• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತರಕಾರಿ, ಹಣ್ಣು ತರ್ತೀರಾ? ಕೆ.ಆರ್. ಮಾರ್ಕೆಟ್‌ನಲ್ಲಿ ಇನ್ಮುಂದೆ ಶುಲ್ಕ ಕಡ್ಡಾಯ!

ಪ್ರತಿಧ್ವನಿ by ಪ್ರತಿಧ್ವನಿ
September 2, 2026
in Top Story
0
ತರಕಾರಿ, ಹಣ್ಣು ತರ್ತೀರಾ? ಕೆ.ಆರ್. ಮಾರ್ಕೆಟ್‌ನಲ್ಲಿ ಇನ್ಮುಂದೆ ಶುಲ್ಕ ಕಡ್ಡಾಯ!
Share on WhatsAppShare on FacebookShare on Telegram

ಬೆಂಗಳೂರು: ರಾಜ್ಯ ರಾಜಧಾನಿಯ ಐತಿಹಾಸಿಕ ಹಾಗೂ ಜನನಿಬಿಡ ಕೃಷ್ಣರಾಜೇಂದ್ರ (ಕೆ.ಆರ್.) ಮಾರ್ಕೆಟ್‌ಗೆ ಇನ್ಮುಂದೆ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ಶುಲ್ಕ ವಿಧಿಸುವ ಪ್ರಸ್ತಾವನೆ ಸಿದ್ಧವಾಗಿದೆ. ಮಾರುಕಟ್ಟೆಯ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವುದು ಹಾಗೂ ಶುಲ್ಕ ಸಂಗ್ರಹದಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಯುವ ಉದ್ದೇಶದಿಂದ ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ (BCCC) 10 ವರ್ಷಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಡಿಜಿಟಲ್ ಟೋಲ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.

ADVERTISEMENT

 

ಪ್ರಸ್ತಾವಿತ ಯೋಜನೆಯಡಿ ಕೆ.ಆರ್. ಮಾರ್ಕೆಟ್‌ಗೆ ಪ್ರವೇಶಿಸುವ ಸರಕು ವಾಹನಗಳಿಗೆ ನಿಗದಿತ ಎಂಟ್ರಿ ಫೀಸ್ ವಿಧಿಸಲಾಗುತ್ತದೆ. ಇದರ ಜೊತೆಗೆ ವ್ಯಾಪಾರಿಗಳು ಮಾರುಕಟ್ಟೆಗೆ ತರುವ ಹಣ್ಣು, ತರಕಾರಿ, ಹೂವು ಸೇರಿದಂತೆ ಕೃಷಿ ಉತ್ಪನ್ನಗಳ ಪ್ರಮಾಣಕ್ಕೆ ಅನುಗುಣವಾಗಿಯೂ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ.

HD Kumaraswamy : ಸಚಿವ ಪ್ರಿಯಾಂಖ್‌ ಖರ್ಗೆಗೆ ಚಾಟಿ ಬೀಸಿದ ಕುಮಾರಸ್ವಾಮಿ..! #priyankkharge #pratidhvani

ವಾಹನಗಳಿಗೆ ಎಂಟ್ರಿ ಫೀಸ್ ಎಷ್ಟು?

  • ಟ್ರಕ್, 6 ಚಕ್ರ ಅಥವಾ ಅದಕ್ಕಿಂತ ದೊಡ್ಡ ವಾಹನ: ಪ್ರತಿ ಎಂಟ್ರಿ/ಎಕ್ಸಿಟ್‌ಗೆ ₹350
  • 4 ಚಕ್ರದ ಸರಕು ವಾಹನ: ಪ್ರತಿ ಎಂಟ್ರಿ/ಎಕ್ಸಿಟ್‌ಗೆ ₹100
  • 3 ಚಕ್ರದ ಸರಕು ವಾಹನ/ಸರಕು ಆಟೋ: ಪ್ರತಿ ಎಂಟ್ರಿ/ಎಕ್ಸಿಟ್‌ಗೆ ₹75

ವಾಹನದ ಪ್ರವೇಶ ಶುಲ್ಕದ ಜತೆಗೆ ಮಾರುಕಟ್ಟೆಗೆ ತರಲಾಗುವ ಸರಕುಗಳ ಮೇಲೂ ಹೆಚ್ಚುವರಿ ಶುಲ್ಕ ವಿಧಿಸುವ ಪ್ರಸ್ತಾವನೆ ಇದೆ.

  • ಹಣ್ಣು, ತರಕಾರಿ, ಹೂವು, ಸೊಪ್ಪು, ಹತ್ತಿ, ತೆಂಗಿನಕಾಯಿ ಸೇರಿದಂತೆ ಕೃಷಿ ಉತ್ಪನ್ನಗಳು: ಪ್ರತಿ ಚೀಲ ಅಥವಾ ಕಟ್ಟುಗೆ ₹5
  • ಕೋಳಿ ಮಾಂಸ, ಮಾಂಸ ಹಾಗೂ ಸೀಫುಡ್ ಉತ್ಪನ್ನಗಳು: ಪ್ರತಿ ಬಾಕ್ಸ್ ಅಥವಾ ಟ್ರೇಗೆ ₹10
HD Kumaraswamy : ಖರ್ಗೆವ್ರೇ ನಿಮಗೆ ಗೊತ್ತಿಲ್ಲ ಅಂದ್ರೆ ನಿಮ್ಮ ತಂದೆ ಅವರನ್ನ ಕೇಳಿ..! #priyankkharge #bsy

ಶುಲ್ಕ ಸಂಗ್ರಹದಲ್ಲಿ ಪಾರದರ್ಶಕತೆ ತರಲು ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. UPI, FASTag, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹಾಗೂ POS ಯಂತ್ರಗಳ ಮೂಲಕ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿಯೊಂದು ವಹಿವಾಟಿಗೂ ಎಲೆಕ್ಟ್ರಾನಿಕ್ ರಸೀದಿ ನೀಡಲಾಗುತ್ತದೆ.

ಶುಲ್ಕ ಪಾವತಿಸದೆ ಮಾರುಕಟ್ಟೆ ಪ್ರವೇಶಿಸುವುದು, ವಂಚನೆ ಮಾಡುವುದು ಅಥವಾ ತರಲಾಗಿರುವ ಸರಕಿನ ಪ್ರಮಾಣವನ್ನು ಕಡಿಮೆ ತೋರಿಸುವುದು ಕಂಡುಬಂದರೆ ದಂಡ ವಿಧಿಸುವ ಪ್ರಸ್ತಾವನೆಯೂ ಇದೆ.

  • ಮೊದಲ ಬಾರಿಗೆ ನಿಯಮ ಉಲ್ಲಂಘನೆ: ₹2,500 ದಂಡ
  • ಮೂರನೇ ಬಾರಿಗೆ ಉಲ್ಲಂಘನೆ: ₹10,000ವರೆಗೆ ದಂಡ ಹಾಗೂ ಸರಕು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮ

ಕೆ.ಆರ್. ಮಾರ್ಕೆಟ್‌ನ ಸಂಚಾರ ದಟ್ಟಣೆ ನಿಯಂತ್ರಿಸುವುದು, ಶುಲ್ಕ ಸಂಗ್ರಹವನ್ನು ವ್ಯವಸ್ಥಿತಗೊಳಿಸುವುದು ಹಾಗೂ ಮಾರುಕಟ್ಟೆಯ ನಿರ್ವಹಣೆಯನ್ನು ಸುಧಾರಿಸುವ ಉದ್ದೇಶದಿಂದ ಈ ಡಿಜಿಟಲ್ ಟೋಲ್ ವ್ಯವಸ್ಥೆ ಜಾರಿಗೆ ತರಲು BCCC ಪ್ರಸ್ತಾವನೆ ಸಲ್ಲಿಸಿದೆ.

Tags: Bangalore Central City Corporationbangalore newsBBMPBCCCbengalurubengaluru newsDigital TollFASTagkarnataka newskr marketKR Market Entry FeeMarket FeeUPI PaymentVehicle Entry Fee
Previous Post

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ‘ಕರ್ನಾಟಕ ಹೆರಿಟೇಜ್ ಅಂಡ್‌ ಕಲ್ಚರಲ್‌ ಫೌಂಡೇಶನ್‌ ಸ್ಥಾಪನೆ : ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ ಘೋಷಣೆ

Next Post

ವಿರಾಟ್-ಅನುಷ್ಕಾ ಭಾರತ ತೊರೆದು ಲಂಡನ್‌ನಲ್ಲೇ ಇರಲು ಕಾರಣವೇನು?

Related Posts

ಪುಟಿದೇಳುತ್ತದೆಯೇ ಪ್ರಾದೇಶಿಕ ಪಕ್ಷ..?
Top Story

ಪುಟಿದೇಳುತ್ತದೆಯೇ ಪ್ರಾದೇಶಿಕ ಪಕ್ಷ..?

by ಪ್ರತಿಧ್ವನಿ
September 15, 2026
0

ಬೆಂಗಳೂರು : ಒಂದು ಕಾಲದಲ್ಲಿ ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿಗಿಂತಲೂಹೆಚ್ಚಿನ ಶಕ್ತಿ ಹೊಂದಿದ್ದ ಜೆಡಿಎಸ್, ಇಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವುದು ರಾಜಕೀಯ ವಾಸ್ತವ. ದೇವೇಗೌಡರ ರಾಜಕೀಯ ಪರಂಪರೆ,...

Read moreDetails
ಉದ್ಯೋಗಿಗಳಿಗೆ ವಜಾ ಶಾಕ್; ಒರಾಕಲ್‌ನಿಂದ ಬಿಗ್‌ ಲೇ-ಆಫ್!

ಉದ್ಯೋಗಿಗಳಿಗೆ ವಜಾ ಶಾಕ್; ಒರಾಕಲ್‌ನಿಂದ ಬಿಗ್‌ ಲೇ-ಆಫ್!

September 15, 2026
ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗೆ ಗಡುವು ವಿಸ್ತರಣೆ: ಆಸ್ತಿ ಮಾಲೀಕರಿಗೆ ಗುಡ್‌ನ್ಯೂಸ್!

ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗೆ ಗಡುವು ವಿಸ್ತರಣೆ: ಆಸ್ತಿ ಮಾಲೀಕರಿಗೆ ಗುಡ್‌ನ್ಯೂಸ್!

September 15, 2026
ವಿದ್ಯಾಬುದ್ಧಿಯ ಚೌಕದಿಂದ ಬೀದಿ ಜಗಳದ ಅಂಗಳಕ್ಕೆ..

ವಿದ್ಯಾಬುದ್ಧಿಯ ಚೌಕದಿಂದ ಬೀದಿ ಜಗಳದ ಅಂಗಳಕ್ಕೆ..

September 15, 2026
ಗಣೇಶ ಹಬ್ಬದಂದೇ ಹೊಸ ಮನೆಗೆ ಕಾಲಿಟ್ಟ ಸಿದ್ದರಾಮಯ್ಯ : ಸರಳ ವಿಧಿ ವಿಧಾನಗಳ ಮೂಲಕ ಮಾಜಿ ಸಿಎಂ ಗೃಹ ಪ್ರವೇಶ..!

ಗಣೇಶ ಹಬ್ಬದಂದೇ ಹೊಸ ಮನೆಗೆ ಕಾಲಿಟ್ಟ ಸಿದ್ದರಾಮಯ್ಯ : ಸರಳ ವಿಧಿ ವಿಧಾನಗಳ ಮೂಲಕ ಮಾಜಿ ಸಿಎಂ ಗೃಹ ಪ್ರವೇಶ..!

September 14, 2026
Next Post
ವಿರಾಟ್-ಅನುಷ್ಕಾ ಭಾರತ ತೊರೆದು ಲಂಡನ್‌ನಲ್ಲೇ ಇರಲು ಕಾರಣವೇನು?

ವಿರಾಟ್-ಅನುಷ್ಕಾ ಭಾರತ ತೊರೆದು ಲಂಡನ್‌ನಲ್ಲೇ ಇರಲು ಕಾರಣವೇನು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada