ಮಡಿಕೇರಿಯಿಂದ ಬೆಂಗಳೂರಿಗೆ ಬಂದಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್ಗೆ ಡಿಕ್ಕಿ ಹೊಡೆದ ಪ್ರಕರಣ ಇಂದು ಸೋಮವಾರ ಬೆಳಿಗ್ಗೆ ಮೈಸೂರು ರಸ್ತೆಯ ಜ್ಞಾನಭಾರತಿ ಮತ್ತು ಪಟ್ಟಣಗೆರೆ ಮೆಟ್ರೋ ನಿಲ್ದಾಣದ ನಡುವಿನ ನಡೆದಿದ್ದು ಈ ಕುರಿತು ನಮ್ಮ ಮೆಟ್ರೋ ಸ್ಪಷ್ಟನೆ ನೀಡಿದೆ.
![](https://pratidhvani.com/wp-content/uploads/2022/05/WhatsApp-Image-2022-05-09-at-4.56.20-PM.jpeg)
ಹೌದು, ಈ ಘಟನೆ ಹಿನ್ನೆಲೆ ಫಿಲ್ಲರ್ಗೆ ಡ್ಯಾಮೇಜ್ ಆಗಿದೆಯೇ? ಮೆಟ್ರೋ ಸೇವೆ ಈ ಮಾರ್ಗದಲ್ಲಿ ಮುಂದುವರೆದಿದೆಯೇ ಎಂಬ ಹಲವಾರು ಪ್ರಶ್ನೆ ಕೇಳಿಬಂದಿತ್ತು. ಈಗ ಈ ಪ್ರಶ್ನೆಗಳಿಗೆಲ್ಲ ತೆರೆ ಎಳೆದಿರುವ ನಮ್ಮ ಮೆಟ್ರೋ, ಘಟನೆಯಿಂದ ಮೆಟ್ರೋ ಪಿಲ್ಲರ್ ಗೆ ಯಾವುದೇ ಹಾನಿಯಾಗಿಲ್ಲ, ಘಟನೆಯಲ್ಲಿ ಪಿಲ್ಲರ್ ನಲ್ಲಿ ಸಣ್ಣ ಪ್ರಮಾಣದ ಸ್ಕ್ರ್ಯಾಚ್ ಆಗಿದೆ. ಪಿಲ್ಲರ್ ಗಟ್ಟಮುಟ್ಟಾಗಿ ಇದ್ದಿದ್ದರಿಂದ ಯಾವುದೇ ಹಾನಿಯುಂಟಾಗಿಲ್ಲ. ಮೆಟ್ರೋ ಒಡಾಟದಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಸ್ಪಷ್ಟನೆ ನೀಡಿದೆ.