ಕಳೆದ ಕೆಲ ತಿಂಗಳ ಹಿಂದೆ ಅಕ್ರಮ ಆಸ್ತಿಗಳಿಕೆ ಹಾಗೂ ಹಣ ವರ್ಗಾವಣೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಸಚಿವ ಎನ್ಸಿಪಿ ನಾಯಕ ನವಾಬ್ ಮಲ್ಲಿಕ್ ಅವರಿಗೆ ಸೇರಿದ ಎಂಟು ಆಸ್ತಿಗಳನ್ನು ಜಾರಿ ನಿರ್ದೇಶಾನಲಯ ಜಪ್ತಿ ಮಾಡಿದೆ.
ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದ ಹಿರಿಯ ಸಚಿವ ನವಾಬ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಫೆಬ್ರವರಿ 23ರಂದು ಜಾರಿ ನಿರ್ದೇಶಾನಲಯ ನವಾಬ್ರನ್ನು ವಶಕ್ಕೆ ಪಡೆದಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಜಾರಿ ನಿರ್ದೇಶಾನಲಯ ʻʻED ತಾತ್ಕಾಲಿಕವಾಗಿ ಮೊಹಮ್ಮದ್ ಇಸ್ಲಾಂ ಮಲಿಕ್ ಅಲಿಯಾಸ್ ನವಾಬ್ ಮಲಿಕ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ಒಟ್ಟು 8 ಅಸ್ತಿಗಳನ್ನು PMLA 2002 ಕಯ್ದೆಯಡಿ ಜಪ್ತಿ ಮಾಡಲಾಗಿದೆʼʼಎಂದು ಟ್ವೀಟ್ ಮಾಡಿದೆ.






