ಬಿ.ವೈ ವಿಜಯೇಂದ್ರ (BY vijayendra) ವಿರುದ್ಧ ಸಿಎಂ ಸಿದ್ದರಾಮಯ್ಯ (Cm siddaramaiah) ಮಾಡಿದ್ದ 150 ಕೋಟಿ ಆಫರ್ ವಿಚಾರಕ್ಕೆ ಸಂಬಂಧಪಟ್ಟಂತೆ, ಅಚ್ಚರಿಯೆಂಬಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬೆನ್ನಿಗೆ ಬಸನಗೌಡ ಪಾಟೀಲ ಯತ್ನಾಳ್ ನಿಂತಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basana Gowda Patil yatnal) ,ಕರ್ನಾಟಕ ಮುಖ್ಯಮಂತ್ರಿಗಳು ಯಾರದ್ದೋ ಮಾತುಕೇಳಿ ಮಾತನಾಡುವುದು ಸರಿ ಅಲ್ಲ.ಅದೇ ಅನ್ವರ್ ಮಾನಿಪಾಡ್ಡಿ ಬಿಜೆಪಿಯವರು ನನ್ನ ಸಂಪರ್ಕ ಮಾಡಿಲ್ಲ ಅಂತಾ ಹೇಳ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಆರೋಪ ಮಾಡಬೇಕಾದರೆ ದಾಖಲೆ ಇಟ್ಟುಕೊಂಡು ಆರೋಪ ಮಾಡಲಿ ಎಂದಿದ್ದಾರೆ.
ಸಿಎಂ ಆರೋಪದ ಬಗ್ಗೆ ಸ್ವತಃ ಮಾನಿಪಾಡ್ಡಿ ಸ್ಪಷ್ಟನೆ ನೀಡಿದ್ದಾರೆ, ಈಗ ಸಿಎಂ ಸಿದ್ದರಾಮಯ್ಯ ಏನು ಹೇಳ್ತಾರೆ ?!ಸುಮ್ಮನೆ ಬ್ಲ್ಯಾಕ್ ಮೇಲೆ ಮಾಡೊದು, ಅಂಜಿಸೋದು ಆಗಬಾರದು ಎಂದು ಹೇಳುವ ಮೂಲಕ ವಿಜಯೇಂದ್ರ ಪರವಾಗಿ ಯತ್ನಾಳ್ ಬ್ಯಾಟ್ ಬೀಸಿದ್ದಾರೆ.