• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, August 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಾನ ಮರ್ಯಾದೆ ಇದ್ದರೆ ಬೊಮ್ಮಾಯಿ ರಾಜೀನಾಮೆ ನೀಡಲಿ : ಡಿ.ಕೆ. ಶಿವಕುಮಾರ್

Any Mind by Any Mind
April 7, 2023
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಮಾನ ಮರ್ಯಾದೆ ಇದ್ದರೆ ಬೊಮ್ಮಾಯಿ ರಾಜೀನಾಮೆ ನೀಡಲಿ : ಡಿ.ಕೆ. ಶಿವಕುಮಾರ್
Share on WhatsAppShare on FacebookShare on Telegram

ADVERTISEMENT

ಬೆಂಗಳೂರು : ಏ.೦೭: ‘ರಾಜ್ಯದ ನೆಲ, ಜಲ, ಭಾಷೆ ಕಾಪಾಡಿ ಜನರ ಹಿತ ಕಾಯುವ ಪ್ರತಿಜ್ಞೆ ಮೂಲಕ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಾನ ಮರ್ಯಾದೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ನಮ್ಮ ರಾಜ್ಯದ ಗಡಿ ಹಳ್ಳಿಗಳಲ್ಲಿ ಮಹಾರಾಷ್ಟ್ರದ ಬಿಜೆಪಿ ಹಾಗೂ ಶಿವಸೇನೆ ಸರ್ಕಾರ ತಮ್ಮ ಯೋಜನೆ ಜಾರಿ ಮಾಡಲು ಹಣ ನೀಡಿದ್ದಾರೆ. ಇದು ಸರಿಯೇ? ಕಲಾವಿದರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಏನು ಮಾಡುತ್ತಿದ್ದಾರೆ?

ಕನ್ನಡ ನೆಲ, ಜಲ, ಭಾಷೆ ಉಳಿಸಬೇಕಾದವರು ಈ ಬಗ್ಗೆ ಉಸಿರು ಎತ್ತುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ ನಮ್ಮ ರಾಜ್ಯದಲ್ಲಿ ಹೇಗೆ ಯೋಜನೆ ಜಾರಿ ತರಲು ಮುಂದಾಗಿದೆ? ರಾಜ್ಯದ ಹಿತ ರಕ್ಷಣೆ ಮಾಡುವುದಾಗಿ ಹೇಳಿ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿಗಳಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರೇ ಅವರನ್ನು ವಜಾಗೊಳಿಸಬೇಕು. ನಮ್ಮ ಜನರಿಗೆ ಮಹಾರಾಷ್ಟ್ರ ಯೋಜನೆ ನೀಡಲು ಅವರು ಯಾರು? ನಮ್ಮಲ್ಲಿ ಸರ್ಕಾರ ಇಲ್ಲವೇ?’ ಎಂದು ಪ್ರಶ್ನಿಸಿದರು.

ಚಿತ್ರ ನಟರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕೇಳಿದಾಗ, ‘ಯಾರು ಯಾರಿಗೆ ಬೇಕಾದರೂ ಪ್ರಚಾರ ಮಾಡಲಿ, ಸರ್ಕಾರ ಇದ್ದಾಗ ಇದು ಸಾಮಾನ್ಯ’ ಎಂದು ತಿಳಿಸಿದರು.

ರಾಜ್ಯಕ್ಕೆ ಅಮೂಲ್ ಹಾಲು ಪ್ರವೇಶ ಮಾಡಿರುವ ಬಗ್ಗೆ ಕೇಳಿದಾಗ, ‘ ನಂದಿನಿ ಮುಗಿಸಿ ಅಮೂಲ್ ಬೆಳೆಸಲು ಬಿಜೆಪಿ ತೀರ್ಮಾನಿಸಿದೆ. ಆ ಮೂಲಕ ರಾಜ್ಯದ ಹಾಲು ಉತ್ಪಾದಕ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ’ ಎಂದು ತಿಳಿಸಿದರು. ರಘು ಆಚಾರ್ ಸೇರಿದಂತೆ ಕೆಲವರು ಕಾಂಗ್ರೆಸ್ ತೊರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದಾರೆ. ಟಿಕೆಟ್ ಸಿಗದೇ ಇರುವುದಕ್ಕೆ ಬೇಸರ ಸಹಜ. ನಾವು ನಮ್ಮದೇ ಲೆಕ್ಕಾಚಾರದಿಂದ ಟಿಕೆಟ್ ನೀಡಿದ್ದೇವೆ’ ಎಂದು ತಿಳಿಸಿದರು.

ಕೆಲವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಕೇಳಿದಾಗ, ‘ ಮೊದಲು ಬಿಜೆಪಿ ಪಟ್ಟಿ ಬಿಡುಗಡೆ ಆಗಲಿ. ಆನಂತರ ನಾವು ಚರ್ಚೆ ಮಾಡುತ್ತೇವೆ’ ಎಂದರು. ಬಿಜೆಪಿಯಿಂದ ಕಾಂಗ್ರೆಸ್ ಸೇರುವವರು ಬಾಕಿ ಇದ್ದಾರಾ ಎಂದು ಕೇಳಿದಾಗ, ‘ಈಗ ಆ ಬಗ್ಗೆ ಚರ್ಚೆ ಮಾಡುವುದಿಲ್ಲ’ ಎಂದು ತಿಳಿಸಿದರು.

ಉಳಿದ ಕ್ಷೇತ್ರಗಳ ಪಟ್ಟಿ ಯಾವಾಗ ಎಂದು ಕೇಳಿದ ಪ್ರಶ್ನೆಗೆ, ‘ ರಾಜಕಾರಣ ಎಂದರೆ ಚದುರಂಗ ಆಟ. ಬಿಜೆಪಿಯವರು ಆಡುತ್ತಿದ್ದಾರೆ. ಜೆಡಿಎಸ್ ನವರು ಹಾಗೂ ಬಿಜೆಪಿ 224 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದಾರಾ? ನಾವು ಉಳಿದ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ಚರ್ಚೆ ಮಾಡಿದ್ದೇವೆ. ಬಹುತೇಕ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡಿದ್ದೇವೆ. ಅಸಮಾಧಾನ ಇರುವವರನ್ನು ಕರೆದು ಮಾತನಾಡುತ್ತಿದ್ದೇವೆ. ಒಂದು ಕುಟುಂಬ, ಸಂಸಾರದಲ್ಲಿ ಎಲ್ಲರ ಅಭಿಪ್ರಾಯ ಕೇಳಿ, ಸಮಾಧಾನ ಮಾಡಬೇಕು’ ಎಂದು ತಿಳಿಸಿದರು.

ವೈಎಸ್ ವಿ ದತ್ತಾ ಅವರು ಸ್ವಾಭಿಮಾನದ ಸಭೆ ಮಾಡುವುದಾಗಿ ಹೇಳಿರುವ ಬಗ್ಗೆ ಕೇಳಿದಾಗ, ‘ಕಾಂಗ್ರೆಸ್ ಪಕ್ಷಕ್ಕೆ ಯಾರನ್ನೇ ಸೇರಿಸಿಕೊಳ್ಳಬೇಕಾದರೂ ಯಾರಿಗೂ ಟಿಕೆಟ್ ಭರವಸೆ ನೀಡುವುದಿಲ್ಲ. ಬೇಷರತ್ತಿನಿಂದ ಸೇರಿಸಿಕೊಳ್ಳುತ್ತೇವೆ. ಹಾಲಿ ಶಾಸಕರು ಬಂದರೂ ಅವರು ಕಾರ್ಯಕರ್ತರಾಗಿ ದುಡಿಯಲು ಬಯಸುತ್ತೇವೆ, ನಮ್ಮನ್ನು ಬಳಸಿಕೊಳ್ಳಿ ಎಂದು ಹೇಳಿದ್ದಾರೆ. ಕೆಲವರಿಗೆ ಆಕ್ರೋಶ ಇರುತ್ತದೆ. ನಾವು ಅದನ್ನು ಸರಿ ಮಾಡುತ್ತೇವೆ’ ಎಂದು ತಿಳಿಸಿದರು.

Tags: 2023 election2023 Election ResultAICCAll India Congress Committeeassembly electionbengaluruBJPBOMMAIBSYCMcmbommaiCmIbrahimCongress NewsCongress PartyCongress PresidentCongress PressemeetCongress RallyctraviDalit leaderDKSDKShivakumarElection Commissionelection resultFormer Union MinisterGandhi Family LoyalistGulburgaGurumathkalHDDHDKINCIndian National CongressJanasankalpa YatreJDSKalaburagiKannadakannada newsKarnataka ElectionKarnataka Leaderkarnataka newsKharge NewsKPCC presidentkumaraswamylatest news digitalLoP in RajyasabhaMallikarjun KhargeNalin Kumar KateelNew DelhiNewsPancharatna YatrePratidhvaniPresidential CandidateRahul GandhisiddaramaiahSonia GandhiState ElectionVijayasankalpaನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

