ರಾಜ್ಯದಲ್ಲಿ ಇಂದಿನಿಂದ ಬಜೆಟ್ ಅಧಿವೇಶನ (Budget session) ಆರಂಭವಾಗ್ತಿದೆ. ಮಾರ್ಚ್ 12ರವರೆಗೆ ಅಧಿವೇಶನ ನಡೆಯಲಿದ್ದು ಮಾರ್ಚ್ 7ರಂದು 16ನೇ ಬಜೆಟ್ ಮಂಡಣೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ (Cm siddaramaiah) ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ರಾಜ್ಯದ ಆರ್ಥಿಕ ಇತಿಮಿತಿಗಳಲ್ಲಿ ರಾಜ್ಯ ಸರ್ಕಾರ ಯಾವ ರೀತಿಯ ಬಜೆಟ್ ಮಂಡಣೆ ಮಾಡಲಿದೆ ಅನ್ನೋ ಕುತೂಹಲ ಮೂಡಿದೆ. ಸರ್ಕಾರದ ಜೊತೆ ಶೀತಲ ಸಮರದ ನಡುವೆ ರಾಜ್ಯದ ಚಿತ್ತ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣದತ್ತ ನೆಟ್ಟಿದೆ.

ಇನ್ನೊಂದೆಡೆ ಜಂಟಿ ಅಧಿವೇಶನದ ಮೊದಲ ದಿನವೇ ಸರ್ಕಾರದ ವಿರುದ್ಧ ದೋಸ್ತಿ ನಾಯಕರು ಜಂಟಿ ಸಮರ ನಡೆಸಲು ಮುಂದಾಗಿದ್ದಾರೆ. ರಾಜ್ಯಪಾಲರಿಗೆ ಸರ್ಕಾರದಿಂದ ಅವಮಾನ ಮಾಡಿದ್ದಾರೆ ಅನ್ನೋ ವಿಚಾರವನ್ನ ಹಾಗೂ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಜಟಾಪಟಿ, ಬಿಬಿಎಂಪಿ ಎಲೆಕ್ಷನ್ ದೃಷ್ಟಿಯಿಂದ ಬೆಂಗಳೂರಿನ ಸಮಸ್ಯೆಗಳನ್ನ ಮುಖ್ಯ ಅಸ್ತ್ರವಾಗಿಸಿಕೊಳ್ಳಲು ದೋಸ್ತಿ ನಾಯಕರು ಶಾಸಕರ ಭವನದಿಂದ ವಿಧಾನಸೌಧದವರೆಗೂ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ.