ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್–12ರ ವಿನ್ನರ್ ಗಿಲ್ಲಿ ನಟ ಇಂದು ಬೆಂಗಳೂರಿನ ಮುಖ್ಯಮಂತ್ರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ(CM Siddaramaiah) ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಗ್ ಬಾಸ್ ಗೆದ್ದಿರುವ ಗಿಲ್ಲಿಗೆ ಹಾರ ಹಾಕಿ ಅಭಿನಂದನೆ ಸಲ್ಲಿಸಿದರು. ಗಿಲ್ಲಿ ನಟನ ಭುಜದ ಮೇಲೆ ಕೈ ಇಟ್ಟು ಹಾರೈಸಿದ ಸಿಎಂ, ಮುಂದಿನ ದಿನಗಳಲ್ಲಿ ನಟನ ಕಲಾ ಬದುಕಿಗೆ ಶುಭಾಶಯ ಕೋರಿದರು. ಅಲ್ಲದೇ ಬಿಗ್ ಬಾಸ್‌ನಲ್ಲಿ ಸಿಕ್ಕ ಹಣವೆಷ್ಟು ಎಂದು ಸಿದ್ದರಾಮಯ್ಯ ಗಿಲ್ಲಿ ನಟ ಕಾಲೆಳೆದರು.

ಈ ವೇಳೆ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಸುರೇಶ್ ಹಾಗೂ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಪ್ರಭಾಕರ್ ಅವರು ಕೂಡ ಉಪಸ್ಥಿತರಿದ್ದರು. ಬಿಗ್ ಬಾಸ್ ಸೀಸನ್–12ರ ವಿಜೇತ ಗಿಲ್ಲಿಗೆ ಮುಖ್ಯಮಂತ್ರಿಗಳು ಅಭಿನಂದಿಸಿರುವ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಗಿಲ್ಲಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.






