• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಜಾರ್ಖಂಡ್: ದುರ್ಗಾ ಮಾತೆಯ ಫೋಟೋ ತೆಗೆದ ಆದಿವಾಸಿ ಯುವಕನ ತಲೆ ಬೋಳಿಸಿ ಥಳಿಸಿದ ಮೇಲ್ಜಾತಿಗರು!

Any Mind by Any Mind
October 11, 2022
in ದೇಶ
0
ಜಾರ್ಖಂಡ್: ದುರ್ಗಾ ಮಾತೆಯ ಫೋಟೋ ತೆಗೆದ ಆದಿವಾಸಿ ಯುವಕನ ತಲೆ ಬೋಳಿಸಿ ಥಳಿಸಿದ ಮೇಲ್ಜಾತಿಗರು!
Share on WhatsAppShare on FacebookShare on Telegram

ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ, ಗ್ರಾಮದ ಮುಖ್ಯಸ್ಥರು ಮತ್ತು ಅವರ ಜನರು ದುರ್ಗಾ ವಿಗ್ರಹದ ಛಾಯಾಚಿತ್ರವನ್ನು ತೆಗೆದ ವ್ಯಕ್ತಿ ಸೇರಿದಂತೆ ಐವರು ಆದಿವಾಸಿಗಳನ್ನು ಥಳಿಸಿದ್ದಾರೆ. ಸೋಮವಾರ ಪೊಲೀಸರು ಈ ಮಾಹಿತಿ ನೀಡಿದ್ದಾರೆ. ಫೋಟೋ ತೆಗೆದವರ ತಲೆಯನ್ನೂ ಬೋಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.  ‌

ADVERTISEMENT

ಜಾರ್ಖಂಡ್ ರಾಜಧಾನಿ ರಾಂಚಿಯಿಂದ ಸುಮಾರು 210 ಕಿ.ಮೀ ದೂರದಲ್ಲಿರುವ ಪಾಲ್ಹೆ ಗ್ರಾಮದಲ್ಲಿ ಅಕ್ಟೋಬರ್ 6 ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಬೀಟಾ ಪಂಚಾಯತ್‌ನ ‘ಮುಖಿಯಾ’ ಸೇರಿದಂತೆ ಎಂಟು ಜನರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

“ಸಂತ್ರಸ್ತರು ಬೇಟಾ ಪಂಚಾಯತ್‌ನ ಮುಖಿಯಾದ ರಾಮೇಶ್ವರ್ ಸಿಂಗ್ ಮತ್ತು ಇತರ ಏಳು ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಚಿನಿಯಾ ಪೊಲೀಸ್ ಠಾಣೆಯ ಪ್ರಭಾರಿ ಬೀರೇಂದ್ರ ಹನ್ಸ್ಡಾ ಹೇಳಿದ್ದಾರೆ.

ಚಿನಿಯಾ ಪೊಲೀಸ್ ಠಾಣೆಯ ಪ್ರಭಾರಿ ಬಿರೇಂದ್ರ ಹನ್ಸ್ಡಾ ಮಾತನಾಡಿ, ‘ಸಂತ್ರಸ್ತರು ಬೀಟಾ ಪಂಚಾಯತ್ ಮುಖ್ಯಸ್ಥ ರಾಮೇಶ್ವರ್ ಸಿಂಗ್ ಮತ್ತು ಇತರ ಏಳು ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ’ ಎಂದರು.

ತಲೆ ಬೋಳಿಸಿಕೊಂಡ ವಿನೋದ್ ಕೊರ್ವಾ, “ನಿಮಜ್ಜನದ ದಿನದಂದು ನಾನು ದುರ್ಗಾ ಮೂರ್ತಿಯ ಚಿತ್ರ ತೆಗೆಯುತ್ತಿದ್ದಾಗ, ನಾನು ಕೊರವ ಜಾತಿಗೆ ಸೇರಿದವನು ಎಂದು ಹೇಳಿ ನನ್ನನ್ನು ಪೂಜಾ ಮಂಟಪದಿಂದ ಹೊರಗೆ ಎಸೆಯಲಾಯಿತು. ಇದಾದ ನಂತರ ಅದೇ ಗ್ರಾಮದ ಗಂಗಾ ಕೊರ್ವ, ರೂಪೇಶ್ ಕೊರ್ವ, ಗಂಗಾ ಕೊರ್ವ ಮತ್ತು ಅಜಯ್ ಕೊರ್ವಾ ನನ್ನ ರಕ್ಷಣೆಗೆ ಬಂದರು. ಆದರೆ ಅವರನ್ನು ನಿಂದಿಸಲಾಗಿದೆ ಮತ್ತು ಥಳಿಸಲಾಗಿದೆ.” ಎಂದು ತಿಳಿಸಿದ್ದಾರೆ.

“ಮರುದಿನ ‘ಮುಖೀಯ’ ಮತ್ತು ಇತರ ಮೂವರು ಸಂಧಾನದ ನೆಪದಲ್ಲಿ ಕರೆದರು, ನಂತರ, ನಮ್ಮನ್ನು ಹಗ್ಗಕ್ಕೆ ಕಟ್ಟಿ ಥಳಿಸಲಾಗಿದೆ. ನನ್ನ ತಲೆ ಬೋಳಿಸಿ ವಿಡಿಯೋ ಕೂಡ ಮಾಡಿದ್ದಾರೆ” ಎಂದು ವಿನೋದ್ ಹೇಳಿದ್ದಾರೆ.

ಘಟನೆ ದುರದೃಷ್ಟಕರ ಎಂದು ಬಣ್ಣಿಸಿರುವ ಆದಿಮ್ ಬುಡಕಟ್ಟು ಪರಿಷತ್ ಜಿಲ್ಲಾಧ್ಯಕ್ಷ ನನ್ಹೇಶ್ವರ್ ಕೊರ್ವಾ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.

Previous Post

ಭಾರತ್ ಜೋಡೂ ಯಾತ್ರೆ ನೋಡಿ ಬಿಜೆಪಿಯವರಿಗೆ ನಡುಕ ಉಂಟಾಗಿದೆ | Rahul Gandhi

Next Post

ಸ್ವಯಂಚಾಲಿತ ಮಾಹಿತಿ ವಿನಿಮಯ: ಸ್ವಿಸ್ ಖಾತೆ ವಿವರದ 4 ನೇ ಸೆಟ್ ಭಾರತಕ್ಕೆ ಲಭ್ಯ

Related Posts

ಸಿಜೆಐ ನ್ಯಾ.ಸೂರ್ಯಕಾಂತ್‌ರಿಂದ ಬೆಂಗಳೂರಿನಲ್ಲಿ ಜಾಗತಿಕ ಸುಸ್ಥಿರ ಇಂಧನ ಸಮ್ಮೇಳನ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭಾಗಿ..
Top Story

ಸಿಜೆಐ ನ್ಯಾ.ಸೂರ್ಯಕಾಂತ್‌ರಿಂದ ಬೆಂಗಳೂರಿನಲ್ಲಿ ಜಾಗತಿಕ ಸುಸ್ಥಿರ ಇಂಧನ ಸಮ್ಮೇಳನ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭಾಗಿ..

by ಪ್ರತಿಧ್ವನಿ
April 17, 2026
0

ಬೆಂಗಳೂರು :  ಸುಸ್ಥಿರ ಇಂಧನ, ಭಾರತದ ಕಾರ್ಯಸೂಚಿ 2047-ಇಂಧನ ಭದ್ರತೆಗಾಗಿ ಕಾನೂನು, ನೀತಿ ಹಾಗೂ ಆವಿಷ್ಕಾರಗಳ ಹೊಸ ಚಿಂತನೆ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಏಪ್ರಿಲ್...

Read moreDetails
BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..

BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..

April 17, 2026
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

April 17, 2026
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
Next Post
ಡಾಲರ್‌ ಎದುರು ಸಾರ್ವಕಾಲಿಕ ಮಟ್ಟಕ್ಕೆ ಕುಸಿದ ರೂಪಾಯಿ!

ಸ್ವಯಂಚಾಲಿತ ಮಾಹಿತಿ ವಿನಿಮಯ: ಸ್ವಿಸ್ ಖಾತೆ ವಿವರದ 4 ನೇ ಸೆಟ್ ಭಾರತಕ್ಕೆ ಲಭ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada