ಬ್ರಿಟನ್‌ನ ಸಂಶೋಧಕರ ಪ್ರಕಾರ, ಫೈಜರ್/ಬಯೋಎನ್‌ಟೆಕ್ ಮತ್ತು ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಲಸಿಕೆಗಳ ಎರಡು ಡೋಸ್‌ಗಳಿಂದ ನೀಡಲಾಗುವ ಕೋವಿಡ್ -19 ವಿರುದ್ಧ ರಕ್ಷಣೆ ಆರು ತಿಂಗಳಲ್ಲಿ ಮಸುಕಾಗಲು ಆರಂಭವಾಗುತ್ತದೆ ಎಂದು ಯುಕೆ ನಡೆಸಿದ ಸಂಶೋಧನೆಯಲ್ಲಿ ತಿಳಿದುಬಂದಿದೆ.
ಫೈಜರ್ ಎರಡು ಡೋಸ್ ಲಸಿಕೆ ಪಡೆದ ಐದರಿಂದ ಆರು ತಿಂಗಳಲ್ಲಿ ಕೋವಿಡ್ -19 ಸೋಂಕನ್ನು ತಡೆಗಟ್ಟುವ ಪ್ರತಿಕಾಯ 88 ರಿಂದ 74 ಪ್ರತಿಶತಕ್ಕೆ ಕುಸಿತವನ್ನು ಕಂಡಿದೆ ಎಂದು ಬ್ರಿಟನ್‌ನ ZOE ಕೋವಿಡ್ ಅಧ್ಯಯನದಲ್ಲಿ ಸಂಗ್ರಹಿಸಿದ ದತ್ತಾಂಶದ ವಿಶ್ಲೇಷಣೆ ತೋರಿಸಿದೆ.
ಆಸ್ಟ್ರಾಜೆನೆಕಾ ಲಸಿಕೆ, ನಾಲ್ಕರಿಂದ ಐದು ತಿಂಗಳ ನಂತರ ಪರಿಣಾಮಕಾರಿತ್ವವು ಶೇಕಡಾ 77 ರಿಂದ 67ಕ್ಕೆ ಕುಸಿದಿದೆ.
ಅಧ್ಯಯನವು ಒಂದು ದಶಲಕ್ಷಕ್ಕೂ ಹೆಚ್ಚು ಆಪ್ ಬಳಕೆದಾರರ ಡೇಟಾವನ್ನು ಆಧರಿಸಿದೆ, ಲಸಿಕೆ ಹಾಕಿಸಿಕೊಳ್ಳದೆ ಸೋಂಕು ತಗುಲಿದವರನ್ನು ಮತ್ತು ಲಸಿಕೆ ಹಾಕಿಸಿದವರನ್ನು ಹೋಲಿಸಿ ನೋಡಿದಾಗ ಲಸಿಕೆಗಳ ರಕ್ಷಣೆ 6 ತಿಂಗಳಲ್ಲಿ ದುರ್ಬಲಗೊಳ್ಳುತ್ತದೆ, ಸೋಂಕಿನಿಂದ ಪಡೆದ ರಕ್ಷಣೆ ದೀರ್ಘಕಾಲ ಉಳಿಯುತ್ತದೆ ಎಂದು ತಿಳಿದು ಬಂದಿದೆ.
ಕಿರಿಯ ವಯಸ್ಸಿನ ಜನರಲ್ಲಿ ಹೆಚ್ಚಿನ ಡೇಟಾ ಅಗತ್ಯವಿದೆ ಏಕೆಂದರೆ ಆರು ತಿಂಗಳ ಹಿಂದೆ ಲಸಿಕೆಗೆ ಭಾಗವಹಿಸಿದ್ದವರು ವಯಸ್ಸಾದವರಾಗಿದ್ದರು. ಲಸಿಕೆಗಳು ಮೊದಲು ಅನುಮೋದಿಸಿದಾಗ ಹಿರಿಯ ವಯಸ್ಸಿನವರಿಗೆ ಆದ್ಯತೆ ನೀಡಲಾಗಿತ್ತು ಎಂದು ಅಧ್ಯಯನದ ಆಥರ್ಸ್ ಹೇಳಿದ್ದಾರೆ.

ZOE ಲಿಮಿಟೆಡ್ ಅನ್ನು ಪರೀಕ್ಷಾ ಕಿಟ್‌ಗಳ ಆಧಾರದ ಮೇಲೆ ಕಸ್ಟಮೈಸ್ ಮಾಡಿದ ಪೌಷ್ಠಿಕಾಂಶದ ಸಲಹೆಯನ್ನು ನೀಡಲು ಮೂರು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. ಕಂಪನಿಯ ZOE ಕೋವಿಡ್ ಸಿಂಪ್ಟಮ್ ಸ್ಟಡಿ ಆಪ್ not-for-profit initiative ಆಗಿದ್ದು ಕಿಂಗ್ಸ್ ಕಾಲೇಜ್ ಲಂಡನ್ ಸಹಯೋಗದೊಂದಿಗೆ ಮತ್ತು ಆರೋಗ್ಯ ಇಲಾಖೆಯಿಂದ ಧನಸಹಾಯ ಪಡೆದಿದೆ.
ಚಳಿಗಾಲದ ವೇಳೆಗೆ ವಯಸ್ಸಾದವರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ರಕ್ಷಣೆ ಶೇಕಡಾ 50 ಕ್ಕಿಂತ ಕಡಿಮೆಯಾಗಬಹುದು ಎಂದು ZOE ಲಿಮಿಟೆಡ್ ಸಹ-ಸಂಸ್ಥಾಪಕ ಮತ್ತು ಅಧ್ಯಯನದ ಪ್ರಧಾನ ತನಿಖಾಧಿಕಾರಿ ಟಿಮ್ ಸ್ಪೆಕ್ಟರ್ ಹೇಳಿದ್ದಾರೆ.
“ಇದು ಕೆಲವು ಕ್ರಮಗಳ ಅಗತ್ಯವನ್ನು ಗಮನಕ್ಕೆ ತರುತ್ತಿದೆ. ಪ್ರಕರಣಗಳು ಇನ್ನೂ ಹೆಚ್ಚಿರುವಾಗ ಮತ್ತು ಸೋಂಕಿನ ಸಾಧ್ಯತೆ ಇನ್ನೂ ಹೆಚ್ಚಿರುವಾಗ ನಾವು ನಿಧಾನವಾಗಿ ರಕ್ಷಣೆಯು ಕಡಿಮೆಯಾಗುವುದನ್ನು ನೋಡಬಹುದು” ಎಂದು ಸ್ಪೆಕ್ಟರ್ ಬಿಬಿಸಿ ದೂರದರ್ಶನಕ್ಕೆ ತಿಳಿಸಿದರು.
ಸೆಪ್ಟೆಂಬರ್‌ನಿಂದ ಹಿರಿಯರಿಗೆ ಮತ್ತು ಅತ್ಯಂತ ದುರ್ಬಲರಿಗೆ ಮೂರನೇ ಶಾಟ್‌ಗಳನ್ನು ನೀಡುವುದು ಅಗತ್ಯವಾಗಬಹುದು ಎಂದು ಉನ್ನತ ಲಸಿಕೆ ಸಲಹೆಗಾರರು ಹೇಳಿದ ನಂತರ ಬ್ರಿಟನ್ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳು ಈ ವರ್ಷದ ಕೊನೆಯಲ್ಲಿ ಕೋವಿಡ್ -19 ಲಸಿಕೆ ಬೂಸ್ಟರ್ ಅಭಿಯಾನಕ್ಕೆ ಯೋಜಿಸುತ್ತಿವೆ.
ಎಂಟು ತಿಂಗಳ ಹಿಂದೆ ತಮ್ಮ ಆರಂಭಿಕ ಕೋರ್ಸ್ ಹೊಂದಿದ್ದ ಅಮೆರಿಕನ್ನರಿಗೆ ಸೆಪ್ಟೆಂಬರ್ ಮಧ್ಯದಲ್ಲಿ ಆರಂಭವಾಗುವ ಮೂರನೇ ಬೂಸ್ಟರ್ ಡೋಸ್ ನೀಡಲು ಯುಎಸ್ ಸರ್ಕಾರ ಸಿದ್ಧತೆ ನಡೆಸಿದೆ.
“ಕೋವಿಡ್ ಹರಡುವುದನ್ನು ತಡೆಯಲು ನಾವು ಕೇವಲ ಲಸಿಕೆಗಳನ್ನು ಅವಲಂಬಿಸಬಾರದು ಎನ್ನುವುದನ್ನು ಇದು ನೆನಪಿಸುತ್ತದೆ” ಎಂದು ಅಧ್ಯಯನದಲ್ಲಿ ಭಾಗವಹಿಸದ ವಿಶ್ವವಿದ್ಯಾಲಯದ ಸೆಲ್ಯುಲಾರ್ ಮೈಕ್ರೋಬಯಾಲಜಿಯ ಸಹಾಯಕ ಪ್ರಾಧ್ಯಾಪಕ ಸೈಮನ್ ಕ್ಲಾರ್ಕ್ ಹೇಳಿದ್ದಾರೆ.
ಜುಲೈನಲ್ಲಿ ಬ್ರಿಟನ್‌ನಲ್ಲಿ ಒಟ್ಟಾರೆ ಪ್ರಕರಣಗಳ ಏರಿಕೆಯಿಂದ ಫಲಿತಾಂಶಗಳು ವಿರೂಪಗೊಂಡಿರಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಒಂದು ಪ್ರತ್ಯೇಕ ಬ್ರಿಟಿಷ್ ಸಾರ್ವಜನಿಕ ಆರೋಗ್ಯ ಅಧ್ಯಯನವು ಕಳೆದ ವಾರ ಫೈಜರ್-ಬಯೋಎನ್ಟೆಕ್ ಅಥವಾ ಅಸ್ಟ್ರಾಜೆನೆಕಾ ಲಸಿಕೆಯಿಂದ ಈಗ ಪ್ರಚಲಿತದಲ್ಲಿರುವ ಕರೋನವೈರಸ್‌ನ ಡೆಲ್ಟಾ ರೂಪಾಂತರದಿಂದ ರಕ್ಷಣೆ ಮೂರು ತಿಂಗಳಲ್ಲಿ ದುರ್ಬಲಗೊಳ್ಳುತ್ತದೆ ಎಂದು ಕಂಡುಹಿಡಿದಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ಫೈಜರ್ ಅಥವಾ ಅಸ್ಟ್ರಾಜೆನೆಕಾ ಲಸಿಕೆಯ ಎರಡನೇ ಡೋಸ್ 90 ದಿನಗಳ ನಂತರ, ಸೋಂಕುಗಳನ್ನು ತಡೆಗಟ್ಟುವಲ್ಲಿ ಅವುಗಳ ಪರಿಣಾಮಕಾರಿತ್ವವು ಕ್ರಮವಾಗಿ 75 ಪ್ರತಿಶತದಿಂದ 61 ಪ್ರತಿಶತಕ್ಕೆ ಇಳಿದಿದೆ. ಎರಡನೇ ಡೋಸ್ ಹಾಕಿಸಿ ಎರಡು ವಾರಗಳ ನಂತರ ಅದು ಕ್ರಮವಾಗಿ ಶೇಕಡಾ 85 ಮತ್ತು 68 ಪ್ರತಿಶತದಿಂದ ಕಡಿಮೆಯಾಗಿದೆ ಎಂದು ಕಂಡುಬಂದಿದೆ.
ಲಸಿಕೆಗಳ ರಕ್ಷಣೆ 6 ತಿಂಗಳಲ್ಲಿ ದುರ್ಬಲಗೊಳ್ಳುತ್ತದೆ, ಸೋಂಕಿನಿಂದ ಪಡೆದ ರಕ್ಷಣೆ ದೀರ್ಘಕಾಲ ಉಳಿಯುತ್ತದೆ. ಭಾರತದಲ್ಲಿ 70% ಸೋಂಕಿತರಾಗಿದ್ದಾರೆಂದರೆ ಸೋಂಕಿನಿಂದ ಪಡೆದ ರಕ್ಷಣೆಯೇ ಕಾಪಾಡುತ್ತದೆ ಎಂಬುದು ಅನೇಕ ಡಾಕ್ಟರ್ಗಳು ಮತ್ತು ತಜ್ಣರ ಅಭಿಪ್ರಾಯ.