• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..

ಪ್ರತಿಧ್ವನಿ by ಪ್ರತಿಧ್ವನಿ
April 17, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..
Share on WhatsAppShare on FacebookShare on Telegram

ಬೆಂಗಳೂರು : ಧಾರವಾಡದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನಿನ್ನೆಯಷ್ಟೇ ಶಾಸಕ ಸೇರಿದಂತೆ ಒಟ್ಟು 19 ಆರೋಪಿಗಳನ್ನು ದೋಷಿಗಳೆಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ತೀರ್ಪು ನೀಡಿತ್ತು.

ADVERTISEMENT
C. N. Manjunath : ಡಿಗ್ರಿ, ಸರ್ಟಿ ಫಿಕೇಟ್‌ಗಳಿಗಿಂತ ಜ್ಞಾನ ಅತ್ಯಂತ ಮುಖ್ಯವಾಗಿದೆ.. #pratidhvani

ಯೋಗೇಶ್ ಗೌಡ ಕೊಲೆ ಪ್ರಕರಣದ (Yogesh Gowda Murder Case) ಅಪರಾಧಿಗಳಿಗೆ ಕೊನೆಗೂ ಶಿಕ್ಷೆ ಪ್ರಕಟವಾಗಿದೆ. ಶಾಸಕ ವಿನಯ್ ಕುಲಕರ್ಣಿ (Vinay Kulkarni) ಸೇರಿದಂತೆ ಎಲ್ಲಾ 16 ಅಪರಾಧಿಗಳಿಗೆ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ನ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ಇದೇ ವೇಳೆ ಯೋಗೇಶ್ ಗೌಡ ಮಕ್ಕಳಿಗೆ ಪರಿಹಾರವಾಗಿ 16 ಲಕ್ಷ ರೂಪಾಯಿ ನೀಡುವಂತೆ ವಿನಯ್ ಕುಲಕರ್ಣಿಗೆ ಸೂಚಿಸಿದ್ದಾರೆ.

ವಿನಯ್ ಕುಲಕರ್ಣಿ, ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದ ಚನ್ನಕೇಶವ ಟಿಂಗರೀಕರ್‌ ಸೇರಿದಂತೆ 17 ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಪ್ರಿಲ್ 15ರಂದು ದೋಷಿಗಳೆಂದು ಘೋಷಿಸಿ ಮಹತ್ವದ ತೀರ್ಪು ನೀಡುವ ಮೂಲಕ ನ್ಯಾಯವನ್ನು ಎತ್ತಿ ಹಿಡಿದಿತ್ತು.

ಆದರೆ ಗುರುವಾರವಾಕ್ಕೆ ಶಿಕ್ಷೆಯ ಪ್ರಮಾಣ ಕಾಯ್ದಿರಿಸಿದ್ದ ಘನ ನ್ಯಾಯಾಲವು ಸಿಬಿಐ ಮತ್ತು ಆರೋಪಿಗಳ ಪರ ವಕೀಲರ ವಾದ ಪ್ರತಿವಾದವನ್ನು ಆಲಿಸಿದೆ. ಬಳಿಕ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಿಬಿಐ ಪರ ವಕೀಲರು ವಾದಿಸಿದ್ದರು. ಬಳಿಕ ಇಂದು ಅಂದರೆ ಏಪ್ರಿಲ್ 17ಕ್ಕೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು.

ಅಲ್ಲದೆ ಪ್ರಕರಣದ 15ನೇ ಅಪರಾಧಿಯಾಗಿರುವ ಪ್ರಭಾವಿ ರಾಜಕಾರಣಿ ಹಾಗೂ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ‌ಯು, ಯೋಗೇಶ್‌ ಗೌಡ ಕೊಲೆಯ ಹಿಂದಿನ ಒಳಸಂಚಿನಲ್ಲಿ ಭಾಗಿಯಾಗಿದ್ದು ಕಂಡು ಬಂದ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಅಷ್ಟೇ ಅಲ್ಲದೆ ಉಳಿದ ಆರೋಪಿಗಳಿಗೂ ಶಿಕ್ಷೆಯ ಪ್ರಮಾಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕಟಿಸಿದೆ.

ಕಾನೂನಿನಲ್ಲಿ ಇರುವ ಗರಿಷ್ಠ ಶಿಕ್ಷೆಯನ್ನು ನೀಡಬೇಕು. ಯಾವುದೇ ಮಾನವೀಯತೆಯನ್ನು ಈ ಪ್ರಕರಣದಲ್ಲಿ ತೋರಬಾರದು. ಸಮಾಜದಲ್ಲಿ ಇದೊಂದು ಮಾದರಿಯಾಗಬೇಕು. ಪ್ರಕರಣದ 7 ನೇ ಆರೋಪಿ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ ಮಾಡಿದ್ದಾರೆ. ರಾಜಕೀಯ ದ್ವೇಷ ಇಟ್ಟುಕೊಂಡು ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಿಬಿಐ ಪ್ರಕರಣ ತೆಗೆದುಕೊಂಡಾಗ ಸಾಕ್ಷ್ಯ ನಾಶ ಮಾಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಸಾಕ್ಷಿಗಳನ್ನು ಹಣಕೊಟ್ಟು ಖರೀದಿ ಮಾಡಿದ್ದಾರೆ. ವಿನಯ್ ಕುಲಕರ್ಣಿ ತನಗೆ ಇರುವ ಅವಕಾಶ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ. ಒಬ್ಬ ಯುವ ರಾಜಕಾರಣಿಯ ಜೀವನ ಅಂತ್ಯಗೊಳಿಸಿದ್ದಾರೆ. ತುಂಬಾ ಉಪಾಯ ಮಾಡಿ ಸಂಚನ್ನು ಮಾಡಿ ಹತ್ಯೆಯನ್ನು ಮಾಡಿದ್ದಾರೆ. ತನ್ನ ರಾಜಕೀಯ ಬಲದಿಂದ ಪ್ರಕರಣ ದಾರಿ ತಪ್ಪಿಸುವ ಪ್ರಯತ್ನ ಮಾಡಲಾಯ್ತು. ಈ ಪ್ರಕರಣ ತಕ್ಷಣವೇ ನಡೆದಿದ್ದೆಲ್ಲ ಪ್ರೀಪ್ಲಾನ್ಡ್ ಎಂದು ಗರಿಷ್ಠ ಶಿಕ್ಷೆಗೆ ಎಎಸ್‌ಜಿ ಕೋರಿದ್ದರು.

Tags: accusedBenglore newsBig BreakingCongress MLAkarnataka newslawLife time PrisonmentPratidhvanivinay kulakarniYogesh Gowda murder case
Previous Post

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

Next Post

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ

Related Posts

ವಿಜಯ್‌ಗೆ ಬೆಂಬಲ ಘೋಷಿಸಿದ ಮುಸ್ಲಿಂ ಲೀಗ್‌ : ನಿರೀಕ್ಷೆಗೂ ಮೀರಿ ಏರಿಕೆಯಾದ ದಳಪತಿ ಸಂಖ್ಯಾಬಲ..
Top Story

ವಿಜಯ್‌ಗೆ ಬೆಂಬಲ ಘೋಷಿಸಿದ ಮುಸ್ಲಿಂ ಲೀಗ್‌ : ನಿರೀಕ್ಷೆಗೂ ಮೀರಿ ಏರಿಕೆಯಾದ ದಳಪತಿ ಸಂಖ್ಯಾಬಲ..

by ಪ್ರತಿಧ್ವನಿ
May 9, 2026
0

ಚೆನೈ : ತಮಿಳುನಾಡಿನಲ್ಲಿ ನೂತನವಾಗಿ ಸರ್ಕಾರ ರಚಿಸುವ ಹಾದಿಯಲ್ಲಿ ಸಾಗುತ್ತಿರುವ ನಟ ವಿಜಯ್‌ ಅವರಿಗೆ ಎದುರಾಗಿದ್ದ ಸಂಕಟಗಳು ದೂರವಾಗಿವೆ. ಆರಂಭದಲ್ಲಿ ಕಾಂಗ್ರೆಸ್‌ ವಿಜಯ್‌ ಬೆಂಬಲಕ್ಕೆ ನಿಂತಿತ್ತು, ಅದಾದ ಬಳಿಕ...

Read moreDetails
ವಿಜಯ್‌ ಸಿಎಂ ಆಗುವ ಹಾದಿ ಸುಗಮ : ಟಿವಿಕೆಗೆ ವಿಸಿಕೆ ಬೇಷರತ್‌ ಬೆಂಬಲ : ಘೋಷಣೆಯಷ್ಟೇ ಬಾಕಿ..

ವಿಜಯ್‌ ಸಿಎಂ ಆಗುವ ಹಾದಿ ಸುಗಮ : ಟಿವಿಕೆಗೆ ವಿಸಿಕೆ ಬೇಷರತ್‌ ಬೆಂಬಲ : ಘೋಷಣೆಯಷ್ಟೇ ಬಾಕಿ..

May 9, 2026
ತಮಿಳುನಾಡು “ಕೈ” ಶಾಸಕರು ಬೆಂಗಳೂರಿಗೆ ಬಂದಿದ್ದಾರಾ..? : ಡಿ.ಕೆ. ಶಿವಕುಮಾರ್ ಏನಂದ್ರು..?

ತಮಿಳುನಾಡು “ಕೈ” ಶಾಸಕರು ಬೆಂಗಳೂರಿಗೆ ಬಂದಿದ್ದಾರಾ..? : ಡಿ.ಕೆ. ಶಿವಕುಮಾರ್ ಏನಂದ್ರು..?

May 9, 2026
ಬಂಗಾಳದಲ್ಲಿ ಬಿಜೆಪಿ ಹೊಸ ಅಧ್ಯಾಯ : ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ

ಬಂಗಾಳದಲ್ಲಿ ಬಿಜೆಪಿ ಹೊಸ ಅಧ್ಯಾಯ : ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ

May 9, 2026
ತಮಿಳುನಾಡು ರಾಜಕೀಯದಲ್ಲಿ ‘ರಿಸಾರ್ಟ್ ಪಾಲಿಟಿಕ್ಸ್’: ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್?

ತಮಿಳುನಾಡು ರಾಜಕೀಯದಲ್ಲಿ ‘ರಿಸಾರ್ಟ್ ಪಾಲಿಟಿಕ್ಸ್’: ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್?

May 9, 2026
Next Post
ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada