• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಗೋಧಿ ಬೆಲೆ ಹೆಚ್ಚಳ:  ಬ್ರೆಡ್‌, ಬಿಸ್ಕತ್ ಸೇರಿ ಬೇಕರಿ ತಿಂಡಿಗಳು ದುಬಾರಿ!

Any Mind by Any Mind
May 9, 2022
in ಕರ್ನಾಟಕ, ದೇಶ
0
ಗೋಧಿ ಬೆಲೆ ಹೆಚ್ಚಳ:  ಬ್ರೆಡ್‌, ಬಿಸ್ಕತ್ ಸೇರಿ ಬೇಕರಿ ತಿಂಡಿಗಳು ದುಬಾರಿ!
Share on WhatsAppShare on FacebookShare on Telegram

ದೇಶದಲ್ಲಿ ಒಂದೊಂದಾಗಿ ಎಲ್ಲಾ ದರಗಳು ಏರಿಕೆಯಾಗುತ್ತಿದ್ದು, ಇದೀಗ ಗೋಧಿ ಬೆಲೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಇದರಿಂದ ಬ್ರೆಡ್‌, ಬಿಸ್ಕತ್‌ ಸೇರಿದಂತೆ ಬೇಕರಿ ತಿಂಡಿಗಳು ದುಬಾರಿಯಾಗಿವೆ.

ADVERTISEMENT

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿ ಬೆಲೆ 2010ರ ಜನವರಿಯಲ್ಲಿ ಕೆಜಿಗೆ 32.38ರೂ.ಗೆ ಏರಿಕೆಯಾಗಿತ್ತು. ಆದರೆ ಇದೀಗ 32.78 ರೂ.ಗೆ ಏರಿಕೆಯಾಗಿದ್ದು, ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.

ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಪ್ರಕಾರ ದೇಶದಲ್ಲಿ ಗೋಧಿ ಹಿಟ್ಟಿನ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.9.15ಕ್ಕೆ ಏರಿಕೆಯಾಗಿದೆ. ಇದರಿಂದ ಸಹಜವಾಗಿ ಗೋಧಿ ಹಿಟ್ಟು ಬಳಕೆಯ ತಿಂಡಿಗಳ ಬೆಲೆಯಲ್ಲೂ ಏರಿಕೆಯಾಗಿದೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿ 2 ತಿಂಗಳು ಆದರೂ ಮುಗಿಯುವ ಸೂಚನೆ ದೊರೆಯದ ಕಾರಣ ಅತೀ ಹೆಚ್ಚು ಗೋಧಿ ಬೆಳೆಯುವ ಈ ದೇಶಗಳಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಮತ್ತೊಂದೆಡೆ ಬಿಸಿಲು ಹೆಚ್ಚಾಗಿರುವುದರಿಂದ ಗೋಧಿ ಉತ್ಪಾದನೆಯಲ್ಲಿ ಕೂಡ ಕುಂಠಿತವಾಗಿದೆ.

ಸಾಮಾನ್ಯವಾಗಿ ಬೇಕರಿಗಳಲ್ಲಿ ತಿಂಡಿ ಮಾಡಲು ಗೋಧಿಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದರಿಂದ ಬ್ರೆಡ್‌ ಬೆಲೆ ಶೇ.8.39ರಷ್ಟು ಹೆಚ್ಚಳ ಆಗಲಿದೆ. ಇದು ಕಳೆದ 7 ವರ್ಷಗಳಲ್ಲೇ ಗರಿಷ್ಠ ಆಗಿದೆ.

ಬಿಸ್ಕತ್‌ ತಯಾರಕ ಕಂಪನಿಗಳು ದೇಶದಲ್ಲಿ ಹೆಚ್ಚಾಗಿದ್ದು, ಬ್ರಿಟಾನಿಯಾ, ಪಾರ್ಲೆ ಮುಂತಾದ ಕಂಪನಿಗಳು ಬಿಸ್ಕತ್‌ ಮೇಲಿನ ದರವನ್ನು ಏರಿಸಲಿದೆ. ಜಮ್‌ ಜಮ್‌ ಬಿಸ್ಕತ್‌, ಮಾರಿ ಗೋಲ್ಡ್‌, ನೂಟ್ರಿ ಚೂಸ್‌, ಫ್ರೂಟ್‌ ಕೇಕ್ಸ್‌ ಬೆಲೆಯಲ್ಲಿ ಶೇ.10ರಷ್ಟು ಹೆಚ್ಚಳವಾಗಲಿದೆ. ಬಿಸ್ಕತ್‌ ಕಂಪನಿಗಳು 2022ರ ಆರಂಭದಲ್ಲೇ ದರ ಏರಿಸಿದ್ದು, ವರ್ಷದಲ್ಲಿ ಎರಡು ಬಾರಿ ಇದೇ ಮೊದಲ ಬಾರಿ ಏರಿಕೆ ಮಾಡಲಿವೆ.

ಇತ್ತೀಚೆಗೆ ಬಿಸ್ಕತ್‌ ಕಂಪನಿಗಳು ಗೋಧಿ ಹಿಟ್ಟು, ಸಕ್ಕರೆ, ಗೋಡಂಬಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಿಸ್ಕತ್‌ ಗಳ ಬೆಲೆ ಹೆಚ್ಚಿಸಬೇಕಾಯಿತು ಎಂದು ಹೇಳಿಕೆ ನೀಡಿದ್ದವು. ಆಗಿನ ದರಕ್ಕೆ ಹೋಲಿಸಿದರೆ ಈ ಬಾರಿ ಇನ್ನೂ ಹೆಚ್ಚಾಗಿದ್ದು, ಗ್ರಾಹಕರಿಗೆ ಬರೆ ಬೀಳಲಿದೆ.

Tags: Attabakerybiscuitsbreadpratidvani
Previous Post

ಅಜಯ್ ಮಿಶ್ರಾ ರೈತರಿಗೆ ಬೆದರಿಕೆ ಹಾಕದಿದ್ದರೆ ಲಖಿಂಪುರ ಹಿಂಸಾಚಾರವನ್ನು ತಡೆಯಬಹುದಿತ್ತು : ಹೈಕೋರ್ಟ್

Next Post

ಸಹಾಯಕ ಪ್ರಾಧ್ಯಾಪಕರ ಪರೀಕ್ಷಾ ಅಕ್ರಮ : ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು

Related Posts

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!
ಕರ್ನಾಟಕ

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!

by ಪ್ರತಿಧ್ವನಿ
September 1, 2026
0

ಹೊಸ ನಿರ್ದೇಶಕ ಶಿವಚಿರಂತನ ಅವರು ಈ ಚಿತ್ರದ ಮೂಲಕ ಆದಿತ್ಯ ಬಿ ಪೂಜಾರ್ ನಟರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಕಿರುಚಿತ್ರ, ಶಬ್ದ...

Read moreDetails
ರಾಜೇಶ್ ನಟರಂಗ ಹೊಸ ಅವತಾರ! “NH 66” ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರ

ರಾಜೇಶ್ ನಟರಂಗ ಹೊಸ ಅವತಾರ! “NH 66” ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರ

September 1, 2026
“MR” ಜಾಕ್ ಟೀಸರ್‌ ಬಂತು

“MR” ಜಾಕ್ ಟೀಸರ್‌ ಬಂತು

September 1, 2026
ಬೆಂಗಳೂರು ಅಭಿವೃದ್ಧಿಗೆ ಭೂಮಿ ನೀಡಿದ ರೈತರಿಗೆ ನ್ಯಾಯ: 3,200 ಭೂ ಮಾಲೀಕರಿಗೆ ನಿವೇಶನ ಪತ್ರ ಹಂಚಿದ ಡಿಕೆಶಿ

ಬೆಂಗಳೂರು ಅಭಿವೃದ್ಧಿಗೆ ಭೂಮಿ ನೀಡಿದ ರೈತರಿಗೆ ನ್ಯಾಯ: 3,200 ಭೂ ಮಾಲೀಕರಿಗೆ ನಿವೇಶನ ಪತ್ರ ಹಂಚಿದ ಡಿಕೆಶಿ

September 1, 2026
ರಾಮನಗರದಲ್ಲಿ ಖೋಟಾ ನೋಟು ದಂಧೆ ಬಯಲು:ಐವರು ವಶಕ್ಕೆ

ರಾಮನಗರದಲ್ಲಿ ಖೋಟಾ ನೋಟು ದಂಧೆ ಬಯಲು:ಐವರು ವಶಕ್ಕೆ

August 31, 2026
Next Post
ಸಹಾಯಕ ಪ್ರಾಧ್ಯಾಪಕರ ಪರೀಕ್ಷಾ ಅಕ್ರಮ : ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು

ಸಹಾಯಕ ಪ್ರಾಧ್ಯಾಪಕರ ಪರೀಕ್ಷಾ ಅಕ್ರಮ : ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada