ಇತ್ತೀಚೆಗಷ್ಟೇ ನಮ್ಮ ಮೆಟ್ರೋ ಆನ್ ಲೈನ್ ಟೆಕೆಟ್ ಜಾರಿ ಮಾಡಿತ್ತು. ನೋಡ ನೋಡುತ್ತಲೇ ಪ್ರಯಾಣಿಕರು ಕೂಡ ಆನ್ ಲೈನ್ ಟಿಕೆಟ್ ವ್ಯವಸ್ಥೆಗೆ ಉತ್ತಮ ರೆಸ್ಪಾನ್ಸ್ ಕೂಡ ಕೊಟ್ಟಿದ್ರು. ಇದೇ ಮಾದರಿಯಲ್ಲಿ ಬೆಂಗಳೂರಿನ ಜೀವನಾಡಿ BMTC ಯಲ್ಲೂ ಜಾರಿ ಮಾಡ್ಬೇಕು ಅಂತ ಆಗ್ರಹಿಸಲಾಗಿತ್ತು. ಆದ್ರೆ BMTC ಹೊಸ ಪ್ಲ್ಯಾನ್ ನೊಂದಿಗೆ ಮುಂದೆ ಬಂದಿದೆ.
ಇತ್ತೀಚೆಗೆ ಎಲ್ಲವೂ ಕ್ಯಾಶ್ ಲೆಸ್. ದಿನದಿಂದ ದಿನಕ್ಕೆ ಇಡೀ ಜಗತ್ತೇ ಕ್ಯಾಶ್ ಲೆಸ್ ಕಡೆ ಸಾಗುತ್ತಿದೆ. ಜನರೇ ಕ್ಯಾಶ್ ಲೆಸ್ ವ್ಯವಹಾರಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದಾರೆ. ಈ ವಿಚಾರ ಈಗ BMTCಗೆ ತಲೆನೋವಾಗಿ ಪರಿಣಮಿಸಿದೆ. BMTCಯಲ್ಲಿ ಇತ್ತೀಚೆಗೆ ಟಿಕೆಟ್ ಕೊಂಡು ಚಿಲ್ಲರೆ ವಿಚಾರಕ್ಕೆ ನಿರ್ವಾಹಕ & ಪ್ರಯಾಣಿಕರ ಮಧ್ಯೆ ಗಲಾಟೆ ಆದ ಘಟನೆಗಳೂ ನಡೆದಿದೆ. ಈ ನಿಟ್ಟಿನಲ್ಲಿ ಇದಕ್ಕೆ ಪರಿಹಾರದ ಕಡೆ ಯೋಚಿಸಿರುವ BMTC ಅಧಿಕಾರಿಗಳು ಶೀಘ್ರವೇ BMTC ವಾಲೆಟ್ ವ್ಯವಸ್ಥೆ ಮಾಡಲು ಯೋಚಿಸಿದ್ದಾರೆ. ಇತ್ತೀಚೆಗಷ್ಟೇ ನಮ್ಮ ಮೆಟ್ರೋ ಕೂಡ ಆನ್ ಲೈನ್ ಟಿಕೆಟ್ ಜಾರಿ ಮಾಡಿ ಮತ್ತಷ್ಟು ಜನಸ್ನೇಹಿಯಾಗಿತ್ತು. ಇದೀಗ ಇದೇ ಹಾದಿಯಲ್ಲಿದೆ BMTC.

ಸದ್ಯ BMTC ಜಾರಿ ಮಾಡಲು ಯೋಚಿಸಿರುವ ವಾಲೆಟ್ ಸಿಸ್ಟಮ್ UPI ಮಾದರಿಯಲ್ಲಿ ಇರಲಿದೆ. BMTC ಬಸ್ ದರ ಕಡಿಮೆ ಇರುವ ಕಾರಣ ಆನ್ ಲೈನ್ ಟ್ರಾನ್ಸಾಕ್ಷನ್ ಅಷ್ಟರ ಮಟ್ಟಿಗೆ ಪರಿಣಾಮಕಾರಿ ಆಗಿರುವುದಿಲ್ಲ. ಹೀಗಾಗು BMTC ವಿಶೇಷವಾದ ವಾಕೆಟ್ ಸಿಸ್ಟಮ್ ಅನ್ನು ಜಾರಿಗೆ ತರಲು ಮುಂದಾಗಿದೆ. ಈಗಾಗಲೇ ಈ ಬಗ್ಗೆ ಹಲವು ಸುತ್ತಿನ ಸಭೆ ನಡೆಸಿರುವ BMTC, ಇದಕ್ಕೆಂದೇ ಆ್ಯಪ್ ಅನ್ನೂ ಬಿಡುಗಡೆ ಮಾಡಲಿದೆ. ಈ ಅ್ಯಪ್ ಬಳಸಿ ಪ್ರಯಾಣಿಕರು ತಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಈ ವಾಲೆಟ್ ಗೆ ಹಣ ಕಳುಹಿಸಿಕೊಂಡು ತಮ್ಮ ಪ್ರಯಾಣಕ್ಕೆ ತಕ್ಕಂತೆ ಸ್ಕ್ಯಾನ್ ಮಾಡಿಕೊಂಡು ಟಿಕೆಟ್ ದರ BMTC ನಿಗಮಕ್ಕೆ ಪ್ರಯಾಣಿಕರು ಪಾವತಿಸಬಹುದಾಗಿದೆ. ಈ ಮೂಲಕ ಕ್ಯಾಶ್ ಲೆಸ್ ವ್ಯವಹಾರ ನಡೆಯುವುದಲ್ಲದೆ, ಯಾವುದೇ ಗೊಂದಲಕ್ಕೆ ಅವಕಾಶ ಇರುವುದಿಲ್ಲ ಎಂದು BMTC ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಅಸಲಿಗೆ ಆನ್ ಲೈನ್ ಟಿಕೆಟ್ ಮಾನಿಟರ್ ಮಾಡುವ ವ್ಯವಸ್ಥೆ BMTC ಯಲ್ಲಿ ಇಲ್ಲ. ನಮ್ಮ ಮೆಟ್ರೋದಂತೆ BMTC ಯಲ್ಲಿ ಅದಕ್ಕೊಂದು ವಿಶೇಷ ವ್ಯವಸ್ಥೆ ಮಾಡಬೇಕಿದೆ. ಹೀಗಾಗಿ ಅನ್ ಲೈನ್ ಟಿಕೆಟ್ ಜಾರಿ ಮಾಡುವುದು ಸದ್ಯಕ್ಕೆ ಕಷ್ಟದ ಮಾತು. ಹೀಗಾಗಿ BMTC ವಾಲೆಟ್ ಸಿಸ್ಟಮ್ ಜಾರಿ ಮಾಡೋಕೆ ಚಿಂತಿಸಿದೆ.






