ದೇಶ

ಪಂಜಾಬ್, ರಾಜಸ್ಥಾನದ ನಂತರ ಛತ್ತೀಸ್ ಘಡ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ

ಈ ವರ್ಷ ಕಾಂಗ್ರೆಸ್ ಪಾಲಿಗೆ ಸಂಕಷ್ಟಗಳ ವರ್ಷದಂತೆ ಗೋಚರಿಸುತ್ತಿದೆ. ಸದ್ಯಕ್ಕೆ ದೇಶದ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳಾಗಿದ್ದು, ಆ ಮೂರು ರಾಜ್ಯಗಳ ಕಾಂಗ್ರೆಸ್ ಘಟಕದಲ್ಲಿ...

Read moreDetails

ಕೋವಿಡ್-19: ಕೇರಳಕ್ಕೆ ದುಬಾರಿಯಾಗಿ ಪರಿಣಮಿಸಿದ ಓಣಂ ಹಾಗೂ ಬಕ್ರೀದ್ ಆಚರಣೆ

ಈ ಬಾರಿಯ ಓಣಂ ಹಾಗೂ ಬಕ್ರೀದ್ ಆಚರಣೆ ಕೇರಳಕ್ಕೆ ಮಾರಕವಾಗಿ ಪರಿಣಮಿಸಿದೆ. ಬರೋಬ್ಬರಿ ಮೂರು ತಿಂಗಳ ಬಳಿಕ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 30 ಸಾವಿರವನ್ನು ದಾಟಿದೆ....

Read moreDetails

ಕೋವಿಡ್-19 ಲಸಿಕೆ ರಕ್ಷಣೆ ಆರು ತಿಂಗಳಲ್ಲಿ ಕಡಿಮೆಯಾಗುತ್ತದೆ: ಯುಕೆ ಸಂಶೋಧನೆ

ಬ್ರಿಟನ್‌ನ ಸಂಶೋಧಕರ ಪ್ರಕಾರ, ಫೈಜರ್/ಬಯೋಎನ್‌ಟೆಕ್ ಮತ್ತು ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಲಸಿಕೆಗಳ ಎರಡು ಡೋಸ್‌ಗಳಿಂದ ನೀಡಲಾಗುವ ಕೋವಿಡ್ -19 ವಿರುದ್ಧ ರಕ್ಷಣೆ ಆರು ತಿಂಗಳಲ್ಲಿ ಮಸುಕಾಗಲು ಆರಂಭವಾಗುತ್ತದೆ ಎಂದು ಯುಕೆ...

Read moreDetails

ತಾಲಿಬಾನಿಗಳ ಶರಿಯಾ ಕಾನೂನು : ಅಪಾಯದಲ್ಲಿ ಅಫ್ಘಾನ್‌ ಸಿನೆಮಾ ಕ್ಷೇತ್ರ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸೃಷ್ಟಿಸಿರುವ ಹರಾಜಕತೆ ಇಡೀ ವಿಶ್ವವನ್ನೇ ಹೌಹಾರಿಸಿದೆ. ಬಂದೂಕುಗಳ ನಳನಳಿಕೆ. ಅಂಧ ಧರ್ಮದ ಕೇಕೆ. ಹೀಗೆ ತಾಲಿಬಾನ್‌ ಅಫ್ಘಾನ್‌ನ್ನರ ಮೂಲಭೂತ ಸ್ವಾಂತ್ರತ್ಯವನ್ನು ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡಿದ್ದಾರೆ....

Read moreDetails

ಲಡಾಖ್ ಬಳಿ ಹತ್ತು ರಸ್ತೆ ಕಾಮಗಾರಿಗೆ ಸಮ್ಮತಿ ಸೂಚಿಸಿದ ವನ್ಯಜೀವಿ ಮಂಡಳಿ

ನವದೆಹಲಿ: ರಾಷ್ಟ್ರೀಯ ವನ್ಯಜೀವಿ ಮಂಡಳಿ (NWBL) ಲಡಾಖ್‌ನ ಭಾರತ-ಚೀನಾ ಗಡಿಯಲ್ಲಿ 10 ರಸ್ತೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಈ ತಿಂಗಳು ನಡೆದ ಸಭೆಯಲ್ಲಿ, NWBL ಪರಿಸರ ಸೂಕ್ಷ್ಮ...

Read moreDetails

ಮುಜಾಫರ್ ನಗರ ಗಲಭೆ: ಕಾರಣ ನೀಡದೆ 77 ಪ್ರಕರಣಗಳನ್ನು ಹಿಂಪಡೆದ ಯೋಗಿ ಸರ್ಕಾರ

2013 ರ ಮುಜಾಫರ್ ನಗರ ಗಲಭೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಸೇರಿದಂತೆ 77 ಪ್ರಕರಣಗಳನ್ನು ಯಾವುದೇ ಕಾರಣಗಳನ್ನು ನೀಡದೆ ಉತ್ತರ ಪ್ರದೇಶ ಸರ್ಕಾರ ಹಿಂಪಡೆದಿದೆ ಎಂದು ಸುಪ್ರೀಂ...

Read moreDetails

70 ವರ್ಷಗಳಲ್ಲಿ ಕಾಂಗ್ರೆಸ್‌ ಮಾಡಿದ ಆಸ್ತಿಯನ್ನು ಬಿಜೆಪಿ ಮಾರುತ್ತಿದೆ – ರಾಹುಲ್‌ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರವು ಸರ್ಕಾರಿ ಆಸ್ತಿಯನ್ನು ಖಾಸಗೀಕರಣಗೊಳಿಸುವ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು,  ಸರ್ಕಾರಿ ಆಸ್ತಿಯನ್ನು 3-4...

Read moreDetails

70 ವರ್ಷದಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ ಅನ್ನುವವರೇ, 217 ಯೋಜನೆಗಳಿಗೆ ಕಾಂಗ್ರೆಸಿಗರ ಹೆಸರು ಇಡಲಾಗಿದೆ ಎನ್ನುತ್ತಿದ್ದಾರೆ –ಬಿವಿ ಶ್ರೀನಿವಾಸ್

ನವದೆಹಲಿ: ಬಿಜೆಪಿ ನಾಯಕರಾದ ಸಿ.ಟಿ. ರವಿ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಆಗಬೇಕೆಂದು ಬಟ್ಟೆ‌ ಹೊಲೆಸಿಕೊಂಡಿದ್ದರು. ಆದರೀಗ ಮುಖ್ಯಮಂತ್ರಿ ಸ್ಥಾನ ಸಿಗದೆ ಅವರಿಗೆ ಬುದ್ಧಿ ಭ್ರಮಣೆ...

Read moreDetails

ಆರ್ಥಿಕ ಸಂಕಷ್ಟ: ಭಾರತದಲ್ಲಿ ಸುಮಾರು 1 ಲಕ್ಷದಷ್ಟು ಶಿಶುಮರಣ ಆಗಿರುವ ಸಾಧ್ಯತೆ!

ಕರೋನಾದಿಂದ ಉಂಟಾದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಭಾರತದಲ್ಲಿ ಸುಮಾರು ಒಂದು ಲಕ್ಷದಷ್ಟು ಶಿಶುಮರಣ ಸಂಭವಿಸಿದೆ ಎಂದು ವಿಶ್ವ ಬ್ಯಾಂಕ್‌ ಸಂಶೋಧಕರು ಅಂದಾಜಿಸಿದ್ದಾರೆ. ಕೆಳ ಮತ್ತು ಮಧ್ಯಮ ಆದಾಯದ...

Read moreDetails

ನಾಗರಿಕ ಸೇವಾ ಪರೀಕ್ಷೆಯ ಪ್ರಶ್ನಾ ಪತ್ರಿಕೆಯಲ್ಲಿ ಮುಂದುವರೆದ ಬಿಜೆಪಿ-ಟಿಎಂಸಿ ಸಮರ

ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ನಡುವಿನ ಸಮರ ಈಗ ನಾಗರಿಕ ಸೇವಾ ಆಯೊಗದ ಪರೀಕ್ಷೆಗಳ ರೂಪ ಪಡೆದಿದೆ. ನೇರಾನೇರಾ ವಾಗ್ದಾಳಿಗಳ ನಡುವೆ ಮುಸುಕಿನ ಗುದ್ದಾಟ ಮುಂದುವರೆಯುತ್ತಲೇ ಇದೆ.  UPSC ಪರೀಕ್ಷೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ಪ್ರಚಾರ ನೀಡುವಂತಹ ಪ್ರಶ್ನೆಗಳನ್ನು ಕೇಳಿದ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಲೋಕಸೇವಾ ಆಯೋಗವು ತನ್ನ ಪ್ರಶ್ನಾ ಪತ್ರಿಕೆಯಲ್ಲಿ, ಕೇಂದ್ರ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ ವಿಚಾರಗಳ ಕುರಿತು ಪ್ರಶ್ನೆಗಳನ್ನು ಕೇಳಿದೆ. ಇದರಲ್ಲಿ ಪ್ರಮುಖವಾಗಿ, ಸಾರ್ವಕರ್, ಟೂಲ್ ಕಿಟ್ ವಿವಾದ ಹಾಗೂ ಎನ್ ಆರ್ ಸಿಯ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ.  ಬ್ರಿಟಿಷರಿಗೆ ದಯಾ ಅರ್ಜಿ ಸಲ್ಲಿಸಿದ ಸ್ವಾತಂತ್ರ್ಯ ಹೊರಾಟಗಾರ ಯಾರು? ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಉತ್ತರ ವಿನಾಯಕ ದಾಮೋದರ ಸಾವರ್ಕರ್. ಬಿಜೆಪಿ ಸಾವರ್ಕರ್’ಅನ್ನು ತನ್ನ ಸೈದ್ದಾಂತಿಕ ಗುರು ಎಂದು ನಂಬುತ್ತಾ ಬಂದಿದೆ. ಸಾವರ್ಕರ್ ಈ ದೇಶದ ಅಪ್ರತಿಮ ಸ್ವಾತಂತ್ರ್ಯ ಹೊರಾಟಗಾರ ಎಂಬುದನ್ನು ಪ್ರತಿ ಬಾರಿಯೂ ಬಿಂಬಿಸುವ ಪ್ರಯತ್ನವನ್ನು ಮಾಡುತ್ತಿದೆ. ಇದರಿಂದಾಗಿ, ಸ್ವಾತಂತ್ರ್ಯ ಹೊರಾಟದಲ್ಲಿ RSS ಪಾಲುದಾರಿಕೆಯೂ ಇತ್ತು ಎಂಬುದನ್ನು ನಿರೂಪಿಸಲು ಹೊರಟಿರುವ ಬಿಜೆಪಿಯ ಅಹಂಗೆ ಪೆಟ್ಟು ನೀಡಲು WBPSCಯು ಯತ್ನಿಸಿರುವುದು ಸ್ಪಷ್ಟವಾಗಿ ಗೊಚರವಾಗಿದೆ.  ಇದರೊಂದಿಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಎನ್ ಆರ್ ಸಿ ಹಾಗೂ ‘ಟೂಲ್ ಕಿಟ್’ ವಿವಾದದ ಕುರಿತಾಗಿಯೂ ಪ್ರಶ್ನೆಗಳನ್ನು ಕೇಳಲಾಗಿದೆ.  UPSCಯಲ್ಲಿ ಬಂಗಾಳ ಚುನಾವಣೆಯ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಮುಖ್ಯವಾಗಿ, ಚುನಾವಣೆಯ ನಂತರ ನಡೆದ ಹಿಂಸಾಚಾರವನ್ನು ಕೇಂದ್ರೀಕರಿಸಿ ಪ್ರಶ್ನೆ ತಯಾರಿಸಿದ್ದು ದೀದಿ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ಕುರಿತು ಮಮತಾ ಬ್ಯಾನರ್ಜಿ ಬಹಿರಂಗವಾಗಿ ಕಿಡಿಕಾರಿದ್ದರು ಕೂಡಾ.  “UPSC ಸ್ವತಂತ್ರ ಸಂಸ್ಥೆಯಾಗಿರಬೇಕು. ಆದರೆ, ಬಿಜೆಪಿಯು ತನ್ನ ಪ್ರಶ್ನೆಗಳನ್ನು UPSC ಮುಖಾಂತರ ಕೇಳುತ್ತಿದೆ. ರೈತ ಪ್ರತಿಭಟನೆಯ ಕುರಿತು ಕೇಳಲಾದ ಪ್ರಶ್ನೆಯೂ ರಾಜಕೀಯ ಪ್ರೇರಿತವಾಗಿದೆ. ಬಿಜೆಪಿಯು UPSCಯಂತಹ ಆಯೋಗವನ್ನು ಸರ್ವನಾಶ ಮಾಡುತ್ತಿದೆ,” ಎಂದಿದ್ದರು.  UPSCಯಲ್ಲಿ ಒಂದು ದೇಶ ಒಂದು ಚುನಾವಣೆ, ರೈತ ಪ್ರತಿಭಟನೆಯ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ರೈತ ಪ್ರತಿಭಟನೆ ರಾಜಕೀಯ ಪ್ರೇರಿತ ಎಂಬ ಕುರಿತು ಪರ ಮತ್ತು ವಿರೋಧ ಅಂಶಗಳ ಟಿಪ್ಪಣಿಯನ್ನು ಕೇಳಲಾಗಿತ್ತು.  ಇದಕ್ಕೆ ಉತ್ತರವಾಗಿ ಬ್ರಿಟಿಷರಿಗೆ ದಯಾ ಅರ್ಜಿ ಸಲ್ಲಿಸಿದ ಸ್ವಾತಂತ್ರ್ಯ ಹೊರಾಟಗಾರ ಯಾರು? ಎಂಬ ಪ್ರಶ್ನೆ WBPSCಯಲ್ಲಿ ಕೇಳಿ ಕೇಂದ್ರ ಸರ್ಕಾರಕ್ಕೆ ಮುಜುಗರವಾಗುವಂತೆ ಮಾಡಲಾಗಿದೆ. ಈ ಪ್ರಶ್ನೆ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. ವಿ. ಡಿ. ಸಾವರ್ಕರ್, ಬಿ ಜಿ ತಿಲಕ್, ಸುಖದೇವ್ ಥಾಪರ್ ಮತ್ತು ಚಂದ್ರಶೇಖರ್ ಆಝಾದ್. ಈ ನಾಲ್ವರಲ್ಲಿ ದಯಾ ಅರ್ಜಿ ಬರೆದವರು ಸಾವರ್ಕರ್ ಒಬ್ಬರೇ.  ಈ ಪರೀಕ್ಷೆಯನ್ನು ಬರೆದ ಹಲವರು, ಇದು ಸಿಎಂ ಮಮತಾ ಬ್ಯಾನರ್ಜಿಯ ರಾಜಕೀಯ ಪ್ರತಿತಂತ್ರ ಎಂದು ಹೇಳಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ WBPSC ಪರೀಕ್ಷೆಯ ಮೂಲಕ ಸೇಡು ತೀರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೂಡಾ ಕೇಳಿ ಬಂದಿವೆ.  ಆದರೆ, ಈ ಅಪವಾದವನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಟಿಎಂಸಿ, ಇದರಲ್ಲಿ ಯಾವುದೇ ರಾಜಕೀಯ ಮಧ್ಯಪ್ರವೇಶ ನಡೆದಿಲ್ಲ ಎಂದು ಹೇಳಿದೆ. ಪ್ರಶ್ನಾ ಪತ್ರಿಕೆ ತಯಾರಿಸಿದವರು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಿದೆ. ಇದರಲ್ಲಿ ಪಕ್ಷ ಅಥವಾ ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲಿ ಮೂಗು ತೂರಿಸಿಲ್ಲ ಎಂದು ಹೇಳಿದೆ.  ಇದು ಸಾವರ್ಕರ್ ವಿಚಾರದಲ್ಲಿ ಮಾತ್ರವಲ್ಲ ಎನ್ ಆರ್ ಸಿ ವಿಚಾರದಲ್ಲಿಯೂ ಕೇಂದ್ರವನ್ನು ಮುಜಗರಕ್ಕೆ ಈಡು ಮಾಡಲು ಪ್ರಯತ್ನಿಸಿಲಾಗಿದೆ. ಎನ್ ಆರ್ ಸಿಯು ಪ್ರಸ್ತುತ ಯಾವ ಹಂತದಲ್ಲಿದೆ? ಎಂಬ ಪ್ರಶ್ನೆಗೆ ಕರಡು, ಮಸೂದೆ, ಕಾಯ್ದೆ, ಮೇಲಿನ ಯಾವುದೂ ಅಲ್ಲ, ಎಂಬ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ.  ಕೇಂದ್ರ ಸರ್ಕಾರ ದೇಶದಲ್ಲಿರುವ ಅಕ್ರಮ ವಲಸಿಗರನ್ನು ಹೊರದಬ್ಬುತ್ತೇವೆ ಎಂದು ಅಸ್ಸಾಂನಲ್ಲಿ ಎನ್ ಆರ್ ಸಿಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ನಂತರ ಸಂಪೂರ್ಣ ದೇಶದಲ್ಲಿ ಎನ್ ಆರ್ ಸಿಯನ್ನು ಜಾರಿಗೆ ತರಲು ಕೇಂದ್ರ ಹೊರಟಿತ್ತು. ಟಿಎಂಸಿ ಸೇರಿದಂತೆ ಬಹುತೇಕ ವಿಪಕ್ಷಗಳು ಇದನ್ನು ವಿರೋಧಿಸಿದ್ದವು. ದೇಶದಾದ್ಯಂತ ಇದರ ವಿರುದ್ದ ಹೋರಾಟಗಳು ನಡೆದವು.  ಟೂಲ್ ಕಿಟ್ ವಿವಾದದಲ್ಲಿ ಬೆಂಗಳೂರು ಮೂಲದ ಹೊರಾಟಗಾರ್ತಿ ದಿಶಾ ರವಿ ಅವರನ್ನು ಬಂಧಿಸಲಾಗಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರಿಂದ ಕೇಂದ್ರ ಸರ್ಕಾರದ ಮೇಲೆ ವಿಶ್ವದ ದೃಷ್ಟಿ ನೆಟ್ಟಿತ್ತು. ದೆಹಲಿ ಪೊಲೀಸರು ಬೆಂಗಳೂರಿಗೆ ಆಗಮಿಸಿ ದಿಶಾ ರವಿ ಅವರನ್ನು ಬಂಧಿಸಿದ್ದರು. ಈ ಕುರಿತಾಗಿಯೂ WBPSC ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದೆ.  ಇತ್ತೀಚಿಗೆ ಚರ್ಚೆಗೆ ಗ್ರಾಸವಾಗಿದ್ದ ಟೂಲ್ ಕಿಟ್ ಎಂದರೆ ಏನು? ಎಂಬ ಪ್ರಶ್ನೆ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. A) ಆನ್ಲೈನ್ ವಹಿವಾಟಿನ ವೇದಿಕೆ, b) ಹ್ಯಾಕರ್ಸ್’ಗಳಿಗಾಗಿ ಇರುವ ಅಂತರ್ಜಾಲ ತಾಣ, c) ಪ್ರತಿಭಟನಾಕಾರರನ್ನು ಜಮಾಯಿಸಲು ಬಳಸುವ ಕರಪತ್ರಗಳಿಗೆ ಹೋಲುವ ಡಿಜಿಟಲ್ ಮಾಧ್ಯಮ, d) ಇಲೆಕ್ಟ್ರಾನಿಕ್ ವಸ್ತುಗಳ ಸಂಗ್ರಹ ಎಂಬ ನಾಲ್ಕು ಆಯ್ಕೆಗಳಿದ್ದವು.  ಇಲ್ಲಿಯವರೆಗೆ ಕೇವಲ ರಾಜಕೀಯವಾಗಿ ನಡೆಯುತ್ತಿದ್ದ ಬಿಜೆಪಿ-ಟಿಎಂಸಿ ನಡುವಿನ ಮುಖಾಮುಖಿ ಈಗ ಸಾರ್ವಜನಿಕ ಕ್ಷೇತ್ರಗಳಲ್ಲಿಯೂ ಆರಂಭವಾಗಿದೆ. ಚುನಾವಣೆಯಲ್ಲಿ ಕಂಡ ಹೀನಾಯ ಸೋಲಿನ ನಂತರ ಬಿಜೆಪಿಯು ಟಿಎಂಸಿಯನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಪ್ರತಿ ಬಾರಿಯೂ ಟಿಎಂಸಿ ತಕ್ಕ ಉತ್ತರವನ್ನು ನೀಡುತ್ತಿದೆ.

Read moreDetails

ಇಂದೋರ್:‌ ನಕಲಿ ಹೆಸರನ್ನು ಬಳಸುತ್ತಿದ್ದಾನೆ ಎಂದು ಆರೋಪಿಸಿ ಮುಸ್ಲಿಂ ವ್ಯಾಪಾರಿಗೆ ಗುಂಪು ಥಳಿತ

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಬಳೆಗಳ ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಭಾನುವಾರ ಉದ್ರಿಕ್ತ ಗುಂಪೊಂದು ಥಳಿಸಿದೆ. ಹಲ್ಲೆಗೊಳಗಾಗಿರುವ ವ್ಯಕ್ತಿಯು ತನ್ನ ಬಳಿ ಇದ್ದ 10 ಸಾವಿರ ರೂಪಾಯಿಗಳನ್ನು...

Read moreDetails

ತಾಲಿಬಾನ್ ಕ್ರೌರ್ಯವನ್ನು ಬಿಂಬಿಸೋ ಶಮ್ಸಿಯಾ ಹಸ್ಸಾನಿ ಅವರ ಭಿತ್ತಿಚಿತ್ರಗಳು

ಶಮ್ಸಿಯಾ ಹಸ್ಸಾನಿ ಅಫ್ಘಾನಿನ ಪ್ರಸಿದ್ಧ ಭಿತ್ತಿಚಿತ್ರ ಕಲಾವಿದೆ.  ಅಫ್ಘಾನಿಸ್ತಾನದ ಮೊದಲ ಮಹಿಳಾ ಗೀಚುಬರಹ ಮತ್ತು ಬೀದಿ ಕಲಾವಿದೆಯಾಗಿ ಮಹಿಳಾ ಧ್ವನಿಗಳ ದಿಟ್ಟ ಪ್ರಚಾರಕ್ಕೆ ಹೆಸರುವಾಸಿಯಾದ ಅವರು ಆನ್-ಸೈಟ್...

Read moreDetails

ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ಪಕ್ಷದ ಬಾವುಟ: ರಾಷ್ಟ್ರಧ್ವಜಕ್ಕೆ ಅಪಮಾನ ಎಂದ ಪ್ರತಿಪಕ್ಷಗಳು

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜವನ್ನು ಇಟ್ಟಿರುವ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವಿವಾದವನ್ನು...

Read moreDetails

ಸಿಎಎ ಸಮರ್ಥಿಸಿಕೊಳ್ಳಲು ಅಫ್ಘಾನ್ ಉದಾಹರಣೆ ನೀಡಿದ ಕೇಂದ್ರ ಸಚಿವ

ಕೇಂದ್ರ ಸರ್ಕಾರ 2019ರಲ್ಲಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಅಫ್ಘಾನಿಸ್ತಾನದ ಬಿಕ್ಕಟ್ಟನ್ನು ಬಳಸಿಕೊಂಡಿದ್ದಾರೆ. ಪೌರತ್ವ ಕಾಯ್ದೆಯಲ್ಲಿ ತಿದ್ದುಪಡಿ ತರಲು ಕಾರಣವೇನು ಎಂಬದನ್ನು ವಿವರಿಸಲು ಅಫ್ಘಾನ್ ಉದಾಹರಣೆಯನ್ನು ನೀಡಿದ್ದಾರೆ.  ಈ ಕುರಿತಾಗಿ ಟ್ವೀಟ್ ಮಾಡಿರುವ ಹರ್ದೀಪ್ ಸಿಂಗ್ ಅವರು, ನಮ್ಮ ನೆರೆಯ ರಾಷ್ಟ್ರದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನಿಸಿದಾಗ ಪೌರತ್ವ ತಿದ್ದುಪಡಿ ಕಾಯ್ದೆಯ ಮಹತ್ವ ತಿಳಿಯುತ್ತದೆ ಎಂದು ಹೇಳಿದ್ದಾರೆ.  “ನಮ್ಮ ನೆರೆ ರಾಷ್ಟ್ರದಲ್ಲಿ ಘಟಿಸಿರುವ ಇತ್ತೀಚಿನ ಬೆಳವಣಿಗೆಗಳು ಹಾಗೂ ಅಲ್ಲಿನ ಸಿಖ್ ಮತ್ತು ಹಿಂದೂ ಸಮುದಾಯದ ಜನರು ಪಡುತ್ತಿರುವ ಕಷ್ಟಗಳನ್ನು ನೋಡುತ್ತಿದ್ದರೆ,  ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಬೇಕಾದ ಅನಿವಾರ್ಯತೆಯ ಕುರಿತು ನಮಗೆ ತಿಳಿಯುತ್ತದೆ,” ಎಂದು ಅವರು ಹೇಳಿದ್ದಾರೆ.   ಅಫ್ಘಾನಿಸ್ತಾನದಲ್ಲಿ 1996ರಿಂದ 2001ರ ತನಕ ತಾಲಿಬಾನ್ ಆಡಳಿತವಿದಾಗ ಅಲ್ಲಿನ  ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ದ ತಾಲಿಬಾನ್ ಅತ್ಯಂತ ಕಠೋರ ರೀತಿಯಲ್ಲಿ ವ್ಯವಹರಿಸಿತ್ತು. ವಿದೇಶಿಗರು ಹಾಗೂ ಪ್ರಾದೇಶಿಕ ಅಲ್ಪಸಂಖ್ಯಾತರು ಕೂಡಾ ಈ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಒಳಪಟ್ಟಿದ್ದರು.  ಈಗ ಮತ್ತೆ ಅಂತುಹುದೇ ಪರಿಸ್ಥಿತಿ ಮರುಕಳಿಸುವ ಆತಂಕ ಎದುರಾಗಿದೆ. ಈಗಾಗಲೇ ನೂರಾರು ಭಾರತೀಯರನ್ನು ಹಾಗೂ ಅಲ್ಲಿನ  ಹಿಂದೂ, ಸಿಖ್ಖರನ್ನು ಭಾರತಕ್ಕೆ ಕರೆತರಲಾಗಿದೆ.  ಸಿಎಎ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಆಯಾ ದೇಶಗಳ ಅಲ್ಪಸಂಖ್ಯಾತ  ಸಮುದಾಯಗಳಾದ ಹಿಂದೂ, ಜೈನ, ಬೌಧ, ಪಾರ್ಸಿ ಹಾಗೂ ಕ್ರೈಸ್ತ ಧರ್ಮದ ನಾಗರಿಕರಿಗೆ ಭಾರತದ ಪೌರತ್ವ ನೀಡುತ್ತದೆ. ಈ ಕಾಯ್ದೆಯ ಅಡಿಯಲ್ಲಿ ಡಿಸೆಂಬರ್ 31,2014ರ ವರೆಗೆ ಭಾರತಕ್ಕೆ ಆಗಮಿಸಿರುವ ಜನರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸದೇ, ಭಾರತೀಯ  ನಾಗರಿಕರು ಎಂದು ಪರಿಗಣಿಸಲಾಗುತ್ತಿತ್ತು.  ಈ ಕಾಯ್ದೆಯು ಭಾರತದ ಸಾಂವಿಧಾನಿಕ ಆಶಯಗಳಿಗೆ ವಿರುದ್ದವಾದದ್ದು ಎಂಬ ಕಾರಣಕ್ಕೆ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸಂವಿಧಾನಕ್ಕೆ ವಿರುದ್ದವಾದದ್ದು ಎಂಬುದು ಹಲವರ ಅಭಿಪ್ರಾಯವಾಗಿದೆ

Read moreDetails

ಪಶ್ಚಿಮ ಬಂಗಾಳ ವಿಭಜನೆಗೆ ಬೆಂಬಲ ಸೂಚಿಸಿದ ದಿಲೀಪ್ ಘೋಷ್

ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ದಿಲೀಪ್ ಘೋಷ್ ಅವರು ಆಗಸ್ಟ್ 21ರಂದು ರಾಜ್ಯವನ್ನು ಮೂರು ಭಾಗವಾಗಿ ವಿಭಜಿಸುವ ಬೇಡಿಕೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಈಗಿರುವ ಪಶ್ಚಿಮ ಬಂಗಾಳವನ್ನು ವಿಭಜಿಸಿ ಎರಡು ಇತರ ಹೊಸ ರಾಜ್ಯಗಳನ್ನು ಸೃಷ್ಟಿಸುವ ಬೇಡಿಕೆ ಇದಾಗಿದೆ. ರಾಜ್ಯದ ನೈಋತ್ಯ ಭಾಗ ಹಾಗೂ ಜಂಗಲ್ ಮಹಲ್ ಭಾಗವನ್ನು ಈಗಿರುವ ಅಖಂಡ ಪಶ್ಚಿಮ ಬಂಗಾಳದಿಂದ ವಿಭಜನೆ ಮಾಡಬೇಕೆಂದು ಬೇಡಿಕೆ ಇಡಲಾಗಿದೆ.  ವಿಭಜನೆಯ ಬೇಡಿಕೆಗೆ ಬಹಿರಂಗವಾಗಿ ಬೆಂಬಲ ಸೂಚಿಸಿ ಮಾತನಾಡಿರುವ ದಿಲೀಪ್ ಘೋಷ್ ಅವರು, ದೀದಿ ನೇತೃತ್ವದ ಸರ್ಕಾರದ ನಿರ್ಲಕ್ಷ್ಯತನದಿಂದ ಬೇಸತ್ತಿರುವ ಜನರ ದನಿಗಳಿಗೆ ಬೆಂಬಲವಾಗಿ ನಾವು ನಿಲ್ಲುತ್ತೇವೆ, ಎಂದು ಹೇಳಿದ್ದಾರೆ.  ಈ ರೀತಿ ರಾಜ್ಯ ವಿಭಜನೆಗೆ ದನಿಗೂಡಿಸುವುದು ಬಿಜೆಪಿಯ ಮೊದಲ ಪ್ರಯತ್ನವಲ್ಲ. ಈ ಹಿಮದೆ ಡಾರ್ಜಿಲಿಂಗ್ ಮತ್ತು ಅದರ ಆಸುಪಾಸಿನ ಪ್ರದೇಶವನ್ನು ‘ಗೂರ್ಖಾಲ್ಯಾಂಡ್’ ಎಂದು ಘೋಷಿಸಬೇಕೆಂಬ ಇರಾದೆಯಿಂದ ಹುಟ್ಟಿಕೊಂಡಿದ್ದ ಗೂರ್ಖಾ ಜನಮುಕ್ತಿ ಮೋರ್ಚಾವನ್ನು ಬಿಜೆಪಿ ಬೆಂಬಲಿಸಿತ್ತು. ಈ ಪಕ್ಷವು 2008ರಲ್ಲಿ ಅಸ್ಥಿತ್ವಕ್ಕೆ ಬಂದಿತ್ತು. ಆ ನಂತರ 2020ರವರೆಗೆ ಬಿಜೆಪಿ ಇದಕ್ಕೆ ಬೆಂಬಲ ಸೂಚಿಸಿತ್ತು. ಆದರೆ, ವಿಧಾನಸಭೆ ಚುನಾವಣೆಯ ಸೋಲಿನ ನಂತರ ಗೋರ್ಖಾ ಜನಮುಕ್ತಿ ಮೋರ್ಚಾಗೆ ನೀಡಿದ ಬಹಿರಂಗ ಬೆಂಬಲದಿಂದ ಅಲ್ಪಮಟ್ಟಿಗೆ ಬಿಜೆಪಿ ಹಿಂದೆ ಸರಿದಿತ್ತು.  ಆ ಸಂದರ್ಭದಲ್ಲಿ ಮಾತನಾಡಿದ್ದ ದಿಲೀಪ್ ಘೋಷ್ ಅವರು, ಬಿಜೆಪಿಯು ಅಖಂಡ ಪಶ್ಚಿಮ ಬಂಗಾಳವನ್ನು ನೋಡಲು ಇಚ್ಚಿಸುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ ಕೇವಲ ಮೂರು ತಿಂಗಳ ಬಳಿಕ ಮತ್ತೆ ರಾಜ್ಯವನ್ನು ವಿಭಜಿಸುತ್ತ ಬಿಜೆಪಿ ನಾಯಕರು ತಮ್ಮ ಚಿತ್ತ ನೆಟ್ಟಿದ್ದಾರೆ.  ವಿಧಾನಸಭೆಯ ಚುನಾವಣೆಯ ನಂತರ ಪಶ್ಚಿಮ ಬಂಗಾಳದ ಅಧಿಕೃತ ವಿಪಕ್ಷ ನಾಯಕರಾಗಿರುವ ಹೊಸ ಬಿಜೆಪಿ ಸದಸ್ಯ ಸುವೆಂಧು ಅಧಿಕಾರಿ ಅವರು, ನೈಋತ್ಯ ಬಂಗಾಳದ ವಿಭಜನೆಯ ಕುರಿತು ಮಾತನಾಡಿದ್ದರು. ನೈರುತ್ಯ ಬಂಗಾಳದ ಜನರು ಪ್ರತ್ಯೇಕ ರಾಜ್ಯವನ್ನು ಬಯಸುತ್ತಿದ್ದಾರೆ ಎಂದು ಅವರು ಹೇಳಿದ್ದರು. ಆ ವೇಳೆ ಸುವೆಂಧು ಅವರ ಹೇಳಿಕೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡದಿದ್ದ ಪಕ್ಷವು, ಈಗ ಅವರ ಹೇಳಿಕೆಯೊಂದಿಗೆ ತಮ್ಮ ಸಮ್ಮತಿಯನ್ನು ಪಕ್ಷದ ಮುಖಂಡರು ಸೂಚಿಸಿದ್ದಾರೆ.  ಈಗ ಮತ್ತೆ ಗೋರ್ಖಾ ಮುಕ್ತಿ ಮೋರ್ಚಾದೊಂದಿಗೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ, ಗೋರ್ಖಾ ಮೋರ್ಚಾದ ಸಂಸದರಾದ ಜಾನ್ ಬಾರ್ಲಾ ಅವರಿಗೆ ಇತ್ತೀಚಿಗೆ ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನವನ್ನೂ ನೀಡಲಾಗಿದೆ.  ಶನಿವಾರದಂದು ನಡೆದ ಸಭೆಯಲ್ಲಿ ಬಾರ್ಲಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ದಿಲೀಪ್ ಘೋಷ್, ರಾಜ್ಯ ವಿಭಜನೆಯಾದರೆ ಅದಕ್ಕೆ ಮಮತಾ ಬ್ಯಾನರ್ಜಿ ಅವರೇ ಕಾರಣಕರ್ತರಾಗಲಿದ್ದಾರೆ, ಎಂದು ವಾಗ್ದಾಳಿ ನಡೆಸಿದ್ದಾರೆ.  “ಸ್ವಾತಂತ್ರ್ಯ ದೊರೆತು 75 ವರ್ಷವಾದರು ಉತ್ತರ ಬಂಗಾಳ ಏಕೆ ಅಭಿವೃದ್ದಿಯನ್ನು ಕಾಣಲಿಲ್ಲ? ಉತ್ತಮ ಕೆಲಸ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಾಗಿ ಇಲ್ಲಿನ ಜನರು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಇಲ್ಲಿ ಯಾಕೆ ಉತ್ತಮ ಶಾಲೆಗಳಿಲ್ಲ, ಕಾಲೇಜುಗಳಿಲ್ಲ? ಉತ್ತಮ ಆಸ್ಪತ್ರೆಗಳನ್ನು ಏಕೆ ಕಟ್ಟಿಸಲಿಲ್ಲ? ಕೈಗಾರಿಕೆಗಳನ್ನು ಸ್ಥಾಪಿಸಿ ಇಲ್ಲಿ ಉದ್ಯೋಗಾವಕಾಶಗಳನ್ನು ಏಕೆ ಸೃಷ್ಟಿಸಿಲ್ಲ?,” ಎಂದು ದಿಲೀಪ್ ಘೋಷ್ ಪ್ರಶ್ನಿಸಿದ್ದಾರೆ.  ಇದು ಕೇವಲ ಉತ್ತರ ಬಂಗಾಳದ ಪರಿಸ್ಥಿತಿಯಲ್ಲಿ, ಇದೇ ಪರಿಸ್ಥಿತಿ ಜಂಗಲ್ ಮಹಲ್’ನಲ್ಲಿಯೂ ಇದೆ. ಅಲ್ಲಿನ ಮಹಿಳೆಯರು ಈಗಲೂ ಜೀವನೋಪಾಯಕ್ಕಾಗಿ ‘ಸಾಲ್’ ಹಾಗೂ ‘ಕೆಂಡು’ ಮರಗಳ ಎಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಏಕೆ ಅವರು ಕೆಲಸಕ್ಕಾಗಿ ರಾಮಚಿ, ಒಡಿಶಾ ಹಾಗು ಗುಜರಾತ್ ಕಡೆಗೆ ಮುಖ ಮಾಡಬೇಕು? ಅವರಿಗೆ ಅವರ ಸ್ವಾತಂತ್ರ್ಯವನ್ನು ಅನುಭವಿಸುವ ಹಕ್ಕಿಲ್ಲವೇ? ಇಂತಹ ಬೇಡಿಕೆಯನ್ನು ಅವರು ಮುಂದಿಟ್ಟರೆ ಅದು ‘ಅನ್ಯಾಯ’ವಾಗಲು ಸಾಧ್ಯವೇ ಇಲ್ಲ, ಎಂದು ಘೋಷ್ ಹೇಳಿದ್ದಾರೆ.  ಬಿಜೆಪಿಯ ಈ ನಡೆಯು ಸಾಮಾನ್ಯವಾಗಿಯೇ ಟಿಎಂಸಿಯನ್ನು ಕೆರಳಿಸಿದ್ದು, ಚುನಾವಣೆಯಲ್ಲಿ ಸೋತ ನಂತರ ಆಗಿರುವ ಮುಖಭಂಗವನ್ನು ತಪ್ಪಿಸಲು ಈ ರೀತಿಯ ವಿಭಜನಾತ್ಮಕ ರಾಜಕೀಯವನ್ನು ನಡೆಸುತ್ತಿದೆ ಎಂದು ಆರೋಪಿಸಿದೆ.  ಟಿಎಂಸಿ ರಾಜ್ಯಸಭಾ ಸಂಸದರಾಗಿರುವ ಸುಖೇಂದು ರಾಯ್, ಬಿಜೆಪಿಯು ಪ್ರತ್ಯೇಕತಾವಾದಿಗಳೊಂದಿಗೆ ಶಾಮೀಲಾಗಿ ರಾಜ್ಯವನ್ನು ಒಡೆಯಲು ಪ್ರಯತ್ನಿಸುತ್ತಿದೆ. ಇದರೊಂದಿಗೆ ವಿಧಾನಸಭೆ ಸೋಲಿನ ಮುಖಭಂಗವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ, ಎಂದು ಹೇಳಿದ್ದಾರೆ.  ವಿಭಜನೆಯ ಕೂಗಿಗೆ ಕಾರಣವೇನು? ಕಳೆದ ಬಾರಿಯ ಲೋಕಸಭಾ ಚುನಾವಣೆಯ ವೇಳೆ ಉತ್ತರ ಬಂಗಾಳದಲ್ಲಿ ಬಿಜೆಪಿ ದಾಖಲೆಯ ಮತಗಳನ್ನು ಪಡೆದಿತ್ತು. ರಾಜ್ಯದಲ್ಲಿ 18 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಂಗಾಳದಲ್ಲಿ ಆಳವಾಗಿ ಬೇರೂರವ ಲಕ್ಷಣವನ್ನು ತೋರಿಸಿತ್ತು. ಆದರೆ, ನಮತರ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಉತ್ತರ ಬಂಗಾಳದಲ್ಲಿ ಬಿಜೆಪಿಗಿದ್ದ ನೆಲೆಯನ್ನು ಧ್ವಂಸಗೊಳಿಸುವಲ್ಲಿ ಟಿಎಂಸಿ ಸಫಲವಾಯಿತು. ಇದು ಉತ್ತಮ ಬಂಗಾಳವನ್ನು ತಮ್ಮ ಭದ್ರಕೋಟೆಯಾಗಿಸುವ ಬಿಜೆಪಿಯ ತಂತ್ರಗಾರಿಕೆಗೆ ಮಾರಕವಾಗಿ ಪರಿಣಮಿಸಿದೆ. ಒಂದು ವೇಳೆ ಉತ್ತರ ಬಂಗಾಳದಲ್ಲಿ ಮತ್ತೆ ಪಾರುಪತ್ಯ ಸಾಧಿಸುವಲ್ಲಿ ಬಿಜೆಪಿ ವಿಫಲವಾದರೆ, ಸಂಪೂರ್ಣ ಬಂಗಾಳದಲ್ಲಿ ಇದರ ಋಣಾತ್ಮಕ ಪರಿಣಾಮ ಬೀರಲಿದೆ. ಮುಂದಿನ ಲೋಕಸಭಾ ಚುನಾವಣೆಗೆ ದೀದಿ ಈಗಾಗಲೇ ತಯಾರಿ ನಡೆಸುತ್ತಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಳೆದುಕೊಂಡಿರುವ ಕ್ಷೇತ್ರಗಳನ್ನು ಮತ್ತೆ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ. ಈಗ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಉತ್ತರ ಬಂಗಾಳ ಹಾಗೂ ನೈಋತ್ಯ ಬಂಗಾಳದಲ್ಲಿ ತಮ್ಮ ನೆಲೆಯನ್ನು ಮತ್ತಷ್ಟು ವಿಸ್ತರಿಸುವತ್ತ ಬಿಜೆಪಿ ದೃಷ್ಟಿ ನೆಟ್ಟಿದೆ. ಈ ಪ್ರಯತ್ನದಲ್ಲಿ ಬಿಜೆಪಿ ಎಷ್ಟರ ಮಟ್ಟಿಗೆ ಸಫಲವಾಗಬಲ್ಲದು ಎಂದು ಕಾದು ನೋಡಬೇಕಷ್ಟೆ.  

Read moreDetails

ಬಿಜೆಪಿ ವಿರುದ್ಧದ ಪರ್ಯಾಯ ರಾಜಕೀಯ ಶಕ್ತಿಗೆ ಉತ್ತರಪ್ರದೇಶವೇ ಲಿಟ್ಮಸ್ ಟೆಸ್ಟ್!

ಈಗಾಗಲೇ ಪ್ರತಿಪಕ್ಷ ಒಕ್ಕೂಟಕ್ಕೆ ಒಂದು ಸ್ಪಷ್ಟ ರೂಪ ಬರುವ ಮುನ್ನವೇ ಕಾಂಗ್ರೆಸ್ಸಿನ ದೊಡ್ಡಣ್ಣನ ವರಸೆಯ ಬಗ್ಗೆ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಸೇರಿದಂತೆ ಹಲವು ಪಕ್ಷಗಳು ಅಸಮಾಧಾನ...

Read moreDetails

ರೈತ ಹೋರಾಟದ ಮುಂದಿನ ನಡೆಯ ಬಗ್ಗೆ ದಕ್ಷಿಣ ಭಾರತ ರೈತ ಮುಖಂಡರ ಸಭೆ  

  ಚೆನೈ : ದೆಹಲಿ ರೈತರ ಹೋರಾಟ ದೇಶವ್ಯಾಪಿ ಮುಂದಿನ ನಡೆ ಕುರಿತು ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರ ಸಭೆ ಚೆನ್ನೈನಲ್ಲಿ ನಡೆದಿದೆ. ಈ ವೇಳೆ,...

Read moreDetails

RSS ಕೂಡಾ ತಾಲಿಬಾನ್ ಮಾದರಿಯ ಆಡಳಿತವನ್ನು ಬಯಸುತ್ತಿದೆ – ಚೇತನ್

ಅಧಿಕಾರರೂಢ ಬಿಜೆಪಿಯ ಮಾತ್ರ ಸಂಘಟನೆ ಆರ್‌ಎಸ್‌ಎಸ್‌ ಕೂಡಾ ಭಾರತದಲ್ಲಿ ತಾಲಿಬಾನ್‌ ಮಾದರಿಯ ಸರ್ಕಾರಕ್ಕೆ ಹವಣಿಸುತ್ತಿದೆ, ಆದರೆ ಅಂತಹ ಸರ್ಕಾರವನ್ನು ಸಂಪೂರ್ಣವಾಗಿ ಜಾರಿಗೆ ತರಲು ದು ವಿಫಲವಾಗಿದೆ ಎಂದು...

Read moreDetails

2029ರಲ್ಲಿ ಮಂಗಳ ಗ್ರಹದ ಮಣ್ಣು ಭೂಮಿಗೆ ತರಲಿದ್ದೇವೆ: ಜಪಾನ್ ಬಾಹ್ಯಾಕಾಶ ಸಂಸ್ಥೆ

ಮಂಗಳ ಗ್ರಹದ ಮೂಲ ಮತ್ತು ಅಲ್ಲಿನ ಸಂಭವನೀಯ ಜೀವ ಜಾಲಗಳ ಸುಳಿವುಗಳನ್ನು ಹುಡುಕುವ ಪ್ರಯತ್ನದ ಭಾಗವಾಗಿ ಜಪಾನ್‌ನ ಬಾಹ್ಯಾಕಾಶ ಸಂಸ್ಥೆ ಮಂಗಳ ಗ್ರಹದಿಂದ ಮಣ್ಣಿನ ಮಾದರಿಗಳನ್ನು  ತರಲು...

Read moreDetails

ತಾಲಿಬಾನ್ ಶೈಲಿಯ ದಾಳಿಗೆ ಕರೆ ನೀಡಿ ವಿವಾದಕ್ಕೆ ಸಿಲುಕಿದ ಬಿಜೆಪಿ ಶಾಸಕ

ತ್ರಿಪುರಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷದ ಶಾಸಕರೊಬ್ಬರು ತಮ್ಮ ನಾಲಗೆ ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾರೆ. ಟಿಎಂಸಿ ನಾಯಕರು ಏರ್ಪೋರ್ಟ್’ನಲ್ಲಿ ಇಳಿದ ಕೂಡಲೇ ‘ತಾಲೀಬಾನ್’ ಶೈಲಿಯಲ್ಲಿ ಅವರ ಮೇಲೆ ದಾಳಿ ನಡೆಸಲು ಬಹಿರಂಗವಾಗಿ ಸಂದೇಶ ರವಾನಿಸಿದ್ದಾರೆ.  ತ್ರಿಪುರಾದ ಬೆಲೊನಿಯಾ ವಿಧಾನಸಭಾ ಕ್ಷೇತ್ರದ ಅರುಣ್ ಚಂದ್ರ ಭೌಮಿಕ್ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕರು. ಗುರುವಾರದಂದು ರಾಜ್ಯದ ನೂತನ ಶಿಕ್ಷಣ ಮಂತ್ರಿಯಾದ ಪ್ರತಿಮಾ ಭೌಮಿಕ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವ ವೇಳೆ ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.  ರಾಜ್ಯದಲ್ಲಿ 25 ವರ್ಷಗಳ ಎಡಪಕ್ಷದ ಆಡಳಿತವನ್ನು ಕಿತ್ತೊಗೆದು ಬಿಪ್ಲಬ್ ಕುಮಾರ್ ದೇಬ್ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಿತ್ತು. ಈ ಸರ್ಕಾರವನ್ನು ಟಿಎಂಸಿಯು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ, ಎಂದು ಅವರು ಹೇಳಿದ್ದಾರೆ.  “ಟಿಎಂಸಿ ನಾಯಕರು ಪಶ್ಚಿಮ ಬಂಗಾಳದಿಂದ ಬಂದು ಬಿಪ್ಲಬ್ ದೇಬ್ ಅವರ ಸರ್ಕಾರಕ್ಕೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲಾ ಪ.ಬಂ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೂಚನೆಯ ಮೇರೆಗೆ ನಡೆಯುತ್ತಿದೆ. ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ, ಅವರ ಮೇಲೆ, ತಾಲಿಬಾನ್ ಶೈಲಿಯಲ್ಲಿ ದಾಳಿ ನಡೆಸಿ,” ಎಂದು ಹೇಳಿದ್ದಾರೆ.  ಅವರು ಒಮ್ಮೆ ಏರ್ಪೋರ್ಟ್’ಗೆ ಬಂದಿಳಿದ ತಕ್ಷಣವೇ ಅವರ ಮೇಲೆ ದಾಳಿ ನಡೆಸಬೇಕು. ಬಿಪ್ಲಬ್ ಕುಮಾರ್ ದೇಬ್ ಅವರ ಸರ್ಕರವನ್ನು ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ರಕ್ಷಿಸಬೇಕಿದೆ, ಎಂದು ಹೇಳಿದ್ದಾರೆ.  ಇವರ ಭಾಷಣದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಟೀಕೆಗೆ ಒಳಗಾಗಿದೆ.  ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಎಂಸಿಯ ರಿತಬ್ರತಾ ಬ್ಯಾನರ್ಜಿ ಅವರು, ಸಂಪೂರ್ಣ ವಿಶ್ವವೇ ತಾಲೀಬಾನ್ ಮಾಡಿರುವ ಕುಕೃತ್ಯಗಳನ್ನು ಖಂಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದಂತಹ ಬಿಜೆಪಿ ಶಾಸಕರೊಬ್ಬರು ತಾಲೀಬಾನ್ ಶೈಲಿಯ ದಾಳಿಗೆ ಕರೆ ನೀಡಿದ್ದಾರೆ. ಇದು ತಾಲೀಬಾನ್’ಗೆ ನೀಡಿಉರವ ಬೆಂಬಲವಲ್ಲದೇ ಮತ್ತೇನು?, ಎಂದು ಪ್ರಶ್ನಿಸಿದ್ದಾರೆ.  ಅರುಣ್ ಭೌಮಿಕ್ ಅವರು ಈ ಭಾಷಣ ಮಾಡಿದ ಬೆನ್ನಲ್ಲೇ, ತ್ರಿಪುರಾದಲ್ಲಿ ಬಿಜೆಪಿ ಬೆಂಬಲಿತ ಗೂಂಡಾಗಳು ಟಿಎಂಸಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್’ನಿಂದ ಟಿಎಂಸಿಗೆ ಬಂದಿರುವ ಸುಬಲ್ ಭೌಮಿಕ್ ಅವರು ಹೇಳಿದ್ದಾರೆ. ತ್ರಿಪುರಾದಲ್ಲಿ ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ದ ದಾಳಿ ನಡೆಸಿದ್ದು ಬಿಜೆಪಿ ಕಾರ್ಯಕರ್ತರೇ ಎಂದು ಟೀಕಿಸಿದ್ದಾರೆ.  ತ್ರಿಪುರಾ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಬೇಂದು ಭಟ್ಟಾಚಾರ್ಯ ಅವರು, ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು ನಡೆಸಿದ ದಾಳಿಯ ಕುರಿತು ಆಕ್ರೋಶ ವ್ಯಕ್ತಪಡಿಸುವ ಸಂದರ್ಭದಲ್ಲಿ ಬಂದಂತಹ ಭಾವನೆಯಿಂದ ಈ ರೀತಿಯ ಮಾತುಗಳು ಬಂದಿವೆ. ಪಕ್ಷವು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪ್ರತಿಯೊಬ್ಬರ ವಿರುದ್ದ ಕ್ರಮ ಕೈಗೊಳ್ಳಲಿದೆ. ನಮಗೆ ಸಂವಿಧಾನದ ಮೇಲೆ ಸಂಪೂರ್ಣ ವಿಶ್ವಾಸವಿದೆ, ಎಂದು ಹೇಳಿದ್ದಾರೆ.  ಇತ್ತೀಚಿಗೆ ತಾಲಿಬಾನಿಗಳನ್ನು ಸ್ವಾತಂತ್ರ್ಯ ಯೋಧರು ಎಂಬರ್ಥದಲ್ಲಿ ಬಿಂಬಿಸಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದರೊಬ್ಬರ ವಿರುದ್ದ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿತ್ತು. ಸಂಭಲ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಶಫಿಕುರ್ ರೆಹಮಾನ್ ಬರ್ಕ್ ಅವರು ಈ ರೀತಿಯ ಹೇಳಿಕೆ ನೀಡಿದ್ದರು. ಇದರ ವಿರುದ್ದ ಸರ್ಕಾರವು ಶೀಘ್ರವಾಗಿ ಕ್ರಮ ಕೈಗೊಂಡು ಅವರ ವಿರುದ್ದ ದೇಶದ್ರೋಹದ ಪ್ರಕರಣವನ್ನು ದಾಖಲಿಸಿತ್ತು. ಈಗ ತ್ರಿಪುರಾದಲ್ಲಿ ತಮ್ಮದೇ ಪಕ್ಷವಿರುವುದರಿಂದ ಅರುಣ್ ಭೌಮಿಕ್ ಅವರ ವಿರುದ್ದ ಯಾವ ರೀತಿಯ ಕ್ರಮ ಕೈಗೊಳ್ಳುವುದು ಎಂದು ಕಾದುನೋಡಬೇಕಿದೆ. 

Read moreDetails
Page 366 of 525 1 365 366 367 525

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!