ಬಲಪಂಥೀಯ ವಿಚಾರಧಾರೆ ಶೇರ್ ಮಾಡಿದ ಗ್ರಾಮೀಣ ವಿಶ್ವವಿದ್ಯಾಲಯ ವಾಟ್ಸ್ ಆಪ್ ಗ್ರೂಪ್ ಸಂದೇಶ -ತಮಗೆ ಸಂಬಂಧಿಸಿಲ್ಲ – ವಿಷ್ಣುಕಾಂತ ಎಸ್. ಚಟಪಲ್ಲಿ ಕುಲಪತಿ

ಗದಗ್ನ ಗ್ರಾಮೀಣಾಭಿವೃದ್ಧಿ ವಿಶ್ವ ವಿದ್ಯಾಲಯ ಉಚಿತ ಆಪ್ತ ಸಮಾಲೋಚನೆ ಹಾಗೂ ಕೋವಿಡ್ ಸೋಂಕಿತರ ಸಂಬಂಧಿಗಳಿಗೆ ಊಟ ಕೊಡುವ ಮೂಲಕ ಸುದ್ದಿಯಾಗಿದ್ದು ಇತ್ತೀಚೆಗೆ ಬಿ ಎಲ್ ಸಂತೋಷ್ ಭಾಷಣದ ವಿಡಿಯೋ ಕೊಂಡಿಯನ್ನು ಹಂಚಿಕೊಂಡು ಮನವಿ ಮಾಡಿದ್ದು ಈ ವಿಶ್ವವಿದ್ಯಾಲಯ ಬಲಪಫಥೀಯ ವಿಚಾರಧಾರೆಗಳನ್ನು ಪಸರಿಸುವ ತಾಣವಾಗುತ್ತಿದೆಯೇ ಮತ್ತು ಕೇಸರೀಕರಣವಾಗುತ್ತಿದೆಯೇ ಎಂಬ ಪ್ರಶ್ನೆ ಈಗ ಜನರಲ್ಲಿ ಮೂಡುತ್ತಿದೆ.

ಮಾಧ್ಯಮ ಮಿತ್ರ ಸಂವಹನಕ್ಕಾಗಿ ಇರುವ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಂತೋಷ ಅವರ ಭಾಷಣದ ತುಣುಕು ಶೇರ್ ಮಾಡಿ ವರದಿ ಮಾಡಿ ಎಂದು ಮನವಿ ಮಾಡಿದ್ದು ಈಗ  ವೈರಲ್ ಆಗಿದೆ. ಪ್ರಜ್ಞಾ ಪ್ರವಾಹ ಎಂಬ ಫೇಸ್ ಬುಕ್ ಪೇಜ್ ಕರ್ನಾಟಕ ವಿಭಾಗದ ಲಿಂಕ್ ಅನ್ನು ಶೇರ್ ಮಾಡಲಾಗಿತ್ತು.

ಈ ಗ್ರೂಪ್ ವಿಶ್ವವಿದ್ಯಾಲಯದ ಕಾರ್ಯಕ್ರಮಗಳನ್ನು ಮಾಧ್ಯಮ ಮಿತ್ರರಿಗೆ ತಲುಪಿಸುವ ನಿಟ್ಟಿನಲ್ಲಿ ಮಾಡಲಾಗಿದೆ. ಒಳ್ಳೆಯ ಕಾರ್ಯಕ್ರಮಗಳೂ ಈ ವಿಶ್ವವಿದ್ಯಾಲಯದಿಂದ ಆಗುತ್ತಿವೆ. ಇದಕ್ಕೆ ಕಮೆಂಟ್ ಮಾಡಬೇಕೆಂದರೆ ಓನ್ಲಿ ಅಡ್ಮಿನ್ ಆಪ್ಷನ್ ಇದೆ.

ಭಾಷಣದಲ್ಲಿ ಬಿ ಎಲ್ ಸಂತೋಷ ಅವರು ಕುಂಭಮೇಳದಿಂದ ಕೋವಿಡ್ ಹರಡಿರುವುದು ಸುಳ್ಳು ಹಾಗೂ ಪ್ರಧಾನಿ ಅವರ ಚುನಾವಣಾ ಸಮಾವೇಶವನ್ನು ಸಮರ್ಥಿಸಿಕೊಳ್ಳುವ ಸಂದೇಶಗಳಿವೆ. ಇಂತಹ ಸಂದೇಶಗಳು ಈ ವಿಶ್ವವಿದ್ಯಾಲಯದ ಗ್ರೂಪ್ ನಲ್ಲಿ ಏಕೆ ಬಂದಿತು ಎಂದು ಕೇಳುವ ಮೊದಲೇ ಈ ಸಂದೇಶವನ್ನು ಡಿಲೀಟ್ ಮಾಡಲಾಯಿತು. ಅದರ ಕೆಳಗಡೆ ಈ ಸಂದೇಶ ಪಬ್ಲಿಷ್ ಮಾಡಿದರೆ ನಾವು ಜವಾಬ್ದಾರರಲ್ಲ ಎಂಬ ಖಡಕ್ ಸಂದೇಶ ಕೂಡ ಕೆಳಗಿತ್ತು.

ಇದರ ಬಗ್ಗೆ ಕೇಳಿದಾಗ ಕುಲಪತಿಗಳಾದ ಪ್ರೊ. ವಿಷ್ಣುಕಾಂತ್ ಚಟಪಲ್ಲಿ ಇದು ನಾವು ಮಾಡಿರುವ ಗ್ರೂಪ್ ಅಲ್ಲ. ಮೀಡಿಯಾ ಕೋ ಆರ್ಡಿನೇಟರ್ ಆದ ಪ್ರಶಾಂತ್ ಮೇರವಾಡೆ ಅವರು ಮಾಡಿದ್ದು. ಇದಕ್ಕೂ ವಿಶ್ವವಿದ್ಯಾಲಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.  ರಾಷ್ಟ್ರೀಯ ವಿಚಾರವಾದ ಆತ್ಮನಿರ್ಭರದ ವಿಷಯವನ್ನು ಗ್ರಾಮೀಣ ಹಾಗೂ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಪ್ರಚಾರ ಮಾಡುತ್ತೇವೆ, ಆದರೆ ಈ ಲಿಂಕ್ ಗೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಆದರೂ ಇಂತಹ ವಿಚಾರಗಳು ಏಕೆ ಶೇರ್ ಮಾಡಿದರು, ಇದು ಕೇಸರೀಕರಣದ ಹೆಜ್ಜೆಯೇ ಎಂಬ ವಿಚಾರ ಹಲವರಲ್ಲಿ ಮೂಡಿದ್ದು ದಿಟ. 

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...