ಶೇಖ್ ಹಸೀನಾ ಅವರು ಕಳೆದ ವಾರ ಭಾರತಕ್ಕೆ ಪಲಾಯನವಾಗುವ ಮುನ್ನ ಬಾಂಗ್ಲಾದೇಶದ ಮಾಜಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆಯೇ ನೀಡಿಲ್ಲ ಎಂದು ಶೇಖ್ ಹಸೀನಾ ಅವರ ಪುತ್ರ, ಸಲಹೆಗಾರ ಸಜೀಬ್ ವಾಝೆದ್ ಶನಿವಾರ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಅಧಿಕೃತ ನಿವಾಸದ ಕಡೆಗೆ ಧಾವಿಸುತ್ತಿದ್ದರು.
ಹಾಗಾಗಿ ಅವರಿಗೆ ರಾಜೀನಾಮೆ ನೀಡುವಷ್ಟು ಸಮಯವಿರಲಿಲ್ಲ ಎಂದು ಸಾಜಿದ್ ವಾಜಿದ್ ತಿಳಿಸಿದ್ದಾರೆ ರಾಯಿಟರ್ಸ್ ಉಲ್ಲೇಖಿಸಿದೆ.ಸುಮಾರು 300 ಜನರ ಸಾವಿಗೆ ಕಾರಣವಾದ ದಂಗೆಯ ಬಳಿಕ ಹಸೀನಾ ಸೋಮವಾರ ಬಾಂಗ್ಲಾದೇಶದಿಂದ ಪಲಾಯನಗೊಂಡು ನವದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ. ಅಂದಿನಿಂದ 15 ವರ್ಷಗಳ ನಿರಂತರ ಆಡಳಿತಕ್ಕೆ ಅಂತ್ಯ ಹಾಡಿದ್ದಾರೆ.
Exclusive: Bangladesh's Hasina did not resign before fleeing to Delhi, says son and adviser https://t.co/jZPi8uTYk8 pic.twitter.com/WGuaT4MoBj
— Reuters Asia (@ReutersAsia) August 9, 2024
“ನನ್ನ ತಾಯಿ ಅಧಿಕೃತವಾಗಿ ರಾಜೀನಾಮೆ ನೀಡಲಿಲ್ಲ. ಅವರಿಗೆ ಸಮಯ ಸಿಕ್ಕಿಲ್ಲ. ಹೇಳಿಕೆ ನೀಡಲು ಮತ್ತು ರಾಜೀನಾಮೆ ಸಲ್ಲಿಸಲು ಚಿಂತನೆ ನಡೆಸಿದ್ದರು. ಆದರೆ ಪ್ರತಿಭಟನಾಕಾರರು ಪ್ರಧಾನಿ ನಿವಾಸದ ಕಡೆ ಮೆರವಣಿಗೆ ಹೊರಟ ಕಾರಣ ಸಮಯ ಸಿಗಲಿಲ್ಲ. ನನ್ನ ತಾಯಿ ಪ್ಯಾಕಿಂಗ್ ಕೂಡಾ ಮಾಡಲಿಲ್ಲ. ಸಂವಿಧಾನದ ಪ್ರಕಾರ, ಅವರು ಇನ್ನೂ ಬಾಂಗ್ಲಾದೇಶದ ಪ್ರಧಾನ ಮಂತ್ರಿ” ಎಂದು ಹೇಳಿದ್ದಾರೆ.