• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಬೆಂಗಳೂರಲ್ಲಿ ಜನಿಸಿದ ಮಾತ್ರಕ್ಕೆ ಕನ್ನಡ ಬರಲೇಬೇಕು ಅಂತಾ ರೂಲ್ಸ್​ ಇದ್ಯಾ?’ ಎಂದ ಖ್ಯಾತ ಡ್ಯಾನ್ಸರ್​ಗೆ ಕನ್ನಡಿಗರಿಂದ ತರಾಟೆ

ಪ್ರತಿಧ್ವನಿ by ಪ್ರತಿಧ್ವನಿ
March 16, 2023
in Top Story, ಕರ್ನಾಟಕ
0
‘ಬೆಂಗಳೂರಲ್ಲಿ ಜನಿಸಿದ ಮಾತ್ರಕ್ಕೆ ಕನ್ನಡ ಬರಲೇಬೇಕು ಅಂತಾ ರೂಲ್ಸ್​ ಇದ್ಯಾ?’ ಎಂದ ಖ್ಯಾತ ಡ್ಯಾನ್ಸರ್​ಗೆ ಕನ್ನಡಿಗರಿಂದ ತರಾಟೆ
Share on WhatsAppShare on FacebookShare on Telegram

ಬೆಂಗಳೂರು : ಹಿಂದಿ ಖಾಸಗಿ ವಾಹಿನಿಯ ಡ್ಯಾನ್ಸ್​ ಇಂಡಿಯಾ ಡ್ಯಾನ್ಸ್​ ವಿನ್ನರ್​ ಹಾಗೂ ಖಾಸಗಿ ಕನ್ನಡ ವಾಹಿನಿಯೊಂದರಲ್ಲಿ ಡ್ಯಾನ್ಸಿಂಗ್​ ರಿಯಾಲಿಟಿ ಶೋ ಜಡ್ಜ್​ ಕೂಡ ಆಗಿದ್ದ ಸಲ್ಮಾನ್​ ಯುಸೂಫ್​ ಖಾನ್​​ ಕನ್ನಡದ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಭಾರೀ ವಿರೋಧವನ್ನು ಎದುರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿದ್ದೇನೆ ಎಂದ ಮಾತ್ರಕ್ಕೆ ಕನ್ನಡ ಬರಲೇಬೇಕು ಅಂತಾ ನಿಯಮವಿದ್ಯಾ..? ಎಂದು ಸಲ್ಮಾನ್​ ಪ್ರಶ್ನಿಸಿದ್ದು ಕನ್ನಡಿಗರ ಕಣ್ಣು ಕೆಂಪಗಾಗಿಸಿದೆ.

ADVERTISEMENT


ಸಲ್ಮಾನ್​ ಯುಸೂಫ್​ ಖಾನ್​ ಮೂಲತಃ ಬೆಂಗಳೂರಿನವರು. ಇವರ ತಂದೆ ಹಾಗೂ ಸಲ್ಮಾನ್​ ಎಲ್ಲರೂ ಬೆಂಗಳೂರಿನಲ್ಲಿ ಜನಿಸಿದವರೇ. ಆದರೂ ಇವರು ಕನ್ನಡದ ಬಗ್ಗೆ ತೋರಿದ ನಿರ್ಲಕ್ಷ್ಯದ ಧೋರಣೆ ಇದೀಗ ಭಾರೀ ವಿವಾದಕ್ಕೆ ಗ್ರಾಸವಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ದುಬೈಗೆ ಪ್ರಯಾಣಿಸಬೇಕಾದ ನಿಮಿತ್ತ ಸಲ್ಮಾನ್​ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇಮಿಗ್ರೇಷನ್​ ಪ್ರಕ್ರಿಯೆ ನಡೆಯುತ್ತಿದ್ದ ವೇಳೆಯಲ್ಲಿ ಅಲ್ಲಿದ್ದ ಅಧಿಕಾರಿಯೊಬ್ಬರು ಸಲ್ಮಾನ್​ ಜೊತೆ ಕನ್ನಡದಲ್ಲಿ ಮಾತನಾಡೋಕೆ ಆರಂಭಿಸಿದ್ದರು.


ಇದಕ್ಕೆ ಸಲ್ಮಾನ್​ ನನಗೆ ಕನ್ನಡ ಬರೋದಿಲ್ಲ ಎಂದು ಹೇಳಿದ್ದಾರೆ. ಆಗ ಆ ಅಧಿಕಾರಿ ಬೆಂಗಳೂರಿನವರೇ ಆಗಿ ಕನ್ನಡ ಬರೋದಿಲ್ಲ ಅಂದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದರು. ಬೆಂಗಳೂರಿನಲ್ಲಿ ಜನಿಸಿದ್ದೇನೆ ಎಂದ ಮಾತ್ರಕ್ಕೆ ಕನ್ನಡ ಬರಲೇಬೇಕು ಅಂತಾ ಕಡ್ಡಾಯ ನಿಯಮವಿದ್ಯಾ..? ನಾನು ಸೌದಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ನನಗೆ ಹಿಂದಿ ಬರುತ್ತೆ ಅದು ಸಾಕಲ್ವಾ..? ಪ್ರಧಾನಿ ಮೋದಿಗೇನು ಕನ್ನಡ ಬರುತ್ತದೆಯೇ ..? ಎಂದು ಪ್ರಶ್ನೆ ಮಾಡಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ‘


ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಅನೇಕರು ವಿಮಾನ ನಿಲ್ದಾಣದ ಅಧಿಕಾರಿಯ ಕನ್ನಡ ಪ್ರೀತಿಗೆ ಸಲಾಂ ಎಂದಿದ್ದು ಕನ್ನಡ ಕಲಿಯುವ ಯೋಗ್ಯತೆ ನಿಮಗಿಲ್ಲ ಬಿಡಿ ಅಂತಾ ಸಲ್ಮಾನ್​ಗೆ ಕುಟುಕಿದ್ದಾರೆ. ಇನ್ನೂ ಕೆಲವು ಕನ್ನಡಿಗರು ಕನ್ನಡ ಬರೋದಿಲ್ಲ ಅಂದಮೇಲೆ ಕರ್ನಾಟಕದಲ್ಲಿ ಏನು ಮಾಡ್ತಿದ್ದೀರಿ..? ಸೌದಿಗೆ ಹೋಗಿ ಎಂದು ಕಿಡಿಕಾರಿದ್ದಾರೆ. ಇನ್ನೂ ಕೆಲವರು ಏರ್​ಪೋರ್ಟ್​ನ ಆ ಅಧಿಕಾರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಹೇಳ್ತಿದ್ದಾರೆ.

Tags: Bangalore International AirportDancing Reality Show JudgeKannadaSalman Yusuf Khan
Previous Post

ನನ್ನ ಹಾಗೂ ಪುತ್ರನ ರಾಜಕೀಯಕ್ಕೆ ಬಿಎಸ್‌ವೈ, ವಿಜಯೇಂದ್ರ ತೊಡಕು: ಅಮಿತ್‌ ಶಾಗೆ ಸೋಮಣ್ಣ ದೂರು

Next Post

ದಶಪಥದ ಹಿರಿಮೆಯೂ ಶ್ರೀಸಾಮಾನ್ಯರ ಅವಸ್ಥೆಯೂ

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post
ದಶಪಥದ ಹಿರಿಮೆಯೂ ಶ್ರೀಸಾಮಾನ್ಯರ ಅವಸ್ಥೆಯೂ

ದಶಪಥದ ಹಿರಿಮೆಯೂ ಶ್ರೀಸಾಮಾನ್ಯರ ಅವಸ್ಥೆಯೂ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada