ಚಿಕ್ಕಮಗಳೂರು :ಟಿಕೆಟ್ ಪಡೆದವರ ಮೇಲೆ ನನಗೆ ಅಸೂಯೆ ಇಲ್ಲ. ಟಿಕೆಟ್ ಪಡೆದುಕೊಂಡವರಿಗೆ ಒಳ್ಳೆಯದಾಗಲಿ ಎಂದು ಚಿಕ್ಕಮಗಳೂರು ಜಿಲ್ಲೆ ಕುಡೂರಿನ ಯಗಟಿಯಲ್ಲಿ ಹೇಳಿದ್ದಾರೆ. ಎಐಸಿಸಿ ನಾಯಕರು ಟಿಕೆಟ್ ಹಂಚಿಕೆ ಮಾಡುವ ಮುನ್ನ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಬಹುದಿತ್ತು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಪಕ್ಷದ ವರಿಷ್ಠರು ಒಂದು ಬಾರಿಯಾದರೂ ನನ್ನನ್ನು ಸಂಪರ್ಕಿಸಬಹುದಿತ್ತು. ಅವರು ದತ್ತಾ ಬಳಿ ಸ್ವಂತ ಕಾರಿಲ್ಲ. ಬಾಡಿಗೆ ಆಟೋದಲ್ಲಿ ತಿರುಗುತ್ತಾನೆ. ಹೀಗಾಗಿ ದತ್ತಾ ಶಕ್ತಿ ಕ್ಷೇತ್ರದಲ್ಲಿ ಗೌಣವಾಗಿದೆ ಎಂದು ಭಾವಿಸಿದ್ದರಬಹುದು. ಕಾಂಗ್ರೆಸ್ನ ಈ ನಡೆಯಿಂದ ನನ್ನ ಅಭಿಮಾನಿಗಳು ಹಾಗೂ ಬೆಂಬಲಿಗರು ನೋವನ್ನು ಅನುಭವಿಸಿದ್ದಾರೆ ಎಂದು ಹೇಳಿದರು.
ನನ್ನ ಬೆಂಬಲಿಗರು ನನಗೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಡ ಹಾಕುತ್ತಿದ್ದಾರೆ. ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆ ಮುನ್ನ ಯಾವುದೇ ಷರತ್ತು ಹಾಕಿಲ್ಲ. ಆದರೆ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ ಬಳಿಕ ಟಿಕೆಟ್ ನೀಡುತ್ತಾರೆ ಎಂದು ಭಾವಿಸಿದ್ದೆ. ಸಮೀಕ್ಷೆಯ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿತ್ತು ಎಂದು ಹೇಳಿದ್ದಾರೆ .