• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಉಪಚುನಾವಣೆ ಸೋಲು : ಸಿಎಂ ಬೊಮ್ಮಾಯಿಗೆ ಬಿಜೆಪಿ ಹೈಕಮಾಂಡ್ ಕೇಳಿದ ಐದು ಪ್ರಶ್ನೆಗಳೇನು?

ನಚಿಕೇತು by ನಚಿಕೇತು
November 5, 2021
in ಕರ್ನಾಟಕ, ರಾಜಕೀಯ
0
ಉಪಚುನಾವಣೆ ಸೋಲು : ಸಿಎಂ ಬೊಮ್ಮಾಯಿಗೆ ಬಿಜೆಪಿ ಹೈಕಮಾಂಡ್ ಕೇಳಿದ ಐದು ಪ್ರಶ್ನೆಗಳೇನು?
Share on WhatsAppShare on FacebookShare on Telegram

ರಾಜ್ಯದ ಎರಡೂ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಬಂದಾಗಿದೆ. ಸಿಂದಗಿಯಲ್ಲಿ ಬಿಜೆಪಿಗೆ ಸಿಹಿಯಾಗಿದ್ರೆ, ಹಾನಗಲ್ನಲ್ಲಿ ಕಹಿಯ ಅನುಭವವಾಗಿದೆ. ಹೀಗಾಗಿ ಬಿಜೆಪಿ ಹೈ ಕಮಾಂಡ್ ಸೋಲು ಗೆಲುವಿನ ಪರಮಾರ್ಶೆ ಮಾಡಲು ಮುಂದಾಗಿದೆ. ಇದರ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಮತ್ತೆ ದೆಹಲಿ ದಂಡಯಾತ್ರೆಯ ಪ್ಲಾನ್ ಮಾಡಿದ್ದಾರೆ.

ADVERTISEMENT

ಸಿಂದಗಿ, ಹಾನಗಲ್ ಮಿನಿ ಸಮರದಲ್ಲಿ ಮತದಾರ ಬಿಜೆಪಿಗೆ ಬೇವು-ಬೆಲ್ಲದ ರುಚಿಯನ್ನ ಉಣಬಡಿಸಿದ್ದಾನೆ. ಸಿಂದಗಿಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ರೂ, ಹಾನಗಲ್ ಸೋಲು ಸಿಎಂ ಬೊಮ್ಮಾಯಿಗೆ ವೈಯಕ್ತಿಕವಾಗಿ ಕಾಡುತ್ತಿದೆ. ತವರಲ್ಲೇ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಳ್ಳೋಕೆ ಆಗ್ಲಿಲ್ವಾ ಎಂಬ ಚಿಂತೆಯಲ್ಲಿದ್ದಾರೆ. ಈ ಮಧ್ಯೆ ಬಿಜೆಪಿ ಹೈ ಕಮಾಂಡ್ ಸಿಂದಗಿ ಗೆಲುವು ಮತ್ತು ಹಾನಗಲ್ ಸೋಲಿನ ವರದಿ ನೀಡುವಂತೆ ರಾಜ್ಯ ನಾಯಕರನ್ನ ಕೇಳಿದೆ. ಜೊತೆಗೆ ಪಂಚ ಪ್ರಶ್ನೆಗಳನ್ನೂ ಮುಂದಿಟ್ಟಿದೆ.

ಉತ್ತರ ಕೊಡಿ ಎಂದ ಹೈಕಮಾಂಡ್

ಪ್ರಶ್ನೆ 1: ಸಿಎಂ ತವರು ಜಿಲ್ಲೆಯಲ್ಲಿ ಕಮಲ ಅರಳದಿರಲು ಕಾರಣವೇನು?
ಪ್ರಶ್ನೆ 2: ಸಚಿವದ್ವಯರ ತಂತ್ರವೂ ವರ್ಕ್ಔಟ್ ಆಗದೇ ಇರೋದೇಕೆ?
ಪ್ರಶ್ನೆ 3: 2023ಚುನಾವಣೆಯನ್ನ ಯಾವ ನಂಬಿಕೆ ಮೇಲೆ ಎದುರಿಸುವುದು?
ಪ್ರಶ್ನೆ 4: ಬೊಮ್ಮಾಯಿ ನೇತೃತ್ವ ಎಂದಿದ್ದೇ ಉಲ್ಟಾ ಹೊಡೆಯಲು ಕಾರಣವೇ?
ಪ್ರಶ್ನೆ 5: ಹಾನಗಲ್ನಲ್ಲಿ ಸೋಲಿಗೆ ಪ್ರಮುಖವಾಗಿ ಕಾರಣವಾಗಿದ್ದು ಏನು?

ಸಿಎಂ ತವರು ಜಿಲ್ಲೆಯಲ್ಲಿ ಕಮಲ ಅರಳದಿರಲು ಕಾರಣವೇನು? ಅಂತಾ ಚುನಾವಣಾ ಪ್ರಚಾರ ಮಾಡಿದ್ದ ನಾಯಕರನ್ನ ವರಿಷ್ಠರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಸಚಿವದ್ವಯರ ತಂತ್ರವೂ ವರ್ಕ್ಔಟ್ ಆಗದೇ ಇರೋದೇಕೆ ಕಾರಣವೇನು ಅಂತಾನೂ ಪ್ರಶ್ನಿಸಿದ್ದಾರಂತೆ. ಇನ್ನು 2023ಚುನಾವಣೆಯನ್ನ ಯಾವ ನಂಬಿಕೆ ಮೇಲೆ ನಾವು ಎದುರಿಸಬೇಕು? ಬೊಮ್ಮಾಯಿ ನೇತೃತ್ವ ಎಂದಿದ್ದೇ ಉಲ್ಟಾ ಹೊಡೆಯಲು ಕಾರಣವಾಯಿತಾ ಅಥವಾ ಹಾನಗಲ್ನಲ್ಲಿ ಸೋಲಿಗೆ ಪ್ರಮುಖವಾಗಿ ಕಾರಣವಾಗಿದ್ದು ಏನು? ಎಂಬ ಪ್ರಶ್ನೆಯನ್ನ ಹೈ ಕಮಾಂಡ್ ಕೇಳಿದ್ದು, ಇದಕ್ಕೆ ಉತ್ತರ ನೀಡಿ ಅಂತಾ ಕೇಳಿದೆ ಎನ್ನಲಾಗಿದೆ.

ಇನ್ನು ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ದಂಡಯಾತ್ರೆಯ ಪ್ಲಾನ್ ಮಾಡಿದ್ದಾರೆ. ನವೆಂಬರ್ 7 ಅಂದ್ರೆ ಇದೇ ಶನಿವಾರ ಸಿಎಂ ದೆಹಲಿಯ ಫ್ಲೈಟ್ ಏರಲಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಹೈಕಮಾಂಡ್ ನಾಯಕರ ಭೇಟಿಯಾಗಿ ಹಲವು ಮಹತ್ವ ವಿಚಾರಗಳ ಬಗ್ಗೆ ಚರ್ಚಿಸೋ ಸಾಧ್ಯತೆ ಇದೆ.

ದೆಹಲಿಯತ್ತ ಸಿಎಂ ಚಿತ್ತ

  1. ಬೈಎಲೆಕ್ಷನ್ ಮುಗಿದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ
  2. ನವೆಂಬರ್ 7ರ ಶನಿವಾರದಂದು ಬೊಮ್ಮಾಯಿ ದೆಹಲಿ ಪ್ರಯಾಣ
  3. ನವೆಂಬರ್ 7ಕ್ಕೆ ತಾರೀಖಿನಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ
  4. ಸಭೆಯಲ್ಲಿ ಮೋದಿ, ನಡ್ಡಾ, ಅಮಿತ್ ಶಾ ಸೇರಿದಂತೆ ಹಲವರು ಭಾಗಿ
  5. ಈ ಮೀಟಿಂಗ್ಗೆ ಆಗಮಿಸಲಿರೋ ಸಿಎಂ ಬಸವರಾಜ್ ಬೊಮ್ಮಾಯಿ
  6. ದೆಹಲಿ ಭೇಟಿಯ ಸಂದರ್ಭದಲ್ಲಿ ಉಪಚುನಾವಣೆ ಬಗ್ಗೆಯೂ ಚರ್ಚೆ
  7. ದೆಹಲಿ ನಾಯಕರ ಮುಂದೆ ಸೋಲು ಗೆಲುವಿನ ಲೆಕ್ಕಾಚಾರದ ಮಾತು
  8. ಖಾಲಿ ಇರುವ ಸಚಿವ ಸ್ಥಾನ ಭರ್ತಿ ಬಗ್ಗೆಯೂ ಪ್ರತ್ಯೇಕ ಚರ್ಚೆ ಸಾಧ್ಯತೆ

ರಾಜ್ಯದ ಎರಡು ಕ್ಷೇತ್ರಗಳ ಬೈಎಲೆಕ್ಷನ್ ಮುಗಿದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ನವೆಂಬರ್ 7ರ ಶನಿವಾರದಂದು ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ನವೆಂಬರ್ 7ರಂದೇ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಇದ್ದು, ಈ ಸಭೆಯಲ್ಲಿ ಮೋದಿ, ನಡ್ಡಾ, ಅಮಿತ್ ಶಾ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಈ ಮೀಟಿಂಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಉಪಚುನಾವಣೆಯ ಸೋಲು ಗೆಲುವಿನ ಲೆಕ್ಕಾಚಾರದ ಬಗ್ಗೆ ದೆಹಲಿ ನಾಯಕರ ಜೊತೆ ಮಾತನಾಡಲಿದ್ದಾರೆ ಎನ್ನಲಾಗಿದೆ. ಇನ್ನು ಪ್ರಮುಖವಾಗಿ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿಯ ಬಗ್ಗೆಯೂ ಸಿಎಂ ಪ್ರತ್ಯೇಕವಾಗಿ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಉಪಚುನಾವಣೆಯ ಸೋಲು ಗೆಲುವಿನ ಬಗ್ಗೆ ಸಿಎಂ ಮಾತನಾಡಿದ್ದಾರೆ. ಸೋಲಾಗಿರೋದರ ಬಗ್ಗೆ ವಿಮರ್ಶೆ ಮಾಡ್ತಾ ಇದ್ದೀವಿ. ಆದ್ರೆ ಇದು ಮುಂದಿನ ಸಾರ್ವತ್ರಿಕ ಚುನಾವಣೆಗೆ ಮಾರ್ಗಸೂಚಿಯಾಗಲ್ಲ ಅಂತಾ ಬೊಮ್ಮಾಯಿ ಹೇಳಿದ್ದಾರೆ.

ಉಪಚುನಾವಣೆಯ ಬಳಿಕ ಸೋಲು ಗೆಲುವಿನ ಪರಾಮರ್ಶೆಯಲ್ಲಿ ಪಕ್ಷಗಳು ತೊಡಗಿವೆ. ಜೊತೆಗೆ ಇದೇ ಫಲಿತಾಂಶದ ಆಧಾರದ ಮೇಲೆ 2023ರ ಚುನಾವಣೆಗೆ ತಂತ್ರಗಳನ್ನೂ ರೂಪಿಸುತ್ತಿವೆ. ಇದೇ ನಿಟ್ಟಿನಲ್ಲಿ ಬಿಜೆಪಿ ಹೈ ಕಮಾಂಡ್ ಮುಂದಡಿ ಇಟ್ಟಿರೋದು ಸದ್ಯದ ಸಂಗತಿ.

Tags: BJPCongress PartyCovid 19ನರೇಂದ್ರ ಮೋದಿಬಸವರಾಜ ಬೊಮ್ಮಾಯಿಬಿ ಎಸ್ ಯಡಿಯೂರಪ್ಪಬಿಜೆಪಿಬಿಜೆಪಿ ಹೈಕಮಾಂಡ್ಬೈ ಎಲೆಕ್ಷನ್
Previous Post

ಲಸಿಕೆ ಖರೀದಿಸಲು ಸಾಲಕ್ಕೆ ಬೇಡಿಕೆಯಿಟ್ಟ ಕೇಂದ್ರ ; PM-CARES ನಿಧಿ ಎಲ್ಲಿ ಹೋಯಿತು?

Next Post

ಪೆಟ್ರೋಲ್ ಬೆಲೆ 50 ರೂ. ಗೆ ಇಳಿಯಬೇಕು ಎಂದರೆ ಬಿಜೆಪಿಯನ್ನು ಸೋಲಿಸಬೇಕು : ಶಿವಸೇನಾ ಸಂಸದ ಸಂಜಯ್ ರಾವತ್

Related Posts

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ರಾಜಕೀಯ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

by ಪ್ರತಿಧ್ವನಿ
April 24, 2026
0

ಬೆಂಗಳೂರು: ಒಳ ಮೀಸಲಾತಿ ಹಂಚಿಕೆ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ...

Read moreDetails
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
Next Post
2024ರಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ : ಸಂಜಯ್ ರಾವುತ್

ಪೆಟ್ರೋಲ್ ಬೆಲೆ 50 ರೂ. ಗೆ ಇಳಿಯಬೇಕು ಎಂದರೆ ಬಿಜೆಪಿಯನ್ನು ಸೋಲಿಸಬೇಕು : ಶಿವಸೇನಾ ಸಂಸದ ಸಂಜಯ್ ರಾವತ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada