ನಗರದ ರಸ್ತೆ ಮೇಲೆ ಮಳೆ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟನಲ್ಲಿ ತುರ್ತಾಗಿ ಕ್ರಾಸ್ ಕಲ್ವರ್ಟ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ನಗರದಲ್ಲಿಂದು ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸದಾಶಿವನಗರ ಪೊಲೀಸ್ ಠಾಣೆಯಿಂದ ನ್ಯೂ ಬಿಇಎಲ್ ರಸ್ತೆ ಕಡೆ ಸಂಪರ್ಕಿಸುವ ರಸ್ತೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ರಸ್ತೆ ಮೇಲೆ ಮಳೆ ನೀರು ನಿಲ್ಲದಂತೆ ರಸ್ತೆ ಬದಿಯಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ ಶೋಲ್ಡರ್ ಡ್ರೈನ್ ಗಳಿಗೆ ಸರಾಗವಾಗಿ ನೀರು ಹರಿದು ಹೋಗುವಂತೆ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಮೇಲೆ ಮಳೆ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟನಲ್ಲಿ ತುರ್ತಾಗಿ ಕ್ರಾಸ್ ಕಲ್ವರ್ಟ್ ಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಮುಖ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚರಂಡಿಯಲ್ಲಿರುವ ಸೀವೇಜ್ ಪೈಪ್ ಲೈನ್ ಬದಲಾವಣೆ !
ನ್ಯೂ ಬಿಇಎಲ್ ರಸ್ತೆ ಇಂಡಿಯನ್ ಪೆಟ್ರೊಲ್ ಬಂಕ್ ಬಳಿ ಬ್ಲಾಕ್ ಆಗಿದ್ದ ಶೋಲ್ಡರ್ ಡ್ರೈನ್ ಅನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಲಾಗಿದೆ. ಈಗಿರುವ ಚರಂಡಿ ಮಾರ್ಗದಲ್ಲಿ ಬೆಸ್ಕಾಂ ಕೇಬಲ್ ಹಾಗೂ ಸೀವೇಜ್ ಪೈಪ್ ಲೈನ್ ಇದ್ದು, ಚರಂಡಿಯಲ್ಲಿರುವ ಸೀವೇಜ್ ಪೈಪ್ ಲೈನ್ ಬದಲಾಯಿಸಿ ಹೊಸ ಮೋರಿ ನಿರ್ಮಿಸಬೇಕು ಎಂದು ತಿಳಿಸಿದರು.

ವಿದ್ಯುತ್ ತಂತಿಗಳನ್ನು ಸರಿಯಾಗಿ ಅಳವಡಿಸಲು ಬೆಸ್ಕಾಂ ಅಧಿಕಾರಿಗಳಿಗೆ ಆದೇಶ !
ಟ್ರಾನ್ಸ್ ಫಾರ್ಮ್ ಗೆ ಅಳವಡಿಸಿರುವ ವಿದ್ಯತ್ ತಂತಿಗಳು ಪಾದಚಾರಿ ಮಾರ್ಗದಲ್ಲಿ ಹಾಗೆಯೇ ಬಿಟ್ಟಿರುವುದರಿಂದ ಸಮಸ್ಯೆಯಾಗಲಿದ್ದು, ಪಾದಚಾರಿ ಮಾರ್ಗದಲ್ಲಿರುವ ವಿದ್ಯುತ್ ತಂತಿಗಳನ್ನು ಸರಿಯಾಗಿ ಅಳವಡಿಸಲು ಬೆಸ್ಕಾಂ ಅಧಿಕಾರಿಗಳಿಗೆ ಆದೇಶಿಸಿದರು.
ಚರಂಡಿಗೆ ನೇರವಾಗಿ ಸೀವೇಜ್ ನೀರು ಹರಿವು- ತರಾಟೆ !
ರಸ್ತೆ ಬದಿಯಿರುವ ಚರಂಡಿಗೆ ನೇರವಾಗಿ ಸೀವೇಜ್ ನೀರನ್ನು ಬಿಡುತ್ತಿರುವುದನ್ನು ಗಮಿಸಿ ಜಲಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಚರಂಡಿಗೆ ನೇರವಾಗಿ ಸೀವೇಜ್ ನೀರನ್ನು ಬಿಟ್ಟಿರುವವರ ಮೇಲೆ ಕೂಡಲೆ ನೋಟಿಸ್ ಕೊಟ್ಟು ಸಂಪರ್ಕವನ್ನು ಕಡಿತಗೊಳಿಸಬೇಕು. ಅಲ್ಲದೆ ಸಂಪರ್ಕವಿರದ ಲೈನ್ ಗಳನ್ನು ಕೂಡಲೆ ಒಳಚರಂಡಿ ಲೈನ್ ಗೆ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.