ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಕೇಂದ್ರದ ವಿರುದ್ಧ ತಮ್ಮ ಸಮರವನ್ನು ಮುಂದುವರೆಸಿದ್ದಾರೆ. ಹೌದು ಲೋಕಸಭೆ ಮರುವಿಂಗಡಣೆ,ಹಿಂದಿ ಭಾಷೆ ಏರಿಕೆ ವಿಚಾರಗಳ ಕುರಿತು ಕೇಂದ್ರದ ವಿರುದ್ಧ ಡಿಎಂಕೆ ಸಮರಕ್ಕಿಳಿದಂತೆ ಕಾಣುತ್ತಿದೆ.

ಈ ಬೆಳವಣಿಗೆ ಬೆನ್ನಲ್ಲೇ ತಮಿಳುನಾಡಿನ ಬಜೆಟ್ ಪುಸ್ತಕದಲ್ಲಿನ ರೂಪಾಯಿ ಚಿತ್ರವನ್ನು ತಮಿಳುನಾಡು ಸರ್ಕಾರ ತೆಗೆದುಹಾಕಿದೆ. ರಾಷ್ಚ್ರೀಯ ಕರೆನ್ಸಿಯ ಪೋಟೋ ತೆಗೆದ ತಮಿಳುನಾಡು ಸರ್ಕಾರ,ಆ ಜಾಗದಲ್ಲಿ ರೂಪಾಯಿ ಪೋಟೋದ ಬದಲು ತಮಿಳು ಅಕ್ಷರ ಮಾತ್ರ ಮುದ್ರಿಸಿ ಸರ್ಕಾರ ಪರೋಕ್ಷ ಸಂದೇಶ ರವಾನೆ ಮಾಡಿದೆ.
ಈ ನಡುವೆ ಒಂದುವೇಳೆ ತಮಿಳು ಭಾಷೆಯನ್ನು ಯಾರಾದರೂ ನಿಂದಿಸಿದರೇ, ಅಂಥವರ ನಾಲಿಗೆ ಕತ್ತರಿಸುತ್ತೇವೆ ಎಂದು ಡಿಎಂಕೆ ನಾಯಕರು ಆವೇಶದ ಮಾತುಗಳನ್ನಾಡಿದ್ದಾರೆ. ಆ ಮೂಲಕ ಕೇಂದ್ರ ನೀತಿಗಳ ವಿರುದ್ಧ ಎಂ.ಕೆ ಸ್ಟಾಲಿನ್ ತಮ್ಮ ಸಮರವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.