“ಉಸಿರೇ ಉಸಿರೇ” ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯ

Next Post

‘ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬೆಂಬಲಿಗರಿಂದ ಒತ್ತಡ’ : ಪರೋಕ್ಷವಾಗಿ ಮುಂದಿನ ನಡೆ ತಿಳಿಸಿದ ದತ್ತಾ

Related Posts

ಕೆಲಸದ ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ: ‘ಎಲ್ಲರೂ ಒಂದಾಗಿ ಸೇರೋಣ, ಜೊತೆಯಾಗಿ ಆಡೋಣ’ ಎಂದ ಕೆ.ವಿ. ಪ್ರಭಾಕರ್
Top Story

ಕೆಲಸದ ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ: ‘ಎಲ್ಲರೂ ಒಂದಾಗಿ ಸೇರೋಣ, ಜೊತೆಯಾಗಿ ಆಡೋಣ’ ಎಂದ ಕೆ.ವಿ. ಪ್ರಭಾಕರ್

by ಪ್ರತಿಧ್ವನಿ
August 23, 2026
0

ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಸದಾ ಕೆಲಸದ ಒತ್ತಡದಲ್ಲಿರುವ ಪತ್ರಕರ್ತರಿಗೆ ಕ್ರೀಡೆಯ ಮೂಲಕ ಕೊಂಚ ವಿರಾಮ ಹಾಗೂ ಮನರಂಜನೆ ಒದಗಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಬಿ ಝೆಡ್ ಕಪ್ ಮೀಡಿಯಾ...

Read moreDetails
ಬೆಂಗಳೂರಿನಲ್ಲಿ ‘ಕ್ಲೀನ್ ಅಪ್’ ಅಭಿಯಾನಕ್ಕೆ ವೇಗ: ಬೆಸ್ಕಾಂನಿಂದ ಶೇ.80ರಷ್ಟು ತೆರವು ಕಾರ್ಯ ಪೂರ್ಣ

ಬೆಂಗಳೂರಿನಲ್ಲಿ ‘ಕ್ಲೀನ್ ಅಪ್’ ಅಭಿಯಾನಕ್ಕೆ ವೇಗ: ಬೆಸ್ಕಾಂನಿಂದ ಶೇ.80ರಷ್ಟು ತೆರವು ಕಾರ್ಯ ಪೂರ್ಣ

August 23, 2026
ಸಾವಿನ ಬಳಿಕ ವೃದ್ಧೆಯ ಮನೆಯಲ್ಲಿ ಶಾಕ್‌! ಭಿಕ್ಷೆ ಬೇಡಿ ಕೂಡಿಟ್ಟಿದ್ದ ಹಣ ನೋಡಿ ಬೆಚ್ಚಿಬಿದ್ದ ಜನ 

ಸಾವಿನ ಬಳಿಕ ವೃದ್ಧೆಯ ಮನೆಯಲ್ಲಿ ಶಾಕ್‌! ಭಿಕ್ಷೆ ಬೇಡಿ ಕೂಡಿಟ್ಟಿದ್ದ ಹಣ ನೋಡಿ ಬೆಚ್ಚಿಬಿದ್ದ ಜನ 

August 23, 2026
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನಾಪತ್ತೆ ವದಂತಿಗೆ ತೆರೆ: ‘ನಾನು ಸುರಕ್ಷಿತವಾಗಿದ್ದೇನೆ’ ಎಂದ ಅಧಿಕಾರಿ

IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನಾಪತ್ತೆ ವದಂತಿಗೆ ತೆರೆ: ‘ನಾನು ಸುರಕ್ಷಿತವಾಗಿದ್ದೇನೆ’ ಎಂದ ಅಧಿಕಾರಿ

August 23, 2026
‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವಘಡ: FIR ದಾಖಲು

‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವಘಡ: FIR ದಾಖಲು

August 23, 2026
Next Post
ವೈಎಸ್​​ವಿ ದತ್ತಾಗೆ ‘ಕೈ’ ತಪ್ಪಿದ ಟಿಕೆಟ್​ :ಮುಂದಿನ ನಡೆಗಾಗಿ ಅಭಿಮಾನಿಗಳಿಗೆ ದತ್ತಾ ಬಹಿರಂಗ ಪತ್ರ

‘ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬೆಂಬಲಿಗರಿಂದ ಒತ್ತಡ’ : ಪರೋಕ್ಷವಾಗಿ ಮುಂದಿನ ನಡೆ ತಿಳಿಸಿದ ದತ್ತಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada