ಇಂದು ಉತ್ತರ ಪ್ರದೇಶದ ಪ್ರಯಾಗರಾಜ್ ಗೆ (Prayagaraj) ಪ್ರಧಾನಿ ನರೇಂದ್ರ ಮೋದಿ (Pm modi) ಭೇಟಿ ನೀಡಲಿದ್ದಾರೆ. ಆ ಮೂಲಕ ಇಂದು ಪ್ರಥಮ ಬಾರಿಗೆ ಈ ಬಾರಿಯ ಮಹಾಕುಂಭಮೇಳದಲ್ಲಿ (Maha Kumbh 2025) ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.
ಒಂದು ವಾರದ ಹಿಂದೆಯೇ ಮೋದಿ ಭೇಟಿಗೆ ದಿನಾಂಕ ನಿಗದಿಯಾಗಿತ್ತು.ಆದ್ರೆ ಆ ವೇಳೆ ಕಾರಣಾಂತರಗಳಿಂದ ಮೋದಿ ಭೇಟಿ ಕಾರ್ಯಕ್ರಮ ರದ್ದಾಗಿತ್ತು. ಈಗೆ ಮತ್ತೆ ಮಹಾಕುಂಭಮೇಳದಲ್ಲಿ ತೀರ್ಥಸ್ನಾನ ಮಾಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.

ಇಂದು ಬೆಳಿಗ್ಗೆ 10.05 ಕ್ಕೆ ಪ್ರಯಾಗರಾಜ್ ನ ಬಮ್ರೂಲಿ ಏರ್ ಪೋರ್ಟ್ ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.ಆ ಬಳಿಕ ಹೆಲಿಕಾಪ್ಟರ್ ನಲ್ಲಿ ಅರೈಲ್ ರೋಡ್ ಬಳಿಯ ಡಿಪಿಎಸ್ ಸ್ಕೂಲ್ ಹೆಲಿಪ್ಯಾಡ್ ಗೆ ಆಗಮಿಸುತ್ತಾರೆ. ಆ ಬಳಿಕ ಅರೈಯಲ್ ಘಾಟ್ ನಿಂದ ಬೋಟ್ ನಲ್ಲಿ ತ್ರಿವೇಣಿ ಸಂಗಮಕ್ಕೆ ಪ್ರಯಾಣ ಮಾಡಲಿದ್ದು,
ಬೆಳಿಗ್ಗೆ 11-11.30 ರವರೆಗೆ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ, ಪೂಜೆಯನ್ನು ಪಿಎಂ ಮೋದಿ ನೆರವೇರಿಸಲಿದ್ದಾರೆ. ಬಳಿಕ ಅರೈಯಲ್ ಘಾಟ್ ಮೂಲಕವೇ ಹೆಲಿಪ್ಯಾಡ್ ಗೆ ಬಂದು ಏರ್ ಪೋರ್ಟ್ ಗೆ ಪ್ರಯಾಣ ಬೆಳೆಸಲಿದ್ದಾರೆ.