 25 ಸದಸ್ಯರ ಅವಧಿ ಅಂತ್ಯವಾಗಲಿದೆ.


ಇನ್ನು ವಿಧಾನಪರಿಷತ್ನ  25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗ್ತಿದ್ದಂತೆ ತೆರೆಮರೆಯಲ್ಲೇ ಪಕ್ಷಾಂತರ ಪರ್ವ ಶುರುವಾಗಿದೆ. ಜೆಡಿಎಸ್‌‌ ಸದಸ್ಯರಾಗಿರೋ ಸಂದೇಶ್ ನಾಗರಾಜ್ ಹಾಗೂ ಸಿ.ಆರ್. ಮನೋಹರ್ ಬಿಜೆಪಿ ಕದ ತಟ್ಟಿದ್ದಾರೆ. ಇನ್ನು ಯಾರಿಗೆಲ್ಲಾ ಟಿಕೆಟ್ ಎಂಬುದು ಸದ್ಯದಲ್ಲೇ ಘೋಷಣೆಯಾಗಲಿದ್ದು, ಡಿಸೆಂಬರ್ 10 ಕ್ಕಂತೂ 25 ವಿಧಾನಪರಿಷತ್‌ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 14 ರಂದು ಫಲಿತಾಂಶ ಹೊರಬೀಳಲಿದೆ

Tags: BJPCongress PartyJDSಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಬಿಟ್ ಕಾಯಿನ್ ಕೇಸ್: ಹ್ಯಾಕರ್ ಶ್ರೀಕಿ ಬಗ್ಗೆ ಮೋದಿಗೆ ಕಂಪ್ಲೈಂಟ್; ದೂರಿನಲ್ಲಿ ಏನಿದೆ?

Next Post

ಸಚಿವ ಎಸ್. ಟಿ ಸೋಮಶೇಖರ್‌ ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆ! ಎಲ್ಲಿದ್ದೀರಿ ಜನಪ್ರತಿನಿಧಿಗಳೇ?

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
Next Post
ಸಚಿವ ಎಸ್. ಟಿ ಸೋಮಶೇಖರ್‌ ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆ! ಎಲ್ಲಿದ್ದೀರಿ ಜನಪ್ರತಿನಿಧಿಗಳೇ?

ಸಚಿವ ಎಸ್. ಟಿ ಸೋಮಶೇಖರ್‌ ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆ! ಎಲ್ಲಿದ್ದೀರಿ ಜನಪ್ರತಿನಿಧಿಗಳೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada