
ಬೀದರ್: ಸಾಲಬಾಧೆಗೆ ಬೇಸತ್ತು ಬೀದರ್ ತಾಲೂಕಿನ ಚಿಟ್ಟಾ ಅರಣ್ಯ ಪ್ರದೇಶದಲ್ಲಿ (Chitta forest )ನೇಣು ಬಿಗಿದುಕೊಂಡು ಬ್ರಿಮ್ಸ್ ಆಸ್ಪತ್ರೆಯ Brims Hospital)ವೈದ್ಯ ಆತ್ಮಹತ್ಯೆ Doctor suicide)ಮಾಡಿಕೊಂಡಿರುವ ಘಟನೆ ನಡೆದಿದೆ.ವೈದ್ಯ ಮೊಹಮ್ಮದ್ ಸೋಹೆಲ್ ಮೃತ ದುರ್ದೈವಿ.ವೈದ್ಯ ಮೊಹಮ್ಮದ್ ಸೋಹೆಲ್ ಎಂಬಿಬಿಎಸ್ ಅಧ್ಯಯನಕ್ಕಾಗಿ ವಿವಿಧ ಫೈನಾನ್ಸ್ನಲ್ಲಿ ಲಕ್ಷಾಂತರ ಸಾಲ ಮಾಡಿದ್ದರು.
ಸಾಲ ತೀರಿಸಲು ಆಗದೆ ನೇಣು ಬಿಗಿದುಕೊಂಡು ವೈದ್ಯ ಮೊಹಮ್ಮದ್ ಸೋಹೆಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ವೈದ್ಯ ಮೊಹಮ್ಮದ್ ಸೋಹೆಲ್ ಶವ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ. ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




