• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ರಂಜಾನ್ ನಮಾಜಿಗಿರುವ ಕಟ್ಟುನಿಟ್ಟಿನ ನಿಯಮ, ಕುಂಭಮೇಳಕ್ಕೆ ಯಾಕಿಲ್ಲ?

by
April 21, 2021
in ದೇಶ
0
Share on WhatsAppShare on FacebookShare on Telegram

ರಂಜಾನ್ ಸಮಯದಲ್ಲಿ ನಿಜಾಮುದ್ದೀನ್ ಮಾರ್ಕಾಜ್ ಮಸೀದಿಯಲ್ಲಿ ದಿನಕ್ಕೆ 50 ಜನರಂತೆ ಐದು ಬಾರಿ ನಮಾಜ್ ಮಾಡಲು ದೆಹಲಿ ಹೈಕೋರ್ಟ್ ಗುರುವಾರ ಅವಕಾಶ ನೀಡಿತು.

ADVERTISEMENT

ಮಸೀದಿಯ ಬ್ಯಾಂಗ್ಲೆ ವಾಲ್ನ ಮೊದಲನೇ ಮಹಡಿಯಲ್ಲಿ ಮಾತ್ರ ನಮಾಜ್ ಮಾಡಲು 50 ಜನರಿಗೆ ದಿನಕ್ಕೆ ಐದು ಬಾರಿ ಪ್ರವೇಶಿಸಲು ಅನುಮತಿ ನೀಡುವಂತೆ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರು ನಿಜಾಮುದ್ದೀನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿಗೆ ನಿರ್ದೇಶನ ನೀಡಿದರು.

ಪ್ರಾರ್ಥನೆ ಸಲ್ಲಿಸಲು ಜನರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಮಸೀದಿಯ ಇತರ ಮಹಡಿಗಳನ್ನು ಬಳಸಲು ದೆಹಲಿ ವಕ್ಫ್ ಮಂಡಳಿಯ ಪರವಾಗಿ ಹಿರಿಯ ವಕೀಲ ರಮೇಶ್ ಗುಪ್ತಾ ಕೋರಿದ್ದರು ಆದರೆ ನ್ಯಾಯಾಲಯ ಅದನ್ನು ನಿರಾಕರಿಸಿತು, ಆದರೆ ಇದಕ್ಕಾಗಿ ಎಸ್‌ಹೆಚ್‌ಒ ಮುಂದೆ ಅರ್ಜಿಯನ್ನು ಸರಿಸಲು ಅವಕಾಶ ಇದೆ ಎಂದು ತಿಳಿಸಿತ್ತು. ಇಂತಹ ಯಾವುದೇ ಅರ್ಜಿಯನ್ನು ಮಂಡಳಿಯು ಕಾನೂನಿಗೆ ಅನುಸಾರವಾಗಿ ಎಸ್‌ಹೆಚ್‌ಒ ನಿರ್ಧರಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಹೊರಡಿಸಿದ ಯಾವುದೇ ಅಧಿಸೂಚನೆಗೆ ತನ್ನ ಆದೇಶವು ಒಳಪಟ್ಟಿರುತ್ತದೆ ಎಂದು ತಿಳಿಸಿದೆ.

ರಂಜಾನ್ ನಮಾಜಿಗಿರುವ ಈ ಕಟ್ಟುನಿಟ್ಟಿನ ನಿಯಮ ಕುಂಭಮೇಳಕ್ಕೆ ಯಾಕಿಲ್ಲ?

ಕುಂಭಮೇಳ ಶುರುವಾದ ಮೊದಲ ದಿನದಿಂದ ಇಲ್ಲಿವರೆಗೂ 3000 ಕ್ಕೂ ಹೆಚ್ಚು ಪ್ರಕರಣಗಳು ಹರಿದ್ವಾರದಲ್ಲಿ ದಾಖಲಾಗಿದೆ. ಉತ್ತರಖಂಡ್ ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಉತ್ತರಖಂಡ್ ರಾಜ್ಯದ ಒಟ್ಟು ಸಕ್ರಿಯ ಕರೋನಾ ಕೇಸ್‌ಗಳ ಸಂಖ್ಯೆ 13,546ಕ್ಕೆ ಏರಿಕೆಯಾಗಿದೆ.

ರಂಜಾನ್ ಹಬ್ಬ ಶುರುವಾಗುವ ಮೊದಲೆ ಕಟ್ಟುನಿಟ್ಟಿನ ನಿಯಮಾವಳಿ ತರುವ ಯೋಚನೆ ಮಾಡವ ಸರ್ಕಾರ ಲಕ್ಷಾಂತರ ಮಂದಿ ಸೇರುವ ಕುಂಭಮೇಳದ ಬಗ್ಗೆ ಯೋಚಿಸದೆ ಇರುವುದು ನಿಜಕ್ಕೂ ವಿಪರ್ಯಾಸವೆ ಸರಿ.

ಕಳೆದ ವರ್ಷ ತಬ್ಲಿಗಿ ಜಮಾತ್ / ದೆಹಲಿ ವರ್ಕಝ್ ಪ್ರಕರಣದ ವಿಚಾರದಲ್ಲಿ ಮುಗಿಬಿದ್ದವರು ಕುಂಭಮೇಳದ ವಿಚಾರದಲ್ಲಿ ಮೌನವಹಿಸಿದ್ದೇಕೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಎದ್ದಿವೆ, ಕೆಲ ಸಿನಿಮಾತಾರೆಯರು ಕೂಡ ಪ್ರಶ್ನೆ ಮಾಡಿರುವುದನ್ನು ಕಾಣಬಹುದು.

ಈ ಕುರಿತು ಹಿಂದುಸ್ತಾನ್‌ ಟೈಮ್ಸ್ ನಡೆಸಿದ‌ ಚರ್ಚೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ತೀರಥ್‌ ಸಿಂಗ್ ರಾವತ್‌, ‘ಕುಂಭ ಮೇಳ ಮತ್ತು ನಿಜಾಮುದ್ದೀನ್‌ ಮರ್ಕಜ್‌ ನಡುವೆ ಹೋಲಿಕೆ ಸರಿಯಲ್ಲ. ಮರ್ಕಝ್ ಕಾರ್ಯಕ್ರಮ ಒಳಾಂಗಣದಲ್ಲಿ ನಡೆದಿತ್ತು, ಕುಂಭ ಮೇಳವು ಹೊರಗಡೆ, ಗಂಗಾ ನದಿಯ ತಟದಲ್ಲಿ ನಡೆಯುತ್ತಿದೆ’. ಬರುವವರೆಲ್ಲರನ್ನು ತಪಾಸಣೆ ಮಾಡಿ, ಸ್ಯಾನಿಟೈಜ್ ಮಾಡಿಸಿ ಮಾಸ್ಕ್ ಧರಿಸುವಂತೆ ನೋಡಿಕೊಂಡಿದ್ದೇವೆ ಎಂದು ಸಮರ್ಥಸಿಕೊಂಡಿದ್ದಾರೆ.

ಲಕ್ಷಾಂತರ ಜನ ಸೇರಿರುವ ಕುಂಭಮೇಳದ ಅನೇಕ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಎಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡ ಒಂದೇ ಒಂದು ಪೋಟೋ ಕಾಣಸಿಗುವುದಿಲ್ಲ ಹಾಗೆಯೇ ಮಾಸ್ಕ್ ಧರಿಸಿಲ್ಲ, ಇಂತಹ ದೊಡ್ಡ ಗುಂಪನ್ನು ತಪಾಸಣೆ ಮಾಡಿ ಬಿಡ್ತಿವಿ ಅಂತ ಹೇಳ್ತಿರೋದು ನೋಡಿದರೆ ನಿಜಕ್ಕೂ ಉತ್ತರಖಂಡ್ ಸರ್ಕಾರದ ಬಗ್ಗೆ ಜನಸಾಮಾನ್ಯರಲ್ಲಿ ಪ್ರಶ್ನೆಗಳು ಹುಟ್ಟುವುದು ಸಹಜ.

ಏನೇ ಆಗಲಿ ರಂಜಾನ್ ಪ್ರಾರ್ಥನೆಗೆ ಒಂದು ಕಾನೂನು, ಕುಂಭಮೇಳಕ್ಕೆ ಒಂದು ಕಾನೂನಿನಂತಾಗಿದ್ದು ಸುಳ್ಳಲ್ಲ ಅನ್ನೋದು ಜನರ ಅಭಿಪ್ರಾಯವಾಗಿದೆ.

Previous Post

ಪ. ಬಂ: ಕರೋನಾ ಹಿನ್ನೆಲೆಯಲ್ಲಿ ತನ್ನೆಲ್ಲಾ ಚುನಾವಣಾ ರ‍್ಯಾಲಿಯನ್ನು ರದ್ದುಗೊಳಿಸಿದ ರಾಹುಲ್ ಗಾಂಧಿ

Next Post

ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆಂದ ಮೋದಿ, ರಸಗೊಬ್ಬರದ ಬೆಲೆ‌ ದುಪ್ಪಟ್ಟು ಮಾಡಿದ್ದಾರೆ -ಸಿದ್ದರಾಮಯ್ಯ

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
Next Post
ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆಂದ ಮೋದಿ, ರಸಗೊಬ್ಬರದ ಬೆಲೆ‌ ದುಪ್ಪಟ್ಟು ಮಾಡಿದ್ದಾರೆ -ಸಿದ್ದರಾಮಯ್ಯ

ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆಂದ ಮೋದಿ, ರಸಗೊಬ್ಬರದ ಬೆಲೆ‌ ದುಪ್ಪಟ್ಟು ಮಾಡಿದ್ದಾರೆ -ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada