• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚನ್ನಗಿರಿ-ಶಿವಮೊಗ್ಗದಲ್ಲಿ ಸರ್ಜಿಗೆ ಡಿಮ್ಯಾಂಡ್, ಪಕ್ಷ ಬಯಸಿದರೆ ಸ್ಪರ್ಧೆ ಎಂದ ವೈದ್ಯ

ಪ್ರತಿಧ್ವನಿ by ಪ್ರತಿಧ್ವನಿ
March 8, 2023
in Top Story, ಕರ್ನಾಟಕ, ರಾಜಕೀಯ
0
ಚನ್ನಗಿರಿ-ಶಿವಮೊಗ್ಗದಲ್ಲಿ ಸರ್ಜಿಗೆ ಡಿಮ್ಯಾಂಡ್, ಪಕ್ಷ ಬಯಸಿದರೆ ಸ್ಪರ್ಧೆ ಎಂದ ವೈದ್ಯ
Share on WhatsAppShare on FacebookShare on Telegram

ADVERTISEMENT

ಶಿವಮೊಗ್ಗ: ಹಿಂದೆ ಅವಿಭಜಿತ ಶಿವಮೊಗ್ಗದ ಭಾಗವಾಗಿದ್ದ ಚನ್ನಗಿರಿ ಕ್ಷೇತ್ರ ಶಿವಮೊಗ್ಗ ಜೊತೆ ಭಾವನಾತ್ಮಕ ಹಾಗೂ ವ್ಯಾವಹಾರಿಕ ನಂಟು ಹೊಂದಿದೆ.‌ ಅಡಕೆ ವ್ಯಾಪರವಿರಬಹುದು, ರಾಜಕೀಯವೇ ಆಗಿರಬಹುದು ಇಂದಿಗೂ ಒಂದೇ ಜಿಲ್ಲೆಯ ತಾಲೂಕುಗಳು ಎಂಬಂತಿವೆ. ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರದಿಂದ ನಲುಗಿದ ಚನ್ನಗಿರಿಗೆ ಸದ್ಯ ಶಿವಮೊಗ್ಗದಲ್ಲಿ ಖ್ಯಾತರಾಗಿರುವ ವೈದ್ಯ ಧನಂಜಯ ಸರ್ಜಿ ಗೆ ಬಿಜೆಪಿಯಿಂದ ಚನ್ನಗಿರಿ ಟಿಕೆಟ್ ನೀಡುತ್ತಾರೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಚನ್ನಗಿರಿಯಲ್ಲೂ ಸಹ ಸರ್ಜಿ ಸೂಕ್ತ ಎನ್ನುತ್ತಿದ್ದಾರೆ ಈ ಕುರಿತು ಸರ್ಜಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ನಾನೊಬ್ಬ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಮೊದಲಿನಿಂದಲೂ ಬಿಜೆಪಿ ಸಂಘಟನೆಯಲ್ಲಿ ಬೆಳೆದು ಬಂದವನು. ಪಕ್ಷ ನಿಷ್ಠೆ ನನ್ನಲಿದೆ. ಶಿವಮೊಗ್ಗ ಜಿಲ್ಲೆ ಪ್ರಣಾಳಿಕೆ ಸಂಗ್ರಹ ಸಂಚಾಲಕನಾಗಿ ಪಕ್ಷ ನಿಯುಕ್ತಿಗೊಳಿಸಿದೆ. ಬಿಜೆಪಿ ವಿಭಾಗೀಯ ಕಾರ್ಯದರ್ಶಿಗಳು ನನಗೆ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಚುನಾವಣಾ ಓಡಾಟ‌ ಮಾಡುವಂತೆ ಸೂಚನೆ ನೀಡಿದ್ದಾರೆ. ಹಾಗಾಗಿ ಗ್ರಾಮಾಂತರ ಭಾಗದಲ್ಲಿ ಓಡಾಟ ಮುಂದುವರಿಸಿದ್ದೇನೆ. ಹಿಂದೆಯೂ ಸಹ ಸಾಕಷ್ಟು ಸಲ ನಾನು ಚನ್ನಗಿರಿಯಿಂದ ಸ್ಪರ್ಧಿಸಬೇಕು ಎಂದು ಜನರು ಒತ್ತಾಯ ಮಾಡಿದ್ದರು. ಚನ್ನಗಿರಿಯಲ್ಲೇ ನಾನು ಹುಟ್ಟಿ ಬೆಳೆದಿದ್ದು, ಕುಟಂಬಗಳೂ ಅಲ್ಲೇ ಇವೆ, ತೋಟಗಳೂ ಇವೆ. ನನ್ನ ಸ್ನೆಹಿತರು, ನೆಂಟರಿಷ್ಟರು, ಸಂಬಂಧಿಕರು ಸಹ ಹೆಚ್ಚಾಗಿ ಅಲ್ಲಿದ್ದಾರೆ. ಶೇ. 80 ರಷ್ಟು ನನ್ನ ಆಪ್ತರೇ ಅಲ್ಲಿದ್ದಾರೆ. ಅಲ್ಲಿನ ಜನ ಹಾಗೂ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದು ನಿಜ.! ಮುನ್ನೂರಿಂದ ನಾಲ್ಕು ನೂರು ಫೋನ್ ಕರೆಗಳು ಬಂದಿರಬಹುದು. ತುಂಬಾ ಜನರು ಭೇಟಿಯಾಗಿದ್ದಾರೆ. ನಾನು ಪರಿವಾರದ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ‌. ಪಕ್ಷ ಏನು ಸೂಚನೆ ಮಾಡುತ್ತೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ.‌ ಚನ್ನಗಿರಿಯಂತೆ ಭದ್ರಾವತಿಯಲ್ಲೂ ಸಹ ಇದೇ ತರಹ ಅಲ್ಲಿನ ಜನ ಸರ್ಜಿ ಚುನಾವಣೆಗೆ ನಿಲ್ಲಲಿ ಎಂದು ಹೇಳುತ್ತಿದ್ದರು. ಆದರೆ ಎಲ್ಲದನ್ನೂ ಪಕ್ಷದ ಹಿರಿಯರಿಗೆ ಬಿಟ್ಟಿದ್ದೇನೆ. ಅವರ ನಿರ್ಧಾರದ ನಂತರ ನಾನು ಅಧಿಕೃತವಾಗಿ ಮಾತನಾಡುತ್ತೇನೆ ಎಂದರು.

ಅವಿಭಜಿತ ಶಿವಮೊಗ್ಗದ ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನೆಡೆಯಾದ್ದರಿಂದ ಸೂಕ್ತ ಅಭ್ಯರ್ಥಿ ಯಾರೆಂದು ನೋಡಿದಾಗ ಬಿಜೆಪಿಗೆ ಸಿಗುವುದು ಇಬ್ಬರ ಹೆಸರು. ಅದರಲ್ಲಿ ಎಂಎಲ್ ಸಿ ಹಾಗೂ ಕೈಗಾರಿಕೋದ್ಯಮಿ ರುದ್ರೇಗೌಡ ಹಾಗೂ ಡಾ. ಧನಂಜಯ್ ಸರ್ಜಿ, ಇವರಿಬ್ಬರಲ್ಲಿಯೇ ಸ್ಪರ್ಧೆ ಇದೆ, ನಿಮಗೆ ಅವಕಾಶ ನೀಡಿದರೆ ಸ್ಪರ್ಧಿಸುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಚನ್ನಗಿರಿ ಕ್ಷೇತ್ರದಲ್ಲೀಗಲೇ ಕ್ಲಾರಿಟಿ ಇಲ್ಲ. ಪಕ್ಷದಲ್ಲಿ ಯಾರಿಗೆ ಟಿಕೆಟ್ ನೀಡುತ್ತಾರೆ, ಏನಾಗುತ್ತೆ..? ಮಾಡಾಳ್ ವಿರೂಪಾಕ್ಷಪ್ಪಗೆ ಟಿಕೆಟ್ ನಿರಾಕರಣೆಯಾಗುತ್ತಾ ಯಾವುದೂ ಮಾಹಿತಿ ಇಲ್ಲ. ಪಕ್ಷದ ವರಿಷ್ಠರ ಸೂಚನೆ ಬರಬೇಕು. ಆ ನಂತರ ನಾನು ಕುಟುಂಬದ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

ಶಿವಮೊಗ್ಗ ನಗರಕ್ಕೆ ಅಭ್ಯರ್ಥಿ ಆಸಕ್ತಿ ಹೊಂದಿದ್ದೀರಿ ಈಗ ಚನ್ನಗಿರಿಗೂ ನಿಮ್ಮ ಹೆಸರು ಕೇಳಿಬರುತ್ತಿದೆ ಎಂಬ ಮಾತಿಗೆ ಉತ್ತರಿಸಿದ ಸರ್ಜಿ, ಹೌದು ಶಿವಮೊಗ್ಗ ಆಸಕ್ತಿ ಹೊಂದಿದ್ದೆ. ಆದರೆ ಪಕ್ಷ ಬಯಸಿದ್ದಷ್ಟೇ ನಾನು ಮಾಡಬೇಕು. ಚನ್ನಗಿರಿ ಇರಬಹುದು, ಶಿವಮೊಗ್ಗ ಇರಬಹುದು‌ ವರಿಷ್ಠರು ನಿರ್ಧಾರ ಮಾಡಬೇಕು. ಪಕ್ಷದ ಕೆಲಸ ಮಾಡಿಕೊಂಡಿರು, ಸಂಘಟನೆ ಮಾಡು ಎಂದರೂ ಸಹ ನಾನು ಬದ್ಧನಾಗಿದ್ದೇನೆ. ಪಕ್ಷ ಏನೇ ಜವಾಬ್ದಾರಿ ನೀಡಿದರೂ ನಾನು ಬದ್ಧ ಎಂದರು.

Tags: ಚನ್ನಗಿರಿಡಾ.ಧನಂಜಯ ಸರ್ಜಿಶಿವಮೊಗ್ಗ
Previous Post

ಮತದಾನ ಹೆಚ್ಚಳಕ್ಕೆ ವಿನೂತನ ಕಾರ್ಯಕ್ರಮ:  ಶತಾಯುಷಿಗಳೊಂದಿಗೆ ಜಿಲ್ಲಾಧಿಕಾರಿ ಸಂವಾದ

Next Post

ಶಾಂತಮ್ಮಾಗೆ ರಾಜ್ಯ ಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ

Related Posts

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!
Top Story

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

by ಪ್ರತಿಧ್ವನಿ
May 17, 2026
0

ಬೆಂಗಳೂರು : ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಅಕ್ರಮಗಳು ನಡೆಯುತ್ತಿವೆ. ಇದರಿಂದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಭಾರಿ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಕೆಪಿಎಸ್‌ಸಿ ವಿರುದ್ಧ ವ್ಯಕ್ತವಾಗುತ್ತಿವೆ. ಆದರೆ ಇದೀಗ ರಾಜ್ಯದ...

Read moreDetails
ನೀರಿಲ್ಲದ ಕೃಷ್ಣೆಯ ಒಡಲು : ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ; ರೈತರ ತೀವ್ರ ಆಕ್ರೋಶ..!

ನೀರಿಲ್ಲದ ಕೃಷ್ಣೆಯ ಒಡಲು : ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ; ರೈತರ ತೀವ್ರ ಆಕ್ರೋಶ..!

May 17, 2026
ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!

ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!

May 17, 2026
“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

May 16, 2026
ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

May 16, 2026
Next Post
ಶಾಂತಮ್ಮಾಗೆ ರಾಜ್ಯ ಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ

ಶಾಂತಮ್ಮಾಗೆ ರಾಜ್ಯ ಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada