ಬೀದರ್: ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಮದ್ಯ ಸೇವಿಸಿ ಸೇವೆಗೆ ಹಾಜರಾದ ಘಟನೆ ಬೀದರ್(Bidar) ಜಿಲ್ಲೆಯ ಹುಲಸೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಮದ್ಯ ಸೇವಿಸಿ ಆಸ್ಪತ್ರೆಗೆಬಂದ ಲ್ಯಾಬ್ ಟೆಕ್ನಿಷಿಯನ್(Lab Technician) ಬಾಲಾಜಿ ಸೂರ್ಯವಂಶಿಗೆ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಕ್ತ ತಪಾಸಣೆಗೆ ಬಂದ ರೋಗಿಗಳ ಜೊತೆಗೆ ಉದ್ಧಟತನದ ಮಾತಾಡುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಸ್ಥಿತಿಯನ್ನು ಕಂಡು ಚಿಕಿತ್ಸೆಗೆ ಬಂದ ರೋಗಿಗಳು ದಂಗಾಗಿದ್ದಾರೆ. ನಿತ್ಯ ಮದ್ಯ ಸೇವಿಸಿ ಸೇವೆಗೆ ಹಾಜರಾಗುತ್ತಿರೋ ಲ್ಯಾಬ್ ಟೆಕ್ನಿಷಿಯನ್ ಬಾಲಾಜಿ ಸೂರ್ಯವಂಶಿಗೆ ಈ ಹಿಂದೆಯೇ ಆರೋಗ್ಯ ಇಲಾಖೆ ಶೋಕಾಸ್ ನೋಟಿಸ್ ನೀಡಿ, ಆತನ ಸಂಬಳವನ್ನೂ ತಡೆ ಹಿಡಿದಿದ್ದರು.
ಆದರೂ ಮದ್ಯ ಸೇವಿಸಿ ಬರುತ್ತಿರೋ ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇನ್ನು ಈ ಕುರಿತು ಮದ್ಯ ಸೇವಿಸಿ ಸೇವೆಗೆ ಹಾಜರಾದ ಸಿಬ್ಬಂದಿಯನ್ನು ಡ್ರಿಂಕ್ ಟೇಸ್ಟ್ಗೆ ಬಸವಕಲ್ಯಾಣ ತಾಲೂಕಾ ಆಸ್ಪತ್ರೆಗೆ ಪೊಲೀಸರು ಕರೆದೊಯ್ದಿದ್ದಾರೆ.