ಇಂದು ಬೆಳಗ್ಗೆ ಅಷ್ಟೇ ನೀತಿ ಆಯೋಗದ ಸಭೆಗೆ ಪಂಜಾಬ್ ಸರ್ಕಾರ ಬಹಿಷ್ಕಾರ ಹಾಕುವ ವಿಚಾರದ ಕುರಿತು ಮಾಹಿತಿ ನೀಡಿದೆ ಈಗ ದೆಹಲಿ ಸರ್ಕಾರ ಕೂಡ ನೀತಿ ಆಯೋಗದ ಸಭೆಗೆ ಬಹಿಷ್ಕಾರ ಹಾಕುವುದು ಬಹುತೇಕ ಖಚಿತವಾಗಿದೆ.
ಹೌದು ಈ ಕುರಿತು ಪ್ರಧಾನಿಗೆ ಪತ್ರ ಬರೆದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ “ಜನರು ಕೇಳುತ್ತಿದ್ದಾರೆ, ಪ್ರಧಾನಿ ಸುಪ್ರೀಂಕೋರ್ಟಿಗೆ ಬದ್ಧರಾಗಿಲ್ಲದಿದ್ದರೆ, ಜನರು ಸಾಮಾನ್ಯರು, ನ್ಯಾಯಕ್ಕಾಗಿ ಎಲ್ಲಿಗೆ ಹೋಗುತ್ತಾರೆ? ನೀತಿ ಆಯೋಗದ ಸಭೆಗೆ ಹಾಜರಾಗಿ ಏನು ಪ್ರಯೋಜನ? ಅಂತ ಪ್ರಶ್ನೆಯನ್ನು ಮಾಡಿದ್ದಾರೆ.


ಸದ್ಯದ ಮಟ್ಟಿಗೆ ದೆಹಲಿ ಹಾಗೂ ಪಂಜಾಬ್ ರಾಜ್ಯದ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಯಿಂದ ದೂರ ಉಳಿದಿರುವುದು ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ಸದ್ಯದ ಮಟ್ಟಿಗೆ ನೀತಿ ಆಯೋಗದ ಸಭೆಗೆ ಪ್ರಮುಖವಾಗಿ ದೆಹಲಿ ಮತ್ತು ಪಂಜಾಬ್ ಸರ್ಕಾರ ಬಹಿಷ್ಕಾರ ಹಾಕಿದ್ದು, ಸಂಜೆಯ ವೇಳೆಗೆ ಇನ್ನಷ್ಟು ರಾಜ್ಯದ ಮುಖ್ಯಮಂತ್ರಿಗಳು ಬಹಿಷ್ಕಾರ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಒಟ್ಟಾರೆಯಾಗಿ ಇದೀಗ ಕೇಂದ್ರದ ಬಿಜೆಪಿ ಸರ್ಕಾರ ಯಾವುದೇ ಕೆಲಸಕ್ಕೆ ಕೈ ಹಾಕಿದ್ದರೂ ಕೂಡ ಅಲ್ಲಿ ಬಹಿಷ್ಕಾರದ ಬಿಸಿ ಮುಟ್ಟುತ್ತಲೇ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಬಹಿಷ್ಕಾರದ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಯಾವ ರೀತಿಯಾದ ಕ್ರಮಗಳನ್ನು ಅನುಸರಿಸುತ್ತದೆ ಅನ್ನೋದನ್ನ ಕಾದು ನೋಡಬೇಕಾಗಿದೆ.