——–
ನವದೆಹಲಿ: “ನೀವು ನಾಲಿಗೆ ಹರಿಬಿಟ್ಟು ಪಕ್ಷಕ್ಕೆ ಮುಜುಗರ ತರುತ್ತಿದ್ದೀರಿ ಇದು ಸರಿ ಅಲ್ಲ. ಪಕ್ಷದ ಹಿತಾಸಕ್ತಿಗೆ ಧಕ್ಕೆಯಾಗುವಂಥ ಬೇಕಾಬಿಟ್ಟಿ ಹೇಳಿಕೆ ನೀಡ ಕೂಡದು” ಹೀಗೆಂದು ಬಾಲಿವುಡ್ Actress, ಸಂಸದೆ ಕಂಗನಾ ರಣೌತ್‌ಗೆ BJP ಹೈ ಕಮಾಂಡ್ ತರಾಟೆ ತೆಗದುಕೊಂಡಿದೆ.
ಹೌದು, ಸದಾ ವಿವಾದಗಳಿಂದಲೇ ಸುದ್ದಿಯಾಗುವ ಕಂಗನಾ, ಇತ್ತೀಚೆಗಷ್ಟೇ ರೈತಪ್ರತಿಭಟನೆ (Formers protest ) ವಿಚಾರದಲ್ಲೂ ನಾಲಿಗೆ ಹರಿಬಿಟ್ಟಿದ್ದರು. ಈ ಬಗ್ಗೆ ತೀವ್ರ ಆಕ್ಷೇಪವೂ ವ್ಯಕ್ತವಾಗಿತ್ತು. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಕೂಡ ಈ ಬಗ್ಗೆ ಕಿಡಿ ಕಾರಿದ್ದರು.
ನಟಿಯಾಗಿದ್ದಾಗಲೂ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಿದ್ದ ಈಕೆ ಸಂಸದೆಯಾದ ಬಳಿಕವೂ ಬೇಕಾಬಿಟ್ಟಿ ಹೇಳಿಕೆ ನೀಡುತ್ತಾರೆ. ಇದರಿಂದ BJP ಘನತೆಗೆ ಧಕ್ಕೆಯಾಗುತ್ತಿದೆ ಎಂಬ ಮಾತೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಂಗನಾ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ BJP ಹೈ ಕಮಾಂಡ್‌ನಿಂದ ಆಕೆಗೆ ಸಮನ್ಸ್ ಜಾರಿಗೊಳಿಸಿತ್ತು.
ಅದರಂತೆ BJP ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ದಿಲ್ಲಿಯ ಅವರ ನಿವಾಸದಲ್ಲಿ ಗುರುವಾರ ಕಂಗನಾ ಭೇಟಿಯಾಗಿದ್ದಾರೆ. ಬರೋಬ್ಬರಿ ಅರ್ಧ ಗಂಟೆಗಳ ಕಾಲ ಕಂಗನಾಗೆ ನಡ್ಡಾ ತರಾಟೆ ತೆಗೆದುಕೊಂಡಿದ್ದು, ವಿಧಾನಸಭೆ ಚುನಾವಣೆಗಳು ಹೊಸ್ತಿಲಿನಲ್ಲಿರುವಾಗ ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟು ನೀವು ಪಕ್ಷಕ್ಕೆ ಮುಜುಗರ ತರುತ್ತಿದ್ದೀರಿ, ಪಕ್ಷದ ಹಿತಾಸಕ್ತಿಗಳಿಗೆ ನಿಮ್ಮಿಂದ ಧಕ್ಕೆಯಾಗುತ್ತಿದೆ. ನಾಲಿಗೆಯನ್ನು ಹಿಡಿದಿಟ್ಟುಕೊಳ್ಳಿ ಎಂದು ಚಾಟಿ ಬೀಸಿದ್ದಾರೆ.
ಕಂಗನಾ ವಿವಾದ ಪ್ರಧಾನಿ ಮೋದಿ ಅವರ ಗಮನಕ್ಕೂ ಬಂದ ಹಿನ್ನೆಲೆಯಲ್ಲಿ ಅವರ ಆದೇಶದ ಮೇರೆಗೆ ವರಷ್ಠರು ಕಂಗನಾರನ್ನು ತರಾಟೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾನು ಬುದ್ದಿಗೇಡಿ ಅಲ್ಲ, ತಪ್ಪಿನ ಅರಿವಾಗಿದೆ: ನಡ್ಡಾರನ್ನು ಭೇಟಿಯಾದ ಬಳಿಕ Media (ಮಾಧ್ಯಮಗಳ) ಎದುರು ಹೈ ಕಮಾಂಡ್ ತನಗೆ ಛೀಮಾರಿ ಹಾಕಿದ ವಿಚಾರವನ್ನುಕಂಗನಾ ಹೇಳಿಕೊಂಡಿದ್ದಾರೆ. ರೈತ ಪ್ರತಿಭಟನೆ ವಿಚಾರವಾಗಿ ಪಕ್ಷದ ವರಿಷ್ಠರು ನನ್ನನ್ನು ಕರೆದು ಛೀಮಾರಿ ಹಾಕಿದ್ದಾರೆ. ನನ್ನ ತಪ್ಪಿನಿಂದ ಇದಾಗಿದೆ. ನಾನೆಂದೂ ಪಕ್ಷದಲ್ಲಿ ನಾನು ಹೇಳಿದ್ದೇ ಅಂತಿಮ ಎನ್ನುವಂತೆ ಅಂದುಕೊಂಡಿಲ್ಲ, ಹಾಗೆ ಅಂದಕೊಳ್ಳುವಷ್ಟು ದಡ್ಡಿಯೂ ನಾನಲ್ಲ.ನನ್ನ ಹೇಳಿಕೆಗಳಿಂದ ಪಕ್ಷದ ನೀತಿ ಮತ್ತು ಘನತೆಗೆ ಧಕ್ಕೆಯಾಗಿದ್ದರೆ ನನ್ನಷ್ಟು ದುಃಖ ಪಡುವವರೂ ಯಾರಿಲ್ಲ. ಇನ್ನು ಮುಂದೆ ನನ್ನ ಹೇಳಿಕೆಗಳ ಬಗ್ಗೆ ಜಾಗ್ರತೆ ವಹಿಸುತ್ತೇನೆ ಎಂದಿದ್ದಾರೆ.
ಕಂಗನಾ ಹೇಳಿದ್ದೇನು ? : ರೈತ ಪ್ರತಿಭಟನೆ ವೇಳೆ ಶವಗಳು ನೇತಾಡುತ್ತಿದ್ದವು, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳೂ ನಡೆಯುತ್ತಿದ್ದವು. ಕೇಂದ್ರ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳದೇ ಇದ್ದಿದ್ದರೆ ಬಾಂಗ್ಲಾದೇಶದ ಪರಿಸ್ಥಿತಿಯೇ ಭಾರತಕ್ಕೂ ಬಂದಿರುತ್ತಿತ್ತು ಎಂದು ಕಂಗನಾ ಹೇಳಿದ್ದರು. ರೈತ ಪ್ರತಿಭಟನೆ ಕುರಿತು ಅವರು ನೀಡಿದ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಕಂಗನಾಗೆ EMERGENCY ಸಂಕಷ್ಟ
ಹೈ ಕಮಾಂಡ್ ತರಾಟೆ ಒಂದೆಡೆಯಾದರೆ ಮತ್ತೊಂದೆಡೆ ಕಂಗನಾ ನಟಿಸಿ, Action – cut ಹೇಳಿರುವ ಎಮರ್ಜೆನ್ಸಿ ಸಿನಿಮಾದ ರಿಲೀಸ್‌ಗೂ ಸಂಕಷ್ಟ ಎದುರಾಗಿದೆ. ಈ ಸಿನಿಮಾ ರಿಲೀಸ್ ಆಗಬಾರದು ಎಂದು ದಿಲ್ಲಿ ಶಿರೋಮಣಿ ಅಕಾಲಿ ದಳವು (SAD) ಕೇಂದ್ರೀಯ ಚಲನಚಿತ್ರ ಪ್ರಮಾಣೀಕರ ಮಂಡಳಿಯನ್ನು (CBFC) ಒತ್ತಾಯಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲ ಕಂಗನಾ ನಟಿಸಿರುವ ಈ ಸಿನಿಮಾ ಕೋಮುದ್ವೇಷವನ್ನು ಹೆಚ್ಚಿಸುವುದರ ಜತೆಗೆ ತಪ್ಪು ತಿಳುವಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲಿದೆ ಎಂದು SAD ಆರೋಪಿಸಿದೆ. September 6 ರಂದು EMERGENCY ತೆರೆ ಕಾರಣಲು ಸಿದ್ಧತೆಗಳು ನಡೆದಿವೆ.