1. ಕಳೆದ 30 ವರ್ಷಗಳಿಂದ ನಿರಂತರವಾಗಿ ಒಳಮೀಸಲಾತಿ ಜಾರಿಗಾಗಿ ಹೋರಾಟ ನಡೆಯುತ್ತಿತ್ತು. ಅದಕ್ಕೆ ಅಂತ್ಯ ಹಾಡುವಂತೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ದಿನಾಂಕ 28-10-2024 ರಂದು ಸ್ಪಷ್ಟವಾದ ಹಾಗೂ ಮುತ್ಸದ್ಧಿತನದ ತೀರ್ಮಾನವನ್ನು ತೆಗೆದುಕೊಂಡಿದೆ.
2. ಇತ್ತೀಚೆಗೆ ಸುಪ್ರೀಂಕೋರ್ಟಿನಲ್ಲಿ ಒಳಮೀಸಲಾತಿಯನ್ನು ಕೊಡುವುದು ಸಂವಿಧಾನ ಬದ್ಧವಾದ ಸಂಗತಿ ಎಂದು ತೀರ್ಮಾನವಾದ ನಂತರ ಒಳಮೀಸಲಾತಿ ಪರವಾದ ಹೋರಾಟಗಾರರು, ಹಲವು ಸಚಿವರು, ಶಾಸಕರು ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಡ ಸೃಷ್ಟಿಸಿದ್ದರು. ಇದೇ ಸಂದರ್ಭದಲ್ಲಿ ಹಲವು ಸಭೆಗಳೂ ಸಹ ನಡೆದಿದ್ದವು.
3. ಸುಪ್ರೀಂಕೋರ್ಟು ದಿನಾಂಕ:01-08-2024 ರಂದು ಭಾರತ ಸಂವಿಧಾನದ ಅನುಚ್ಛೇದ 15(4) ಮತ್ತು 16(4) ಗಳಂತೆ ಶಿಕ್ಷಣ ಮತ್ತು ರಾಜ್ಯ ಸರ್ಕಾರದ ಅಧೀನದ ಸೇವೆಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಕಲ್ಪಿಸುವ ಬಗ್ಗೆ State of Punjab & others Vs Davinder singh & others ಸಿವಿಲ್ ಅಪೀಲು ಸಂ:2317/2011ರ ಪ್ರಕರಣದಲ್ಲಿ ಆದೇಶ ಮಾಡುವಾಗ ಎರಡು ವಿಚಾರಗಳನ್ನು ಪ್ರಸ್ತಾಪಿಸಿದೆ;
i. The state Government can sub classify the scheduled castes.
ii. The state must collect the data on the inadequacy of representation in the
services of state because it is used as on indicator of backwardness.
4. 6:1 ರ ಅನುಪಾತದಲ್ಲಿ ಬಹುಮತದ ನಿರ್ಧಾರದೊಂದಿಗೆ ಮಾಡಿರುವ ಈ ಆದೇಶದ ಕುರಿತು ನಿನ್ನೆಯ ಸಚಿವ ಸಂಪುಟದಲ್ಲಿ ವಿವರವಾದ ಚರ್ಚೆ ನಡೆದು, ಈ ಕೆಳಗಿನಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ.
5. [i] ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ: 01-08-2024 ರ ಆದೇಶದಂತೆ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯನ್ನು ಕಲ್ಪಿಸಲು ಸಚಿವ ಸಂಪುಟವು ತಾತ್ವಿಕವಾಗಿ ನಿರ್ಧರಿಸಿದೆ.
[ii] ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಮಿಷನ್ ಆಫ್ ಇನ್‌ಕ್ವೆೈರಿ ಆಕ್ಟ್ 1952 ರಂತೆ ಆಯೋಗವನ್ನು ರಚಿಸಲು ನಿರ್ಧರಿಸಿದೆ.
[iii] ಸದರಿ ಆಯೋಗವು ಎರಡು ತಿಂಗಳ ಒಳಗಾಗಿ ವರದಿ ಸಲ್ಲಿಸಬೇಕೆಂದು ಷರತ್ತು ವಿಧಿಸಲು ತೀರ್ಮಾನಿಸಿದೆ.
[iv] ರಾಜ್ಯ ಸರ್ಕಾರದ ಅಧೀನದ ಸಿವಿಲ್ ಸೇವೆಗಳಲ್ಲಿನ ಹಾಗೂ ಮೀಸಲಾತಿ ಅನ್ವಯವಾಗುವ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಮುಂದಿನ ತೀರ್ಮಾನದವರೆಗೆ ಹೊರಡಿಸಬಾರದೆಂದು ನಿರ್ಧರಿಸಲಾಗಿದೆ.