ರಾಜಧಾನಿ ಬೆಂಗಳೂರಿಗ ( capital city Bangalore) ಕಳೆದೆರಡು ದಿನಗಳಿಂದ ತಲೆದೋರಿದ್ದ ಕಸದ ಸಮಸ್ಯೆ ಕಡೆಗೂ ಇತ್ಯರ್ಥವಾಗಿದೆ. ಗುತ್ತಿಗೆದಾರರೊಂದಿಗೆ ಸರ್ಕಾರದ ಅಪರ ಕಾರ್ಯದರ್ಶಿ ನಡೆಸಿದ ಸಭೆ ಯಶಸ್ವಿಯಾಗಿದ್ದು, ಕಸ ಗುತ್ತಿಗೆದಾರರಿಗೆ ಬರಬೇಕಿರುವ ಬಾಕಿ ಮೊತ್ತ ಶೀಘ್ರವೇ ಬಿಡುಡೆ ಮಾಡುವ ಭರವಸೆ ನೀಡಿದ್ದಾರೆ. ಒಟ್ಟಾರೆ 6 ತಿಂಗಳಿನಿಂದ 250 ಕೋಟಿಗೂ ಅಧಿಕ ಹಣ ಬಾಕಿದ್ದು ಮಾರ್ಚ್ ಒಳಗಾಗಿ ಬಿಡುಗಡೆಯಾಗಲಿದೆ. ಇಂದಿನಿಂದಲೇ ಕಸ ವಿಲೇವಾರಿಗೆ ಗುತ್ತಿಗೆದಾರರು ಮುಂದಾಗಿದ್ದಾರೆ.
ಗುತ್ತಿಗೆದಾರರಿಗೆ ಬರಬೇಕಾದ ಬಾಕಿ ಪಾವತಿಗೆ ಬಿಬಿಎಂಪಿ ಒಪ್ಪಿಗೆ.!!
ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಕಸ ವಿಲೇವಾರಿ (Garbage disposal) ಗುತ್ತಿಗೆದಾರರಿಗೆ ಬಿಬಿಎಂಪಿ ಬಾಕಿ ಉಳಿಸಿಕೊಂಡಿರುವ 250 ಕೋಟಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸು ಗುತ್ತಿಗೆದಾರರು ಕಳೆದ 2 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ರು. ನೆನ್ನೆಯಿಂದ ಪಾಲಿಕೆ (Palike) ವ್ಯಾಪ್ತಿಯಲ್ಲಿ ಕಸ ವೀಲೆವಾರಿ ಮಾಡುವುದನ್ನ ಸ್ಥಗಿತ ಮಾಡಿದ್ದ ಗುತ್ತಿಗೆದಾರರು ಕಸ ಎತ್ತದೆ ಪ್ರತಿಭಟಿಸಿದ್ರು. ಪ್ರತಿದಿನ ಬೆಂಗಳೂರಿನಲ್ಲಿ 4,500 ಟನ್ ಕಸ ಸಂಗ್ರಹಣೆಯಾಗುತ್ತಿದೆ. 4 ಸಾವಿರಕ್ಕೂ ಹೆಚ್ಚು ಗಾಡಿಗಳಿಂದ ಕಸ (Garbage disposal Vehicles) ವಿಲೇವಾರಿ ಮಾಡಲಾಗುತ್ತಿದೆ. ನಿನ್ನೆಯಿಂದ ಕಸ ವಿಲೇವಾರಿ ಸ್ಥಗಿತ ಮಾಡಲಾಗಿದ್ದರಿಂದ ರಾಜಧಾನಿ ಇಂದು ಗಾರ್ಬೇಜ್ ಸಿಟಿಯಾಗಿತ್ತು.
ಎರಡು ದಿನಗಳಿಂದ ನಗರದೆಲ್ಲೆಡೆ ಕಸವೋ ಕಸ.!!
ಗುತ್ತಿಗೆದಾರರು ಕಸ ಎತ್ತದ ಹಿನ್ನೆಲೆ ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೆಲ್ಲಾ ಕರೆಸಿಕೊಳ್ಳೋ ನಮ್ಮ ಬೆಂಗಳೂರು ಇಂದು ಅಕ್ಷರಶಃ ಗಾರ್ಬೇಜ್ ಸಿಟಿಯಾಗಿ ಕಾಣ್ತಿತ್ತು. ನಗರದ ಕೆ.ಆರ್ ಮಾರ್ಕೆಟ್, ಕಲಾಸಿಪಾಳ್ಯ, ಮಲ್ಲೇಶ್ವರಂ, ಯಶವಂತಪುರ, ಮೆಜೆಸ್ಟಿಕ್, ಚಾಮರಾಜಪೇಟೆ, ಮಹಾಲಕ್ಷ್ಮೀ ಲೇಔಟ್ ಸೇರಿದಂತೆ ನಗರದಾದ್ಯಂತ ಎಲ್ಲೆಂದರಲ್ಲಿ ಕಸರದ ರಾಶಿ ರಾಶಿ ಕಾಣುತ್ತಿತ್ತು.
ಶೀಘ್ರವೇ 250 ಕೋಟಿ ಬಿಡುಗಡೆಗೆ ಒಪ್ಪಿದ ಪಾಲಿಕೆ.!!
ಬೆಂಗಳೂರಿನ ಕಸದ ಸಮಸ್ಯೆಯನ್ನು ಕಂಡ ಸರ್ಕಾರ ಹಾಗೂ ಬಿಬಿಎಂಪಿ ಸರ್ಕಾರದ ಅಪರ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ಅವರ ಮನವೊಲಿಸಿದರು. ಕಳೆದ 6 ತಿಂಗಳಿಂದ ಗುತ್ತಿಗೆದಾರರಿಗೆ ಬರಬೇಕಾದ 250 ಕೋಟಿ ಹಣ ಬಿಡುಗಡೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮಾರ್ಚ್ ಅಂತ್ಯದೊಳಗೆ ಹಣ ಬಿಡುಗಡೆ ಮಾಡುವಂತೆ ಬಿಬಿಎಂಪಿಗೆ ತಾಕೀತು ಮಾಡಿದೆ. ಕಸ ಗುತ್ತಿಗೆದಾರರಿಂದ ಸರ್ಕಾರದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದು ಇಂದಿನಿಂದಲೇ ಕಸ ವಿಲೇವಾರಿಗೆ ಮುಂದಾಗಿದ್ದಾರೆ. ನಾಳೆ ಸಂಜೆಯೊಳಗೆ ಬೆಂಗಳೂರಿನ ಎಲ್ಲಾ ಕಸವನ್ನ ವಿಲೇವಾರಿ ಮಾಡುತ್ತೇವೆ ಎಂದು ತಿಳಿಸಿದರು.
ಕಳೆದೆರಡು ದಿನದಿಂದ ತಲೆದೋರಿದ್ದ ಕಸದ ಸಮಸ್ಯೆ ಸದ್ಯಕ್ಕೆ ದೂರವಾಗಿದ್ದು, ಮಾರ್ಚ್ ಅಂತ್ಯದೊಳಗೆ ಬಾಕಿ ಹಣ ಪಾವತಿಯಾಗದಿದ್ದರೆ ಮತ್ತೆ ಹೋರಾಟ ಮಾಡೋದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಭರವಸೆ ನೀಡಿದ್ದರೂ ಈಡೇರಲಿಲ್ಲ. ಹೀಗಾಗಿ ಕೊಟ್ಟಮಾತಿನಂತೆ ಬಿಬಿಎಂಪಿ ಅವರ ಬಾಕಿ ಕ್ಲಿಯರ್ ಮಾಡಿ ಮತ್ತೆ ಕಸದ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾಗಿದೆ.