• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಬೆಂಗಳೂರಿನಲ್ಲಿ ಬಗೆಹರಿಯದ ಸಮಸ್ಯೆ..! ದಿಲ್ಲಿಗೆ ಬರುವಂತೆ ಬುಲಾವ್..

ಕೃಷ್ಣ ಮಣಿ by ಕೃಷ್ಣ ಮಣಿ
July 28, 2023
in ಅಂಕಣ, ಅಭಿಮತ
0
ಬೆಂಗಳೂರಿನಲ್ಲಿ ಬಗೆಹರಿಯದ ಸಮಸ್ಯೆ..! ದಿಲ್ಲಿಗೆ ಬರುವಂತೆ ಬುಲಾವ್..
Share on WhatsAppShare on FacebookShare on Telegram

ಕಾಂಗ್ರೆಸ್ (Congress )​ ಶಾಸಕರಲ್ಲಿ (MLAs) ಅಸಮಾಧಾನ ಹೊಗೆ ಆಡ್ತಿದೆ ಅನ್ನೋದು ಕಳೆದೊಂದು ವಾರದಿಂದ ( weeks) ಭಾರೀ ಸದ್ದು ಮಾಡಿತ್ತು. ನಿನ್ನೆ ಸಿಎಂ ಸಿದ್ದರಾಮಯ್ಯ (CM Siddaramaiah) ಶಾಸಕಾಂಗ ಪಕ್ಷದ ಸಭೆ ಕರೆದು ಶಾಸಕರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿದ್ರು. ಈ ವೇಳೆ ಸಾಕಷ್ಟು ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ನೇರಾನೇರವಾಗಿಯೇ ಬೇಸರ ಹೊರ ಹಾಕಿದ್ರು ಎನ್ನಲಾಗಿದೆ. ಅನುದಾನ ವಿಚಾರದಲ್ಲಿ ಶಾಸಕರನ್ನು ಕಡೆಗಣಿಸಲಾಗಿದೆ, ವರ್ಗಾವಣೆ ( Transfer ) ವಿಚಾರದಲ್ಲೂ ನಮ್ಮ ಪತ್ರಗಳಿಗೆ ( letters) ಬೆಲೆ ( value ) ಕೊಡ್ತಿಲ್ಲ ಎಂದು ಸಿಎಂ ಹಾಗು ಡಿಸಿಎಂ ಎದುರು ಅಸಮಾಧಾನ ಹೊರ ಹಾಕಿದ್ದಾರೆ. ಆದರೆ ಪಕ್ಷದ ಸಭೆ ಮುಗಿಸಿ ಹೊರ ಬಂದ ಯಾವ ಶಾಸಕರು ಮಾಧ್ಯಮಗಳ ಜೊತೆಗೆ ಮಾತನಾಡಲಿಲ್ಲ. ಸಿಎಂ, ಡಿಸಿಎಂ, ಸಚಿವರು ಮಾತ್ರ ಏನೂ ಬೇಸರ ಇಲ್ಲ ಅಂತಾನೇ ತೇಪೆ ಹಾಕುವ ಪ್ರಯತ್ನ ಮಾಡಿದ್ದಾರೆ.

ADVERTISEMENT

CLP ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ರು..?

ವಿರೋಧ ಪಕ್ಷದವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾಯ್ತಿದ್ದಾರೆ. ವಿಪಕ್ಷದವರು ವಾಮಮಾರ್ಗ ಹಿಡಿಯುವ ಸಾಧ್ಯತೆ ಇದೆ ಎಚ್ಚರಿಕೆಯಿಂದ ಇರಿ. ಬಹಿರಂಗವಾಗಿ ಸರ್ಕಾರದ ಬಗ್ಗೆ ಯಾರೂ ಮಾತನಾಡಬೇಡಿ, ಇದರಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತದೆ. ಏನೇ ಅನುಮಾನಗಳು ಇದ್ದರೂ ಪಕ್ಷದ ವೇದಿಕೆಯಲ್ಲೇ ಎಲ್ಲರೂ ಮಾತನಾಡಿ. ಸ್ವಲ್ಪ ದಿನ ಎಲ್ಲರೂ ತಾಳ್ಮೆಯಿಂದ ಇರಿ, ಎಲ್ಲವನ್ನೂ ಸರಿಮಾಡೋಣ ಎಂದಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಶಾಸಕರ ಕ್ಷೇತ್ರಗಳಿಗೆ ನಯಾಪೈಸೆ ಅನುದಾನ ಸಿಗ್ತಿಲ್ಲ. ವೋಟು ಹಾಕಿದವ್ರು ನಮ್ಮ ಬಳಿ ಪ್ರಶ್ನೆ ಮಾಡ್ತಿದ್ದಾರೆ. ನಾವು ಜನರಿಗೆ ಏನ್​ ಹೇಳ್ಬೇಕು..? ನಮಗೂ ತಾಳ್ಮೆ ಇರುತ್ತದೆ. ಎಷ್ಟು ದಿನ ಸಹಿಸಿಕೊಳ್ಳೋದು..? ಎಂದು ಪ್ರಶ್ನಿಸಿದ್ದಾರೆ.

ವರ್ಗಾವಣೆ ಪತ್ರಕ್ಕೂ ಬೆಲೆ ಕೊಡ್ತಿಲ್ಲ ಸಚಿವರು..!!

ಕೆಲವು ಮಂತ್ರಿಗಳ ಹತ್ತಿರ ವರ್ಗಾವಣೆಗಾಗಿ ಪತ್ರ ಬರೆದರೂ ಕ್ಯಾರೇ ಅನ್ನಲ್ಲ. ಒಬ್ಬ FDA ವರ್ಗಾವಣೆಗೂ ಸಚಿವರುಗಳು ನಮಗೆ ಸ್ಪಂದಿಸುತ್ತಿಲ್ಲ. ಸೌಜನ್ಯಕ್ಕೂ ಶಾಸಕರು ಫೋನ್​ ಮಾಡಿದಾಗ ರಿಸೀವ್ ಮಾಡಿ ಮಾತಾಡಲ್ಲ. ಕೆಲವು ಸಚಿವರು ಬ್ರೋಕರ್‌ಗಳನ್ನ ನೇಮಿಸಿಕೊಂಡಿದ್ಧಾರೆ. ನಾವುಗಳು ಕ್ಷೇತ್ರದ ಜನರಿಗೆ ಸ್ಪಂದಿಸುವುದಾದರೂ ಹೇಗೆ..? ನಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಲ್ಲ, ಕೆಲವು ಮಂತ್ರಿಗಳಿಂದಲೇ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ ಎಂದು ಎಚ್ಚರಿಸಿದ್ದಾರೆ. ಸಂಪುಟ ಸಭೆಯಲ್ಲಿ ವೈಲೆಂಟ್ ಆಗಿದ್ದ ಸಚಿವರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಸೈಲೆಂಟ್​​ ಆಗಿದ್ದರು ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಮುಂದೆ ಕೆಲ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಆಕ್ರೋಶ ಹೊರ ಹಾಕಿದ್ದರು. ಅನುದಾನ ಸದ್ಯಕ್ಕಿಲ್ಲ ಅಂತ ನೀವೇ ಹೇಳಿದ್ದೀರಿ, ಇಲಾಖೆಯಲ್ಲಿ ನಮಗೆ ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಬಿಡಬೇಕು. ಶಾಸಕರಿಗೆ ನೀವೇ ಬುದ್ಧಿ ಹೇಳಿ ಅಂತ ಸಿಎಂಗೆ ಮನವಿ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಾಂಸ್ಕೃತಿಕ ಪ್ರಶಸ್ತಿಗಳೂ ಮುಕ್ತ ಮಾರುಕಟ್ಟೆ ನೀತಿಯೂ- ಭಾಗ 2

ದೆಹಲಿಗೆ ಬುಲಾವ್​ ಕೊಟ್ಟ ಕಾಂಗ್ರೆಸ್​ ಹೈಕಮಾಂಡ್​..!

ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್​ ಶಾಸಕರ ಮುನಿಸು ಬಗ್ಗೆ ಚರ್ಚೆ ಆಗಿದ್ದು, 2 ತಿಂಗಳ ಗ್ಯಾರಂಟಿ ಸರ್ಕಾರದಲ್ಲಿ ಅಸಮಾಧಾನದ ಕಿಡಿ ಹೊಗೆ ಆಡುತ್ತಿದೆ. ದೆಹಲಿಗೆ ಬನ್ನಿ ಮಾತಾಡೋಣ ಎಂದು ಕಾಂಗ್ರೆಸ್​​ ಹೈಕಮಾಂಡ್ ಆಹ್ವಾನ ನೀಡಿದೆ. ಆಗಸ್ಟ್​ 2ಕ್ಕೆ ರಾಜ್ಯ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನ ನೀಡಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​, ಪಕ್ಷದ ಕಾರ್ಯಾಧ್ಯಕ್ಷರು, ಹಿರಿಯ ನಾಯಕರು ದೆಹಲಿಗೆ ತೆರಳಿದ್ದಾರೆ. ರಾಷ್ಟ್ರಮಟ್ಟದಲ್ಲಿ INDIA ಒಕ್ಕೂಟ ಮಾಡಿಕೊಂಡು ಲೋಕಸಭೆಗೆ ಸಜ್ಜಾಗುತ್ತಿರುವಾಗ ರಾಜ್ಯ ಕಾಂಗ್ರೆಸ್​​ ಭಿನ್ನಮತ ರಾಷ್ಟ್ರಮಟ್ಟದಲ್ಲಿ ಮುಜುಗರ ತಂದೊಡ್ಡದಂತೆ ಎಚ್ಚರಿಕೆ ವಹಿಸಲು ಸಭೆ ಕರೆಯಲಾಗಿದೆ ಎನ್ನಲಾಗಿದೆ. ಆದರೂ ಡಿಕೆಶಿ ಮಾಡುತ್ತಿರುವ ಡ್ಯಾಮೇಜ್​ ಕಂಟ್ರೋಲ್​ಗೆ ದೆಹಲಿಯಲ್ಲಿ ಮದ್ದು ಅರೆಯುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.

ಕೃಷ್ಣಮಣಿ

Tags: bengaluruCLPCMSiddaramaiahDKShivakumar
Previous Post

ಸಾಂಸ್ಕೃತಿಕ ಪ್ರಶಸ್ತಿಗಳೂ ಮುಕ್ತ ಮಾರುಕಟ್ಟೆ ನೀತಿಯೂ- ಭಾಗ 2

Next Post

ಕೇರಳ | ಪೌರ ಕಾರ್ಮಿಕ ಮಹಿಳೆಯರಿಗೆ ಒಲಿದ ಅದೃಷ್ಟ ; 11 ಮಂದಿಗೆ 10 ಕೋಟಿ ರೂ. ಲಾಟರಿ

Related Posts

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ
ಅಂಕಣ

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

by ಪ್ರತಿಧ್ವನಿ
April 29, 2026
0

ನಾ ದಿವಾಕರ ಸಾಮಾನ್ಯವಾಗಿ ಸಾಂಸ್ಕೃತಿಕ ಲೋಕವನ್ನು ನಿರ್ವಚಿಸುವಾಗ ಸಮಾಜದಲ್ಲಿ ಪ್ರಚಲಿತವಾಗಿರುವ ದೃಶ್ಯ-ಶ್ರವ್ಯ ಸಾಧನಗಳನ್ನು ಒಳಗೊಳ್ಳಲಾಗುತ್ತದೆ. ದೃಶ್ಯ ಸಾಧನದಲ್ಲಿ ನೃತ್ಯ, ಚಿತ್ರಕಲೆ, ರಂಗಭೂಮಿ ಮತ್ತು ಭಾರತದ ಸಂದರ್ಭದಲ್ಲಿ ಚಲನಚಿತ್ರ...

Read moreDetails
ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು

April 27, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 25, 2026
Next Post
ಕೇರಳ

ಕೇರಳ | ಪೌರ ಕಾರ್ಮಿಕ ಮಹಿಳೆಯರಿಗೆ ಒಲಿದ ಅದೃಷ್ಟ ; 11 ಮಂದಿಗೆ 10 ಕೋಟಿ ರೂ. ಲಾಟರಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada