ದೇಶವೇ ಬೆಚ್ಚಿ ಬೀಳಿಸುವಂತಹ ಘಟನೆ ಇದೀಗ ಬೆಂಗಳೂರಿನಲ್ಲಿ ನಡೆದಿದೆ. ಇದು ಕೇವಲ ಒಬ್ಬ ಯುವತಿಯ ಮೇಲೆ ನಡೆದ ಹಲ್ಲೆಯಲ್ಲ, ಬದಲಿಗೆ ಹತ್ತಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣವಾಗಿದೆ.ತನಿಖೆಯ ವೇಳೆ ಪೊಲೀಸರಿಗೂ ಆಘಾತಕಾರಿ ವಿಷಯವೊಂದು ತಿಳಿದುಬಂದಿದೆ.

ಈ ಹುಡುಗರು ಇನ್‌ಸ್ಟಾಗ್ರಾಮ್ ಮೂಲಕ ಯುವತಿಯರ ಜೊತೆ ಸ್ನೇಹ ಬೆಳೆಸುತ್ತಿದ್ದರು. ಗೆಳೆತನ ಗಾಢವಾದ ಮೇಲೆ, ‘ಜಕ್ಕೂರು ಬಳಿಯ ವಿಲ್ಲಾದಲ್ಲಿ ಅದ್ಭುತ ಪಾರ್ಟಿ ಇದೆ, ಬನ್ನಿ ಎಂಜಾಯ್ ಮಾಡೋಣ’ ಎಂದು ಆಹ್ವಾನಿಸುತ್ತಿದ್ದರು.ಡ್ರಗ್ಸ್ ಮತ್ತು ಮದ್ಯದ ಜೊತೆ ಮತ್ತಿನ ಮಾತ್ರೆ ಮಿಕ್ಸ್ ಮಾಡಿ ಕಾಲೇಜ್ ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಇದೀಗ ವರದಿಯಾಗಿದೆ. ಯುವತಿಯರಿಗೆ ಡ್ರಗ್ಸ್ ಮತ್ತು ಮಧ್ಯದಲ್ಲಿ ಮತ್ತು ಬರುವ ಮಾತ್ರೆ ಮಿಕ್ಸ್ ಮಾಡುತ್ತಿದ್ದರು ಬಳಿಕ ಯುವತಿಯರು ಅರೆ ಪ್ರಜ್ಞಾವಸ್ಥೆ ತಲುಪಿದಾಗ ಈ ಒಂದು ಗ್ಯಾಂಗ್ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದರು.ಎಂದು ಪೊಲೀಸರ ತನಿಖೆಯ ವೇಳೆ ಬಯಲಾಗಿದೆ.

ಜಕ್ಕೂರಿನ ಬಾಡಿಗೆ ವಿಲ್ಲಾದಲ್ಲಿ ನಿಖಿಲ್ ಪಾರ್ಟಿ ಆಯೋಜನೆ ಮಾಡುತ್ತಿದ್ದ.ಪಾರ್ಟಿಗೆ ಸೆ*ಕ್ಸ್ ಮಾಡುವಂತೆ ಹೇಳುತ್ತಿದ್ದರು. ಕೆಲ ಯುವತಿಯ ಒಪ್ಪಿಸಿ ಸೆ*ಕ್ಸ್ ಗೆ ಸಹಕರಿಸುತ್ತಿದ್ದರು. ಇನ್ನೂ ಕೆಲವು ಯುವತಿಯರು ಸೆಕ್ಸಿಗೆ ಒಪ್ಪುತ್ತಿರಲಿಲ್ಲ. ಒಪ್ಪದ ಯುವತಿಯರಿಗೆ ಕಂಠಪೂರ್ತಿ ಕುಡಿಸುತ್ತಿದ್ದರು. ಮಾತ್ರೆ ಮಿಕ್ಸ್ ಮಾಡುತ್ತಿದ್ದರು.ಯುವತಿಯರು ಪ್ರಜ್ಞೆ ತಪ್ಪುತಿದಂತೆ ಅತ್ಯಾಚಾರ ಎಸಗುತ್ತಿದ್ದರು ಬೆತ್ತಲೆ ಫೋಟೋ ಮತ್ತು ವಿಡಿಯೋ ರೆಕಾರ್ಡ್ ಮಾಡಿ ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ತನಿಕೆಯಲ್ಲಿ ತಿಳಿದು ಬಂದಿದೆ.

ಅಮೃತಳ್ಳಿ ಪೊಲೀಸರಿಗೆ ಯುವತಿ ದೂರು ನೀಡಿದ್ದು ಪೊಲೀಸರನ್ನು ಸುಮಾರು 19 ಸಂತ್ರಸ್ತ ಯುವತಿಯರು ಸಂಪರ್ಕಿಸಿದ್ದಾರೆ.19 ಯುವತಿಯರ ಹೇಳಿಕೆಗೆ ಪೊಲೀಸರು ಸಹ ಬೆಚ್ಚಿಬಿದ್ದಿದ್ದಾರೆ. ಸಕಲೇಶಪುರ ಮೂಲದ ನಿಕಿಲ್ ಮತ್ತು ಆತನಿಗೆ ಸಾಥ್ ನೀಡುತ್ತಿದ್ದ ಪಶ್ಚಿಮ ಬಂಗಾಳದ ಡಿಕ್ಸನ್ ಸಾಂಡ್ರಾ ಎಂಬುವವರನ್ನು ಬಂಧಿಸಿದ್ದಾರೆ.






