“ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮ ಅಕ್ಟೋಬರ್ 16ರಿಂದ ಮತ್ತೆ ಆರಂಭವಾಗಲಿದೆ ಎಂದು ರಾಜ್ಯ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿದೆ.
ಕೋವಿಡ್ ಬಂದಾಗಿನಿಂದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಯೋಜನೆ ಸರಿಯಾದ ರೀತಿಯಲ್ಲಿ ನಡೆಯದೆ ಸ್ಥಗಿತಗೊಂಡಿತ್ತು. ಕೋವಿಡ್ ಬಿಕ್ಕಟ್ಟು ನಿವಾರಣೆಯಾಗುತ್ತಿದ್ದಂತೆ ಮತ್ತೆ ಈ ಒಂದು ಯೋಜನೆಯನ್ನು ಪುನಾರಂಭಿಸಲು ಸರ್ಕಾರ ತೀರ್ಮಾನ ಮಾಡಿದೆ ಈ ಕುರಿತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸುತ್ತೋಲೆಯನ್ನು ಬಿಡುಗಡೆ ಮಾಡಿದೆ.
ಸುತ್ತೋಲೆಯಲ್ಲಿ ನಾಲ್ಲು ಅಂಶಗಳಿದ್ದು ಅವು:
- ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಸೂಚಿಸಿದ ಹಳ್ಳಿಗೆ ಹೋಗಿ ಗ್ರಾಮಮ ವಾಸ್ತವ್ಯ ಹೂಡಿ ಗ್ರಾಮದ ಸಮಸ್ಯಗಳನ್ನು ಆಲಿಸಬೇಕು.
- ಕೋವಿಡ್ ಪಾಸಿಟಿವಿ ರೇಟ್ 1.5ಕ್ಕಿಂತ ಕಡುಮೆ ಇದ್ದ ಜಿಲ್ಲೆಗೆ ವಾಸ್ತವ್ಯ ಹೂಡಬಹುವುದು. 1.5ಕ್ಕಿಂತ ಜಾಸ್ತಿ ಇರುವ ಜಿಲ್ಲೆ ತಾಲೂಕುಗಳಿಗೆ ಭೇಟಿ ನೀಡಬಾರದು.
- ಕೊಡಗು ಜಿಲ್ಲೆಯಲ್ಲಿ ಈ ತಿಂಗಳು ತುಲಾ ಸಂಕ್ರಮಣದ ಪ್ರಯುಕ್ತ ದಿನಾಂಕ 16-10-2021ರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಭಿಯಾನದಿಂದ ವಿನಾಯಿತಿ ನೀಡಿದ್ದು, ದಿನಾಂಕ 30-10-2021ರಂದು ಕೈಗೊಳ್ಳುವಂತೆ ಸೂಚಿಸಿದೆ.
- ಕೋವಿಡ್ ನಿಯಮವನ್ನು ಪಾಲಿಸುವುದು ಎಂದು ತಿಳಿಸಿದೆ.
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಭಿಯಾನವನ್ನು ಮತ್ತೆ ಆರಂಭಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಅ.30ರಂದು ಅಭಿಯಾನ ನಡೆಯಲಿದೆ. ತುಲಾ ಸಂಕ್ರಮಣ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ವಿಳಂಬವಾಗಲಿದೆ. ಪಾಸಿಟಿವಿಟಿ ದರ ಶೇ 15ಕ್ಕಿಂತ ಹೆಚ್ಚಿರುವ ತಾಲೂಕುಗಳಲ್ಲಿ ಈ ಅಭಿಯಾನ ನಡೆಯುವುದಿಲ್ಲ. ಈ ಸಂಬಂಧ ಕಂದಾಯ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಕೊವಿಡ್ನಿಂದ ಸ್ಥಗಿತಗೊಂಡಿದ್ದ ಗ್ರಾಮವಾಸ್ತವ್ಯ ಅಭಿಯಾನ ಮತ್ತೆ ಆರಂಭವಾಗಲಿದೆ ಎಂದು ಹೇಳಿದರು.