ಬಿಜೆಪಿಯಲ್ಲಿ (Bjp) ಭಿನ್ನಮತ ಸ್ಫೋಟಗೊಂಡಿದ್ದು, ಈಗ ರೆಬೆಲ್ಸ್ಗೆ ಕೌಂಟರ್ ಕೊಡಲು ರೇಣುಕಾಚಾರ್ಯ (MP Renukacharya) ಅಂಡ್ ಟೀಮ್ ಮೀಟಿಂಗ್ ನಡೆಸಿದೆ.ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಮನೆಯಲ್ಲಿ ಮೀಟಿಂಗ್ ಮಾಡಲಾಗಿದೆ.ಈ ಸಭೆಯಲ್ಲಿ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಎಂ.ಡಿ.ಲಕ್ಷ್ಮಿ ನಾರಾಯಣ ಭಾಗಿಯಾಗಿದ್ದಾರೆ.

ಈಗಾಗಲೇ ಯತ್ನಾಳ್ ಅಂಡ್ ಟೀಮ್ (Yatnal & team) ದೆಹಲಿಯಲ್ಲಿ ಬೀಡು ಬಿಟ್ಟಿರುವ ಹಿನ್ನೆಲೆ ಬಿವೈ ವಿಜಯೇಂದ್ರ ಪರ ಬ್ಯಾಟ್ ಬೀಸಲು ಬೆಂಬಲಿಗರ ಟೀಮ್ ಸಿದ್ಧತೆ ನಡೆಸಿದೆ. ಶೀಘ್ರದಲ್ಲೇ ದೆಹಲಿಗೆ ತೆರಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ಪಾಳಯದಲ್ಲಿ ನಿರಂತರವಾಗಿ ಭಿನ್ನಮತೀಯರ ಚಟುವಟಿಗೆ ಹೆಚ್ಚಾಗಿದ್ದು, ಇವರನ್ನ ಉಚ್ಚಾಟನೆ ಮಾಡಲೇಬೇಕು.ಭಿನ್ನಮತೀಯರ ಉಚ್ಚಾಟನೆಗೆ ಆಗ್ರಹ ಮಾಡುತ್ತೇವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಇನ್ನು ಈ ಬಣ ಯತ್ನಾಳ್ ಮತ್ತು ಕುಮಾರ್ ಬಂಗಾರಪ್ಪ ವಿರುದ್ಧ ಸಿಡಿದೆದ್ದಿದ್ದು.. ಮಿಸ್ಟರ್ ಕುಮಾರ್ ಬಂಗಾರಪ್ಪ ಎಲುಬಿಲ್ಲದ ನಾಲಗೆ ಅಂತ ಏನೇನೋ ಮಾತನಾಡಬಾರದು. ಹಿಂದೆ ಕಾಂಗ್ರೆಸ್ ಸೇರುವ ಪ್ರಯತ್ನ ಮಾಡಿರಲಿಲ್ವಾ ನೀನು? ಎಂದು ಪ್ರಶ್ನೆ ಮಾಡಿದ್ದಾರೆ.