ದೆಹಲಿಯ ಶಾಹೀನ್ ಬಾಗ್ ನಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವಿರುದ್ದ CPI(M) ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ರಾಜಕೀಯ ಪಕ್ಷವೊಂದು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ವಿಚಾರವಾಗಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರಿಗೆ ಚಾಟಿ ಬೀಸಿದೆ.
ಅರ್ಜಿದಾರರ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ್ ರಾವ್ ಹಾಗೂ ಬಿ.ಆರ್.ಗವಾಯಿ ಇದ್ದ ದ್ವಿಸದಸ್ಯ ಪೀಠವು ದೆಹಲಿ ಹೈಕೋರ್ಟ್ಗೆ ಹೋಗುವಂತೆ ಸೂಚಿಸಿದೆ.
ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆ ವಿಚಾರವಾಗಿ CPI(M) ಅರ್ಜಿ ಸಲ್ಲಿಸುತ್ತಿದೆ ಇಲ್ಲಿ ಪ್ರಸ್ತುತ ಉಲ್ಲಂಘನೆಯಾಗುತ್ತಿರುವ ಮೂಲಭೂತ ಹಕ್ಕು ಯಾವುದು ನೀವು ಹೇಳಿದ ತಕ್ಷಣ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಒಂದು ವೇಳೆ ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಣ ಮಾಡಿದ್ದರೆ ಅದನ್ನು ಕಾರ್ಯಾಚರಣೆ ಮೂಲಕ ತೆರವು ಮಾಡಬೇಕು. ಒಂದು ವೇಳೆ ಅಧಿಕಾರಿಗಳು ಕಾನೂನು ಉಲ್ಲಂಘಿಸಿದರೆ ಅರ್ಜೀದಾರರು ಮೊದಲು ಹೈಕೋರ್ಟ್ಗೆ ಹೋಗಬೇಕು ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ ನೋಟಿಸ್ ನೀಡಿಯೇ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅರ್ಜಿದಾರರ ಪರ ವಕೀಲ ಸುರೇಂದ್ರನಾಥ್ ಜಹಾಂಗೀರ್ಪುರಿ, ತೆರವು ಕಾರ್ಯಾಚರಣೆ ವೇಳೆ ನ್ಯಾಯಾಲಯ ತಡೆ ಆದೇಶವನ್ನ ನೀಡಿದ್ದನ್ನ ಉಲ್ಲೇಖಿಸಿದ್ದರು ಇದಕ್ಕೆ ಆಕ್ಷೇಪಿಸಿದ ನ್ಯಾಯಾಲಯ ಒಂದು ವೇಳೆ ಅಗತ್ಯವಿದ್ದರೆ ಸಂತ್ರಸ್ತರು ಬಂದು ಅರ್ಜಿ ಸಲ್ಲಿಸಲಿ ಎಂದು ಹೇಳಿದೆ.
ನನ್ನ ಮನೆ ಅನಧಿಕೃತವಾಗಿ ಕಟ್ಟಿದ್ದರು ಸಹ ನಾನು ಇಲ್ಲಿಗೆ ಬಂದು ಅದನ್ನು ಕೆಡವಬಾರದು ಎಂದು ಹೇಳಲು ನಾವು ಯಾರಿಗೂ ಪರವಾನಗಿ ನೀಡಿಲ್ಲ. ನೀವು ಹಿಂದೆ ನೀಡಿದ ಆದೇಶವನ್ನು ಉಲ್ಲೇಖಿಸಲು ಸಾಧ್ಯವಿಲ್ಲ ಅದರಲ್ಲು ರಾಜಕೀಯ ಪಕ್ಷಗಳ ಅರ್ಜಿಯನ್ನು ಪರಿಗಣಿಸಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ದ್ವಿಸದಸ್ಯ ಪೀಠ ಹೇಳಿದೆ.