ಸುಳ್ಳು ಸುದ್ದಿಗಳನ್ನು ಹರಡುವಿಕೆ ಆರೋಪದ ಮೇಲೆ ಕೇಂದ್ರ ಸರ್ಕಾರ ಮಂಗಳವಾರ (ಆಗಸ್ಟ್ 8) ಎಂಟು ಯುಟ್ಯೂಬ್ ವಾಹಿನಿ ನಿಷೇಧ ಮಾಡಿದೆ.
ಯಹನ್ ಸಚ್ ದೇಖೋ, ಕ್ಯಾಪಿಟಲ್ ಟಿವಿ, ಕೆಪಿಎಸ್ ನ್ಯೂಸ್, ಸರ್ಕಾರಿ ವ್ಲಾಗ್, ಅರ್ನ್ ಟೆಕ್ ಇಂಡಿಯಾ, ಎಸ್‌ಪಿಎನ್9 ನ್ಯೂಸ್, ಎಜುಕೇಷನಲ್ ಡೋಸ್ಟ್ ಮತ್ತು ವರ್ಲ್ಡ್ ಬೆಸ್ಟ್ ನ್ಯೂಸ್ ನಿಷೇಧಕ್ಕೊಳಗಾದ ಎಂಟು ಯೂಟ್ಯೂಬ್ ವಾಹಿನಿ.
ಈ ಎಂಟು ಯೂಟ್ಯೂಬ್ ವಾಹಿನಿ ಪ್ರಮುಖವಾಗಿ ಇತ್ತೀಚೆಗೆ ಲೋಕಸಭೆ ಚುನಾವಣೆ ಹಾಗೂ ಇವಿಎಂ ಯಂತ್ರಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದವು ಎಂದು ಪ್ರೆಸ್ ಇನ್ಫರ್ಮೇಶನ್ ಬ್ಯುರೊ (ಪಿಸಿಬಿ) ಸರ್ಕಾರದ ಗಮನಕ್ಕೆ ತಂದಿತ್ತು. ಅದರ ಆಧಾರದ ಮೇಲೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಎಂಟು ಯೂಟ್ಯೂಬ್ ವಾಹಿನಿ ಮೇಲೆ ಈ ಕ್ರಮ ಕೈಗೊಂಡಿದೆ.
ಇದರಲ್ಲಿ ಎಸ್‌ಪಿಎನ್9 ನ್ಯೂಸ್ ಯೂಟ್ಯೂಬ್ ವಾಹಿನಿ 4.8 ಮಿಲಿಯನ್ ಫಾಲೊವರ್‌ಗಳನ್ನು ಹೊಂದಿತ್ತು. ಇದು 148 ಕೋಟಿ ವೀಕ್ಷಣೆ ಕಂಡಿತ್ತು. ವರ್ಲ್ಡ್ ಬೆಸ್ಟ್ ನ್ಯೂಸ್ ಯೂಟ್ಯೂಟ್ ವಾಹಿನಿ ಸಹ 1.7 ಮಿಲಿಯನ್ ಫಾಲೊವರ್‌ಗಳು ಹಾಗೂ 18 ಕೋಟಿ ವೀಕ್ಷಣೆ ಕಂಡಿತ್ತು.
ಈ ಸುದ್ದಿ ಓದಿದ್ದೀರಾ? ಸಭಾಧ್ಯಕ್ಷ ಓಂ ಬಿರ್ಲಾಗೆ ಅಧೀರ್ ರಂಜನ್ ಚೌಧರಿ ಪತ್ರ | ಬಿಜೆಪಿ ಸಂಸದ ನಿಶಿಕಾಂತ್ ಹೇಳಿಕೆ ವಿರುದ್ಧ ಕ್ರಮಕ್ಕೆ ಆಗ್ರಹ
ಈ ಎಂಟೂ ಯೂಟ್ಯೂಬ್ ವಾಹಿನಿ ಲೋಕಸಭೆ ಚುನಾವಣೆ ಹಾಗೂ ಇವಿಎಂ ಯಂತ್ರ ಸೇರಿದಂತೆ ರಾಷ್ಟ್ರಪತಿ, ಪ್ರಧಾನಿ, ಸಚಿವರು ಹಾಗೂ ಕೇಂದ್ರದ ಯೋಜನೆಗಳು, ಅಧಾರ್, ಪ್ಯಾನ್ ಕಾರ್ಡ್ ಬಗ್ಗೆ ಜನರಿಗೆ ತಪ್ಪು ಸಂದೇಶ ಹಾಗೂ ಸುಳ್ಳು ಮಾಹಿತಿಯನ್ನು ಪಸರಿಸುತ್ತಿದ್ದವು ಎಂದು ಆರೋಪಿಸಲಾಗಿದೆ.
ಕೇಂದ್ರ ಸರ್ಕಾರ ಈ ಹಿಂದೆಯೂ ಇಂತಹದೇ ಆರೋಪದ ಮೇಲೆ ಅನೇಕ ಯುಟ್ಯೂಬ್ ವಾಹಿನಿ ನಿಷೇಧಿಸಿತ್ತು. ಸಂಬಂಧಿಸಿದ ಇಲಾಖೆಯ ಆದೇಶದ ಮೇಲೆ ಯುಟ್ಯೂಬ್ ತಾಂತ್ರಿಕ ಸಿಬ್ಬಂದಿ ವಾಹಿನಿಗಳನ್ನು ನಿಷೇಧಿಸುತ್ತಾರೆ.