• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಜಾತಿ – ಮತದ ನೆಲೆಗಳು ಶತಮಾನಗಳಷ್ಟು ಹಿಂದಕ್ಕೆ ಚಲಿಸುತ್ತಲೇ ತಮ್ಮ ಮೂಲ ಸ್ಥಿತಿ ತಲುಪುತ್ತಿವೆ! :  ಭಾಗ – ೨

ನಾ ದಿವಾಕರ by ನಾ ದಿವಾಕರ
December 31, 2021
in ಅಭಿಮತ
0
ಜಾತಿ – ಮತದ ನೆಲೆಗಳು ಶತಮಾನಗಳಷ್ಟು ಹಿಂದಕ್ಕೆ ಚಲಿಸುತ್ತಲೇ ತಮ್ಮ ಮೂಲ ಸ್ಥಿತಿ ತಲುಪುತ್ತಿವೆ! :  ಭಾಗ – ೨
Share on WhatsAppShare on FacebookShare on Telegram

ಈ ಬೆಳವಣಿಗೆಯನ್ನು ಭಾರತದ ಬಹುತ್ವ ಮತ್ತು ಬಹುಸಾಂಸ್ಕೃತಿಕ ನೆಲೆಯಲ್ಲಿ ಎದುರಿಸಬೇಕಾಗಿದ್ದ ಸಂದರ್ಭದಲ್ಲಿ, ಈ ಬಹುಸಂಸ್ಕೃತಿಯನ್ನು ಪ್ರತಿನಿಧಿಸುವ ಶೋಷಿತ ಸಮುದಾಯಗಳು, ತಳಸಮುದಾಯಗಳು ಬಹುಮಟ್ಟಿಗೆ ನಿರ್ಲಿಪ್ತವಾಗಿದ್ದವು. ಅಥವಾ ತಮ್ಮದೇ ಆದ ಸಾಮಾಜಿಕ ಘನತೆಗಾಗಿ, ಸಾಮಾಜಿಕಾರ್ಥಿಕ ಸಮಾನತೆಗಾಗಿ, ರಾಜಕೀಯ ಅವಕಾಶಕ್ಕಾಗಿ ಹೋರಾಡುತ್ತಿದ್ದವು. ಇಸ್ಲಾಂ ಮತದ ಸಾಂಸ್ಥಿಕ ನೆಲೆಗಳು ತಮ್ಮ ಮೂಲ ಧಾರ್ಮಿಕ ಚೌಕಟ್ಟಿನಿಂದಾಚೆಗೆ, ಭಾರತದ ನೆಲಸಂಸ್ಕೃತಿಯನ್ನು ಗುರುತಿಸಲೇ ಇಲ್ಲ. ಭಾರತದಲ್ಲಿ ಇಸ್ಲಾಂ ನೆಲೆಗೊಳ್ಳಲು ಮೂಲ ಕಾರಣವಾದ ಸೂಫಿ ಪರಂಪರೆಯನ್ನೂ ಸಹ ನೇಪಥ್ಯಕ್ಕೆ ಸರಿಸಿ, ಮತೀಯವಾದವನ್ನು ಪೋಷಿಸುವುದರಲ್ಲಿ ಮುಸ್ಲಿಂ ಮತೀಯ ನಾಯಕರು ಮುಂದಾದರು. ಹಿಂದೂ ಮತೀಯವಾದಕ್ಕೆ ಬಹುಸಾಂಸ್ಕೃತಿಕ ನೆಲೆಗಳು ಮುಖಾಮುಖಿಯಾಗುವುದರ ಬದಲು ಇಸ್ಲಾಂ ಮತೀಯವಾದ ಮುಖಾಮುಖಿಯಾಗಿತ್ತು. ಇದರ ಭೀಕರ ಪರಿಣಾಮಗಳನ್ನು ಅಯೋಧ್ಯೆಯಿಂದ ಗುಜರಾತ್ ವರೆಗೂ ಕಾಣಬಹುದು.

ADVERTISEMENT

ಇದರ ನೇರ ಪರಿಣಾಮವನ್ನು 1980-90ರ ದಶಕದಲ್ಲಿ ಉಲ್ಬಣಿಸಿದ ಕಾಶ್ಮೀರ ಸಮಸ್ಯೆಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಕಾಶ್ಮೀರದ ಜನತೆಯ “ಕಾಶ್ಮೀರಿಯತ್” ಅಸ್ಮಿತೆಗಿಂತಲೂ ಹೆಚ್ಚಾಗಿ ಅಲ್ಲಿನ ಜನರ ಇಸ್ಲಾಂ ಮತೀಯ ಅಸ್ಮಿತೆಗಳೇ ಪ್ರಧಾನವಾಗಿ ಮುನ್ನೆಲೆಗೆ ಬಂದಿದ್ದರಿಂದ, ಕಾಶ್ಮೀರ ವಿವಾದವೇ “ಹಿಂದೂ-ಮುಸ್ಲಿಂ” ಸಮಸ್ಯೆಯಾಗಿ ಪರಿಣಮಿಸಿತು. ಹಿಂದುತ್ವವಾದಿಗಳ ಅಖಂಡ ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಕಾಶ್ಮೀರ ಒಂದು ಮುಸ್ಲಿಂ ಪ್ರತಿರೋಧದ ಛಾಯೆಯಾಗಿ ಕಂಡಿತೇ ಹೊರತು, ಕಾಶ್ಮೀರಿಗಳ ನೆಲಮೂಲದ ಸಾಂಸ್ಕೃತಿಕ ಅಸ್ಮಿತೆಗಳು ಕಾಣಲಿಲ್ಲ. ಇದರ ಫಲಾನುಭವಿಗಳಾದವರು ಅತ್ತ ಪಾಕಿಸ್ತಾನದಿಂದ ಪ್ರಚೋದಿತರಾದ ಇಸ್ಲಾಂ ಮೂಲಭೂತವಾದಿಗಳು, ಇತ್ತ ಹಿಂದುತ್ವ ಪ್ರತಿಪಾದಿಸುವ ಹಿಂದೂ ಮೂಲಭೂತವಾದಿಗಳು. ಕಳೆದ ನಾಲ್ಕು ದಶಕಗಳಲ್ಲಿ ಉಗ್ರವಾದ, ಭಯೋತ್ಪಾದನೆ, ಸೇನಾ ಕಾರ್ಯಾಚರಣೆಯ ಅತಿರೇಕಗಳು, ಆಡಳಿತ ವ್ಯವಸ್ಥೆಯ ದಬ್ಬಾಳಿಕೆ ಮತ್ತು ಕೋಮು ಸಂಘರ್ಷಗಳಲ್ಲಿ ಹೆಚ್ಚಿನ ನಷ್ಟ ಅನುಭವಿಸಿರುವುದು ಮುಸ್ಲಿಂ ಸಮುದಾಯವೇ. ಅದೇ ವೇಳೆ ಶತಮಾನಗಳಿಂದ ಕಾಶ್ಮೀರದಲ್ಲಿ ಬದುಕು ಕಟ್ಟಿಕೊಂಡಿದ್ದ ಪಂಡಿತ ಸಮುದಾಯವೂ ಸಹ ಸಾವು ನೋವುಗಳನ್ನು ಅನುಭವಿಸಬೇಕಾಯಿತು. ಈ ಎರಡೂ ಸಮುದಾಯಗಳ ನಡುವೆ ಭಾರತದ ಬಹುಸಾಂಸ್ಕೃತಿಕ ನೆಲೆಯಲ್ಲಿ ಅನುಸಂಧಾನ ಸಾಧ್ಯವಾಗಿದ್ದಲ್ಲಿ ಬಹುಶಃ ಕಾಶ್ಮೀರ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರಲಿಲ್ಲ.

Also read : ಜಾತಿ-ಮತದ ನೆಲೆಗಳು ಶತಮಾನಗಳಷ್ಟು ಹಿಂದಕ್ಕೆ ಚಲಿಸುತ್ತಲೇ ತಮ್ಮ ಮೂಲ ಸ್ಥಿತಿ ತಲುಪುತ್ತಿವೆ! : ಭಾಗ – ೧

ಆದರೆ ಮತಾಂಧತೆ ಮತ್ತು ಮತೀಯವಾದವನ್ನೇ ಅವಲಂಬಿಸಿ ತಮ್ಮ ಸಾಮ್ರಾಜ್ಯ ವಿಸ್ತರಣೆಯನ್ನು ಬಯಸುವ ಹಿಂದೂ-ಮುಸ್ಲಿಂ ಮತೀಯ-ಮತಾಂಧ ಶಕ್ತಿಗಳಿಗೆ ಇದು ಬೇಕಿರಲಿಲ್ಲ. ಭಾರತದ ಸಕಲ ಸಮಸ್ಯೆಗಳಿಗೂ ಇಲ್ಲಿನ ಮುಸಲ್ಮಾನರೇ ಅಥವಾ ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆಯೇ ಕಾರಣ ಎಂಬ ಒಂದು ವಿತಂಡವಾದವೇ ಅಯೋಧ್ಯೆಯ ಮಂದಿರ ವಿವಾದದಲ್ಲಿ ಸಾವಿರಾರು ಸಾವುಗಳಿಗೆ ಕಾರಣವಾಯಿತು. ಬಂಡವಾಳಶಾಹಿ ಅರ್ಥವ್ಯವಸ್ಥೆ ಮತ್ತು ನವ ಉದಾರವಾದ ಸೃಷ್ಟಿಸಿದ ಸಾಮಾಜಿಕಾರ್ಥಿಕ ಅಭದ್ರತೆ ಮತ್ತು ಅನಿಶ್ಚಿತತೆಗಳು ಹಿಂದೂ ಮತ್ತು ಮುಸ್ಲಿಂ ಸಮುದಾಯದಲ್ಲಿ ಸಮಾನವಾಗಿ ಅವಕಾಶವಂಚಿತರನ್ನು, ಶೋಷಿತರನ್ನು ಕಾಡಿತ್ತು. ಬಡತನ, ಹಸಿವು, ದಾರಿದ್ರ್ಯ ಮತ್ತು ಅಸಮಾನತೆಗಳು ಎರಡೂ ಸಮುದಾಯಗಳನ್ನು ಸಮಾನವಾಗಿ ಕಾಡಿತ್ತು. ಈ ದುರವಸ್ಥೆಗೆ ಹಿಂದೂ ಮತಾಂಧ ಶಕ್ತಿಗಳು ಇಸ್ಲಾಂ ಧರ್ಮದಲ್ಲಿ ಮತ್ತು ಮತಾಂತರ ಪ್ರಕ್ರಿಯೆಯಲ್ಲಿ ಕಾರಣಗಳನ್ನು ಗುರುತಿಸುವ ಮೂಲಕ ಜನಸಾಮಾನ್ಯರ ನಡುವೆ ಕಂದಕಗಳನ್ನು ನಿರ್ಮಿಸಲು ಧರ್ಮ ಮತ್ತು ಜಾತಿಯ ಅಸ್ಮಿತೆಗಳನ್ನೇ ಬಳಸಿಕೊಳ್ಳಲಾಯಿತು.

1990ರ ಸಂದರ್ಭದಲ್ಲಿ ಭಾರತದಲ್ಲಿ ತಲೆದೋರಿದ ಸಾಮಾಜಿಕಾರ್ಥಿಕ ಸಮಸ್ಯೆಗಳಿಗೆ ಮತೀಯ ಲೇಪನ ನೀಡುವ ಮೂಲಕ ಹಿಂದುತ್ವವಾದಿ ಸಾಂಸ್ಕೃತಿಕ ರಾಜಕಾರಣವು,  ಶೋಷಿತ ಸಮುದಾಯಗಳನ್ನು ವಿಭಜಿಸುವಲ್ಲಿ ಯಶಸ್ವಿಯಾಯಿತು. ಶೋಷಿತ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಸಲ್ಮಾನರ ಓಲೈಕೆಯೇ ಕಾರಣ ಎಂಬ ಸಂಘಪರಿವಾರದ ವಾದವನ್ನು ಪುಷ್ಟೀಕರಿಸುವ ಸಲುವಾಗಿಯೇ ಇತಿಹಾಸದ ಉತ್ಖನನವನ್ನೂ ಮಾಡಲಾಯಿತು. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅಸ್ತಿತ್ವವನ್ನೇ ನಿರಾಕರಿಸಲ್ಪಡುವ ತಳಸಮುದಾಯಗಳೂ ಸಹ ಅಖಂಡ ಭಾರತ ಅಥವಾ ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ ಕಾಲಾಳುಗಳನ್ನು ಒದಗಿಸಲಾರಂಭಿಸಿದವು. ಅನ್ಯಮತ ದ್ವೇಷ ರಾಜಕಾರಣಕ್ಕೆ ಸಾಂಸ್ಕೃತಿಕ ರಾಷ್ಟ್ರೀಯತೆಯ ಲೇಪನ ನೀಡಲಾಯಿತು. ಬಂಡವಾಳಶಾಹಿ ಅರ್ಥವ್ಯವಸ್ಥೆಯಿಂದ ಹಸಿವು-ದಾರಿದ್ರ್ಯದ ಕೂಪಕ್ಕೆ ತಳ್ಳಲ್ಪಟ್ಟ ಸಮುದಾಯಗಳು ತಮ್ಮ ಸಮಾನ ಶತ್ರುವನ್ನು, ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗುರುತಿಸಲು ವಿಫಲವಾಗಿದ್ದೇ ಅಲ್ಲದೆ, ಮತೀಯ, ಧಾರ್ಮಿಕ ನೆಲೆಯಲ್ಲಿ ಶತ್ರುಗಳನ್ನು ಗುರುತಿಸಲಾರಂಭಿಸಿದವು.

ಈ ಸಂದರ್ಭದಲ್ಲಿ ಸೃಷ್ಟಿಯಾದ ಒಂದು ವಿಕೃತ, ವಿಧ್ವಂಸಕ ಪೀಳಿಗೆಯೇ ಇಂದು ಸಮಾಜಘಾತುಕ ಶಕ್ತಿಗಳಾಗಿ ರೂಪುಗೊಂಡಿವೆ. ಇತ್ತೀಚೆಗೆ ಧರ್ಮ ಸಂಸತ್ತಿನಲ್ಲಿ ಮಾಡಿರುವಂತಹ ಘೋಷಣೆಗಳು, ಸಮಸ್ತ ಮುಸಲ್ಮಾನರನ್ನೂ ಹಿಂದೂಗಳಾಗಿ ಮರು ಮತಾಂತರಗೊಳಿಸುವ ಸಂಸದರ ಹೇಳಿಕೆಗಳು, ಕರ್ನಾಟಕದ ಕರಾವಳಿಯಲ್ಲಿ ಮುಕ್ತವಾಗಿ ಲಾಂಗು, ಮಚ್ಚು, ತಲವಾರುಗಳನ್ನು ವಿತರಿಸುತ್ತಿರುವುದು, ಕೇರಳದಲ್ಲಿ ಆರೆಸ್ಸೆಸ್ ಮತ್ತು ಎಸ್ಡಿಪಿಐ ನಡುವೆ ನಡೆಯುತ್ತಿರುವ ಸಂಘರ್ಷ, ಕಾಶ್ಮೀರದಲ್ಲಿ ಅಮಾಯಕ ಹಿಂದೂಗಳನ್ನೂ ಗುರಿಮಾಡುತ್ತಿರುವ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳು, ಜಾತಿ ಶ್ರೇಷ್ಠತೆಯನ್ನು ಕಾಪಾಡಲು ಇಂದಿಗೂ ಅಸ್ಪೃಶ್ಯತೆಯನ್ನು ಪೋಷಿಸುತ್ತಿರುವ ಮೇಲ್ಜಾತಿಯ, ಸವರ್ಣೀಯ ಶಕ್ತಿಗಳು ಇವೆಲ್ಲವೂ 1980-90ರ ದಶಕದ ಸಾಂಸ್ಕೃತಿಕ ರಾಜಕಾರಣ ಮತ್ತು ಮತೀಯವಾದದ ನೆರಳಲ್ಲೇ ಬೆಳೆದುಬಂದಿರುವಂತಹುದು. ಈ ಸಮಾಜಘಾತುಕತೆಯ ಬೀಜಗಳನ್ನು ಬಿತ್ತಿದವರು ಇಂದು ನೇಪಥ್ಯಕ್ಕೆ ಸರಿದಿದ್ದಾರೆ. 

ಬಾಬ್ರಿ ಮಸೀದಿ ಧ್ವಂಸ ಮಾಡಿದ ಸಂದರ್ಭದಲ್ಲಿ ಕೇಳಿಬಂದ “ ಏಕ್ ಧಕ್ಕಾ ಔರ್ ದೋ ಬಾಬ್ರಿ ಮಸ್ಜಿದ್ ತೋಡ್ ದೋ ” ಎಂಬ ಘೋಷಣೆಯ ಮೂಲಕ ಬೀಜಾಂಕುರವಾದ ಮತಾಂಧತೆ ಇಂದು “ಹಿಂದೂ ಧರ್ಮಕ್ಕೆ ಸಂಕಟ ಬಂದಾಗ ಹಿಂದೂ ಕಾರ್ಯಕರ್ತರೇ ತಲವಾರ್              ಹಿಡಿಯಬೇಕು ” ಎಂಬ ಆಂಧ್ರ ಪ್ರದೇಶದ ಬಿಜೆಪಿ ಶಾಸಕ ರಾಜಾಸಿಂಗ್ ಹೇಳಿಕೆಯಲ್ಲಿ, ಹರಿದ್ವಾರದ ಧರ್ಮಸಂಸತ್ತಿನಲ್ಲಿ ಮೊಳಗಿದ ಘೋಷಣೆಗಳಲ್ಲಿ ಹೆಮ್ಮರವಾಗಿ ಕಾಣುತ್ತದೆ. ಹಿಂದೂ ಮತ್ತು ಇಸ್ಲಾಂ ಮತಕ್ಕೆ ಸೇರಿದ ಶೋಷಿತ ಜನತೆಯ ಬದುಕನ್ನು ಹಸನಾಗಿಸುವ ಪ್ರಯತ್ನಗಳು ಧರ್ಮ ರಕ್ಷಣೆ ಮತ್ತು ಧರ್ಮ ವಿನಾಶದ ನೆಲೆಯಲ್ಲಿ ರೂಪುಗೊಳ್ಳುವುದಕ್ಕೆ ಸಾಂಸ್ಕೃತಿಕ ರಾಜಕಾರಣ ಬುನಾದಿಯಾಗಿ ಪರಿಣಮಿಸಿತ್ತು. ಹಿಂದೂ ಮತ್ತು ಮುಸ್ಲಿಂ ಸಮುದಾಯದಲ್ಲಿ ಶೋಷಿತ ಸಮುದಾಯಗಳು ಎದುರಿಸುತ್ತಿದ್ದ ಸಾಮಾಜಿಕಾರ್ಥಿಕ ಅಸಮಾನತೆಗಳಿಗೆ ಸಾಂಸ್ಕೃತಿಕ ರಾಜಕಾರಣದ ಮೂಲಕ ಉತ್ತರಗಳನ್ನು ಶೋಧಿಸಲಾರಂಭಿಸಿದ್ದೇ, ಪರಸ್ಪರ ವೈಷಮ್ಯ ಸೃಷ್ಟಿಸುವ ಕೋಮುವಾದಿ ರಾಜಕಾರಣಕ್ಕೂ ಸುಭದ್ರ ಬುನಾದಿಯನ್ನು ನಿರ್ಮಿಸಿತ್ತು. ಈ ಸಂದರ್ಭದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಅವರ ಚಿಂತನಾ ವಾಹಿನಿಗಳನ್ನೂ ಬದಿಗೊತ್ತಿ, ಶೋಷಿತ ಸಮುದಾಯಗಳು ಹಿಂದುತ್ವ ಮತ್ತು ಇಸ್ಲಾಂ ದ್ವೇಷದ ಸಾಂಸ್ಕೃತಿಕ ರಾಜಕಾರಣಕ್ಕೆ ಬಲಿಯಾಗಿದ್ದವು. ಈ ಪ್ರಕ್ರಿಯೆ ಇಂದಿಗೂ ಚಾಲ್ತಿಯಲ್ಲಿರುವುದು ದುರಂತ.

ಈ ಸಂಧರ್ಭದಲ್ಲಿ ಭಾರತದ ಶೋಷಿತ ಸಮುದಾಯಗಳು ತಮ್ಮ ಅಸ್ಮಿತೆಯ ಚೌಕಟ್ಟುಗಳಿಂದ ಹೊರಬಂದು, ತನ್ನ ಸಮಾನ ಶತ್ರುವನ್ನು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಕಾಣಬೇಕಿತ್ತು. ಕೋಮು ಗಲಭೆಗಳಲ್ಲಿ ಉದುರಿದ ಹೆಣಗಳಲ್ಲಿ ಮತೀಯ ಅಸ್ಮಿತೆಗಳನ್ನು ಹೆಕ್ಕಿ ತೆಗೆಯುವ ವಿಧ್ವಂಸಕ ಮತಾಂಧ ಮನಸುಗಳಿಗೆ, ಹಸಿವಿನಿಂದ ಸಾಯುತ್ತಿರುವವರಲ್ಲಿ ಹೀಗೆ ಹೆಕ್ಕಿ ತೆಗೆಯಲು ಸಾಧ್ಯವಾಗುವುದೇ ಇಲ್ಲ. ಏಕೆಂದರೆ ಶೋಷಣೆಯ ಆಯಾಮಗಳು ಬದಲಾಗುತ್ತಲೇ ಹೋದರೂ, ಶೋಷಣೆಯ ಮೂಲಗಳು ಅವೇ ಆಗಿದ್ದವು. ಬುದ್ಧನಿಂದ ಬಸವಣ್ಣನವರೆಗೆ, ಗಾಂಧಿ-ಅಂಬೇಡ್ಕರ್ವರೆಗೆ ನಡೆದುಬಂದ ಬಹುಸಾಂಸ್ಕೃತಿಕ ನೆಲೆಗಳನ್ನು ಪ್ರತಿನಿಧಿಸುವವರಿಗೆ ಈ ಶೋಷಣೆಯ ಮೂಲಗಳನ್ನು ಗುರುತಿಸಲು ಸಾಧ್ಯವಾಗಿದ್ದಿದ್ದರೆ, ಶೋಷಣೆಯ ಆಯಾಮಗಳನ್ನೂ ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತಿತ್ತು. ಹಿಂದೂ ಮತ್ತು ಮುಸ್ಲಿಂ ಮತಗಳ ಚೌಕಟ್ಟಿನಲ್ಲೇ ತೀವ್ರ ಶೋಷಣೆಗೊಳಗಾದ ಸಮುದಾಯಗಳು ಮತೀಯ ಅಸ್ಮಿತೆಗಳಿಗೆ ಜೋತು ಬೀಳದೆ, ಬಹುಸಾಂಸ್ಕೃತಿಕ ಅಸ್ಮಿತೆಗಳನ್ನು ಗುರುತಿಸಿದ್ದಲ್ಲಿ ಭಾರತ ವಿಭಿನ್ನ ದಿಕ್ಕಿನಲ್ಲಿ ಸಾಗಬಹುದಿತ್ತು.

ಇದು ಸಾಧ್ಯವಾಗಿದ್ದಲ್ಲಿ ಅಂಬೇಡ್ಕರ್ ಮತ್ತು ಮಾರ್ಕ್ಸ್ನ ಅನುಸಂಧಾನ ಸಾಧ್ಯವಾಗಬಹುದಿತ್ತು. ಅಲ್ಪಸಂಖ್ಯಾತ ಸಮುದಾಯದೊಳಗಿನ ಶೋಷಿತ ವರ್ಗಗಳೊಡನೆ ಈ ದೇಶದ ಅಸ್ಪೃಶ್ಯರು, ಅವಕಾಶವಂಚಿತ-ದಮನಿತ ಜನಸಮುದಾಯಗಳು ಅನುಸಂಧಾನ ಮಾಡಬಹುದಿತ್ತು. ಹಾಗಾಗಿದ್ದರೆ ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯದ ಅಪಮಾನಗಳಿಂದ ಮುಕ್ತಿ ಪಡೆಯಲು ದಲಿತರಿಗೆ ಇದ್ದ ಮತಾಂತರದ ಹಕ್ಕನ್ನು ಪ್ರಭುತ್ವ ಕಸಿದುಕೊಳ್ಳಲಾಗುತ್ತಿರಲಿಲ್ಲ. ಅಥವಾ ಲವ್ ಜಿಹಾದ್, ಮತಾಂತರದ ಸುತ್ತ ಬೆಸೆಯಲಾಗುತ್ತಿರುವ ವಿಘಟನೆಯ ವಿಷಬೇಲಿಗಳನ್ನು ಸೃಷ್ಟಿಸಲಾಗುತ್ತಿರಲಿಲ್ಲ. ಭಾರತದ ನೆಲಮೂಲ ಸಂಸ್ಕೃತಿಗೂ ವೈದಿಕಶಾಹಿಯ ಸಾಂಸ್ಕೃತಿಕ ನೆಲೆಗಳಿಗೂ ಇರುವ ಅಂತರವನ್ನು ಅಂಬೇಡ್ಕರ್ ಮೂಲಕವೇ ಅರ್ಥಮಾಡಿಕೊಳ್ಳುವುದರ ಮೂಲಕ ಮಾರ್ಕ್ಸ್ನ ವರ್ಗ ಪ್ರಜ್ಞೆಯ ಪರಿಕಲ್ಪನೆಗೆ ಮುಖಾಮುಖಿಯಾಗಲು ಸಾಧ್ಯ.

ಶೋಷಕ ವ್ಯವಸ್ಥೆಯು, ಮೇಲ್ಜಾತಿಯ ದೌರ್ಜನ್ಯಗಳ ಮೂಲಕ, ಮತಾಂಧತೆಯ ಮೂಲಕ, ಅಸ್ಪೃಶ್ಯತೆಯ ಮೂಲಕ, ಕೋಮು ವಿಘಟನೆಯ ಮೂಲಕ ಬಂಡವಾಳಶಾಹಿ ಅರ್ಥವ್ಯವಸ್ಥೆಯೊಡನೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಶೋಷಣೆಯ ಆಯಾಮಗಳು ಸಾಮಾಜಿಕಾರ್ಥಿಕ ಮತ್ತು ಸಾಂಸ್ಕೃತಿಕ ರೂಪಗಳಲ್ಲಿ ವ್ಯಕ್ತವಾಗುತ್ತಾ ಶೋಷಿತರ ಒಂದು ವರ್ಗವನ್ನೂ ತನ್ನೊಳಗೆ ಸೆಳೆದುಕೊಳ್ಳಲು ನೆರವಾಗುತ್ತದೆ. ಇದಕ್ಕೆ ಪ್ರತಿಯಾಗಿ ರೂಪುಗೊಳ್ಳುವ ಯಾವುದೇ ಪ್ರತಿರೋಧದ ದನಿಗಳು, ತುಳಿತಕ್ಕೊಳಗಾದ,ಅಪಮಾನಿತ ತಳ ಸಮುದಾಯಗಳು ಮತ್ತು ಅವಕಾಶವಂಚಿತ ಬಡ ಜನತೆ ಜಾತಿ-ಮತ-ಧರ್ಮಗಳ ಅಸ್ಮಿತೆಗಳ ಚೌಕಟ್ಟಿನಿಂದ ಹೊರಬಂದು, ಭಾರತದ ಬಹುಸಾಂಸ್ಕೃತಿಕ ನೆಲೆಗಳಲ್ಲಿ ಐಕಮತ್ಯವನ್ನು ಸಾಧಿಸಬೇಕಿದೆ. ಹಾಗಾದಲ್ಲಿ ಮಾತ್ರವೇ ಜಾತಿ-ಮತಗಳ ಅಸ್ಮಿತೆಯಿಂದಾಚೆಗೂ ವಿಮೋಚನೆಯ ದಾರಿಗಳನ್ನು ಕಂಡುಕೊಳ್ಳಲು ಸಾಧ್ಯ

Tags: ಇಸ್ಲಾಂಕಾಶ್ಮೀರಕಾಶ್ಮೀರಿಯತ್ಜಾತಿ - ಮತಬಹುತ್ವಬಹುಸಂಸ್ಕೃತಿಭಾರತಮತಾಂಧತೆಮತೀಯವಾದಮೂಲ ಸ್ಥಿತಿರಾಜಕೀಯಸಾಮಾಜಿಕ ಘನತೆಗಾಗಿಸಾಮಾಜಿಕಾರ್ಥಿಕ ಸಮಾನತೆಗಾಗಿಹಿಂದೂ ರಾಷ್ಟ್ರ
Previous Post

ಒಂದೇ ವರ್ಷದಲ್ಲಿ 126 ಹುಲಿಗಳ ಸಾವು : ದಶಕದಲ್ಲೇ ಅಧಿಕ ಎನ್ನುತ್ತಿವೆ ಸರ್ಕಾರಿ ಅಂಕಿ ಅಂಶ!

Next Post

ವಿದ್ಯಾರ್ಥಿಗಳಿಗೆ ಪಾಠ ಮಾಡಲು ಶಿಕ್ಷಕರಿಲ್ಲ, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯಿಲ್ಲ: ಇದು ಕರ್ನಾಟಕ ಶಿಕ್ಷಣ ವ್ಯವಸ್ಥೆಯ ಕಥೆ!

Related Posts

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್
Top Story

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

by ಪ್ರತಿಧ್ವನಿ
April 17, 2026
0

ವಿಶೇಷ ಲೇಖನ : ನಾ ದಿವಾಕರ (ಕೃಪೆ : ಭೀಮವಾದ ವಿಶೇಷ ಸಂಚಿಕೆ ಏಪ್ರಿಲ್‌ 2026) ಡಾ. ಬಿ.ಆರ್. ಅಂಬೇಡ್ಕರ್‌ ಕರ್ನಾಟಕಕ್ಕೆ ಭೇಟಿ ನೀಡಿದ ಚಾರಿತ್ರಿಕ ಸಂದರ್ಭಗಳನ್ನು...

Read moreDetails
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

February 3, 2026
Next Post
ವಿದ್ಯಾರ್ಥಿಗಳಿಗೆ ಪಾಠ ಮಾಡಲು ಶಿಕ್ಷಕರಿಲ್ಲ, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯಿಲ್ಲ: ಇದು ಕರ್ನಾಟಕ ಶಿಕ್ಷಣ ವ್ಯವಸ್ಥೆಯ ಕಥೆ!

ವಿದ್ಯಾರ್ಥಿಗಳಿಗೆ ಪಾಠ ಮಾಡಲು ಶಿಕ್ಷಕರಿಲ್ಲ, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯಿಲ್ಲ: ಇದು ಕರ್ನಾಟಕ ಶಿಕ್ಷಣ ವ್ಯವಸ್ಥೆಯ ಕಥೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada