
ಸಿಎಂ ಸಿದ್ದರಾಮಯ್ಯ ಟೀಕೆ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಖಡಕ್ ಪ್ರತಿಕ್ರಿಯೆ ಈಗ ಚರ್ಚೆಗೆ ಗ್ರಾಸವಾಗಿದೆ. ಅಮಾವಾಸ್ಯೆ ಸೂರ್ಯ ಎಂದಿದ್ದ ಸಿಎಂಗೆ, “ಸೂರ್ಯನ ಪೂಜೆ ಮಾಡೋರಿಗೂ- ಚಂದ್ರನ ಪೂಜೆ ಮಾಡೋರಿಗೂ ವ್ಯತ್ಯಾಸ ತಿಳ್ಕೊಂಡು ಮುಂದೆ ಈ ರೀತಿಯ ಹೇಳಿಕೆ ಕೊಡಿ” ಎಂದು ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ.
ಕಳೆದ ಎರಡೂವರೆ ವರ್ಷಗಳಲ್ಲಿ ಜನರ ತೆರಿಗೆ ಹಣವನ್ನು ಯಾವ ರೀತಿ ಖರ್ಚು ಮಾಡಲಾಗಿದೆ ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಂಬರುವ ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸಬೇಕಿದೆ.ಈ ಮಾಹಿತಿ ತಿಳಿದುಕೊಳ್ಳುವುದು ಕನ್ನಡಿಗರ ಹಕ್ಕು ಎಂದು ಬಿಜೆಪಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರು ಪತ್ರಿಕೆಯ ಕಿವಿನುಡಿಯಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಪ್ರತಿ ಉತ್ತರ ಅರುಣ್ ಜಾವಗಲ್ ಅವರು ತಮ್ಮ ́ಎಕ್ಷ್ʼ ಖಾತೆಯಲ್ಲಿ ಬರೆದುಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿಕೆಗೆ ಪ್ರತಿಕ್ರಿಯೆ ಹೀಗಿದೆ…
ತೇಜಸ್ವಿ ಸೂರ್ಯ ಸರಿಯಾಗಿ ಹೇಳಿದ್ದಾರೆ. ಸರಕಾರಗಳು ಜನರ ತೆರಿಗೆ ದುಡ್ಡಲ್ಲಿ ನಡೆಯುತ್ತಿರುವುದು ಜನರ ದುಡ್ಡು ಹೇಗೆ ಖರ್ಚು ಮಾಡಲಾಗುತ್ತಿದೆ ಅನ್ನೋದನ್ನು ಕರ್ನಾಟಕ ಸರಕಾರ ಜನರಿಗೆ ಪ್ರತಿ ಹಂತದಲ್ಲೂ ತಿಳಿಸಬೇಕು.
ಅದೇ ಮಾತು ಭಾರತ ಸರ್ಕಾರಕ್ಕು ಅನ್ವಯ ಆಗುತ್ತೆ. ಕರ್ನಾಟಕದ ಪ್ರತಿ 100ರೂಪಾಯಿ ತೆರಿಗೆ ದುಡ್ಡಲ್ಲಿ 98.5ರೂಪಾಯಿ ದೆಹಲಿ ಮತ್ತು ಹೊರ ರಾಜ್ಯಕ್ಕೆ ಹಂಚಲಾಗುತ್ತೆ. ಈ ದುಡ್ಡು ಹೇಗೆ ಖರ್ಚು ಮಾಡಲಾಗುತ್ತಿದೆ ಅನ್ನೋದನ್ನು ಭಾರತ ಸರ್ಕಾರ ಕರ್ನಾಟಕದ ಜನತೆಗೆ ತಿಳಿಸಬೇಕು ಎಂದು ಈ ಮೂಲಕ ಒತ್ತಾಯ ಮಾಡುತ್ತೇನೆ. ಈ ಮಾಹಿತಿ ಕನ್ನಡಿಗ ಹಕ್ಕು ಎಂದು ಅರುಣ್ ಜಾವಗಲ್ ಅವರು ತಮ್ಮ ಎಕ್ಷ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.













