
ಬೆಳಗಾವಿಯ ಆಂಜನೇಯ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಹೆಂಡತಿಯೇ ಪ್ರಿಯಕರನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ ಅನ್ನೋದು ಬಯಲಾಗಿದೆ. ಕೊಲೆಯಾದ ಸಂತೋಷ ಪದ್ಮಣ್ಣನ್ನವರ ಸಹೋದರ ರಾಜು ಈ ಬಗ್ಗೆ ಆರೋಪ ಮಾಡಿದ್ದಾರೆ.
ಕಳೆದ ಐದಾರು ತಿಂಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಯುವಕನ ಜೊತೆಗೆ ಉಮಾ ಪರಿಚಯವಾಗಿತ್ತು. ಆತ ಮಂಗಳೂರು ಮೂಲದ ಯುವಕನಾಗಿದ್ದನು. ಪ್ರಿಯಕರನ ಜೊತೆಗೆ ಸೇರಿಕೊಂಡು ಸಂತೋಷನನ್ನ ಕೊಲೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಮೊದಲಿಗೆ ಕರೆಂಟ್ ಶಾಕ್ ಕೊಟ್ಟಿದ್ದಾರೆ, ಕೈಗೆ ಇಂಜೆಕ್ಷನ್ ಹಾಕಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ತಲೆ ದಿಂಬು ರೂಮ್ನಿಂದ ಹೊರಗೆ ಬಿದ್ದಿದ್ದವು. ಮಗಳು ಸಿಸಿಟಿವಿ ನೋಡಿದಾಗ ಕೊಲೆ ಮಾಡಿದ್ದು ಗೊತ್ತಾಗಿದೆ. ಮನೆಯಲ್ಲಿನ ಸಿಸಿಟಿವಿ ಡಿಲಿಟ್ ಮಾಡಿದ್ದಾರೆ ಆದ್ರೇ ಎದುರು ಮನೆ ಸಿಸಿಟಿವಿಯಲ್ಲಿ ಬಂದು ಹೋಗುವುದು ಗೊತ್ತಾಗಿದೆ ಎಂದಿದ್ದಾರೆ.
ಕೊಲೆ ಮಾಡುವ ಸಂದರ್ಭದಲ್ಲಿ ಮನೆಯಲ್ಲಿದ್ದ ಇಬ್ಬರು ಮಕ್ಕಳನ್ನ ರೂಮಲ್ಲಿ ಕೂಡಿ ಹಾಕಿದ್ದರು. ಉಮಾಗೆ ಮತ್ತು ಕೆಲಸದವಳಿಗೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ.










