ಗೇ ಡೇಟಿಂಗ್ ಆ್ಯಪ್ ಮೂಲಕ ಯುವಕರನ್ನು ಸೆಳೆದು ಅವರನ್ನು ಬೆದರಿಸಿ ಹಣ ದೋಚುತ್ತಿದ್ದ ತಂಡವೊಂದನ್ನು ಉತ್ತರ ಪ್ರದೇಶ ಕಾನ್ಪುರ ಪೊಲೀಸರು ಬಂಧಿಸಿದ್ದಾರೆ ಎಂದು ಬುಧವಾರ (ಆಗಸ್ಟ್ 9) ವರಿಯಾಗಿದೆ.
ದಿಲೀಪ್ ಸಿಂಗ್ (21), ಅರುಣ್ ರಜಪೂತ್ (22), ವಿಪಿನ್ ಸಿಂಗ್ (21), ಪವನ್ ಕುಮಾರ್ ಸಿಂಗ್ (22), ಪ್ರವೀಣ್ ಸಿಂಗ್ (20) ಮತ್ತು ಬ್ರಿಜೇಂದ್ರ ಸಿಂಗ್ (19) ಬಂಧಿತರು.
ಆರೋಪಿತರು ಬ್ಲೂಡ್ ಎಂಬ ಗೇ ಡೇಟಿಂಗ್ ಆ್ಯಪ್ನಲ್ಲಿ ನಕಲಿ ಪ್ರೊಫೈಲ್ಗಳನ್ನು ರಚಿಸಿ ಯುವಕರಿಗೆ ನಂಬಿಕೆ ಬರುವಂತೆ ಮಾಡುತ್ತಿದ್ದರು. ಬಳಿಕ ನಂಬಿಕೆ ಸಂಪಾದಿಸಿ, ಸಂತ್ರಸ್ತ ಯುವಕರ ಬೆತ್ತಲೆ ಫೋಟೊ ವಿಡಿಯೊಗಳನ್ನು ಪಡೆಯುತ್ತಿದ್ದರು. ನಂತರ ಹಣಕ್ಕೆ ಹಾಗೂ ಇತರ ಲೈಂಗಿಕ ಆಸೆಗಳಿಗೆ ಬೇಡಿಕೆ ಇಟ್ಟು ಅವರಿಗೆ ಕಿರುಕುಳ ಕೊಡುತ್ತಿದ್ದರು ಎಂದು ಕಾನ್ಪುರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಲಖನ್ ಸಿಂಗ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೆಹಲಿ ಸೇವಾ ಮಸೂದೆ | ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ಒಪ್ಪಿಗೆ ಇಲ್ಲದೇ ಹೆಸರು ಸೇರ್ಪಡೆ ; ಎಎಪಿ ವಿರುದ್ಧ ಆರೋಪ
ಕಲ್ಯಾಣಪುರ್ ಪೊಲೀಸ್ ಠಾಣೆಯಲ್ಲಿ ಗೇ ಡೇಟಿಂಗ್ ಆ್ಯಪ್ನ ವಂಚನೆ ಕುರಿತು ಒಬ್ಬ ಯುವಕ ದೂರು ನೀಡಿದ್ದರು. ಇದನ್ನು ತನಿಖೆ ನಡೆಸಿದ ನಂತರ ದಿಲೀಪ್ ಸಿಂಗ್ ಗ್ಯಾಂಗ್ ಅನ್ನು ಬಂಧಿಸಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
ಗೇ ಡೇಟಿಂಗ್ ಆ್ಯಪ್ ನಡೆಸುತ್ತಿದ್ದ ಬಂಧಿತ ಆರೋಪಿಗಳಿಂದ ಲ್ಯಾಪ್ಟಾಪ್, ಮೊಬೈಲ್ಗಳು ಎಟಿಎಂ ಕಾರ್ಡುಗಳು ಹಾಗೂ ಪೊಲೀಸ್ ಸಮವಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲಖನ್ ಸಿಂಗ್ ಮಾಹಿತಿ ನೀಡಿದ್ದಾರೆ.