ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಿಮಾನ ಇಂಧನ ದರ(ATF) ಶನಿವಾರ ಶೇ 2.2ರಷ್ಟು ಇಳಿಸಿವೆ.
ಪ್ರಸ್ತುತ ದರದ ಪರಿಷ್ಕರಣೆಯಿಂದಾಗಿ ದೆಹಲಿಯಲ್ಲಿ ಇಂಧನ ಪ್ರತಿ ಕಿಲೋ ಲೀಟರಿಗೆ 3,084.94ರಷ್ಟು ಕಡಿಮೆ ಆಗಿದ್ದು ಪ್ರತಿ ಕಿಲೋಗೆ 1.38ಲಕ್ಷ ರೂಪಾಯಿ ಆಗಿದೆ (ಒಂದು ಕಿಲೋ ಲೀಟರ್ ಎಂದರೆ ಒಂದು ಸಾವಿರ ಲೀಟರ್).

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗಿರುವ ಕಾರಣ ತೈಲ ಕಂಪನಿಗಳು ಎಟಿಎಫ್ ದರವನ್ನು ಕಡಿಮೆ ಮಾಡಿದೆ.
ಒಂದೇ ವರ್ಷದಲ್ಲಿ ಇಂಧನ ದರ ಕಡಿಮೆಯಾಗುತ್ತಿರುವುದು ಇದು ಎರಡನೇ ಭಾರಿಯಾಗಿದೆ. ಈ ಹಿಂದೆ ಒಟ್ಟಾರೆ 11 ಭಾರೀ ದರವನ್ನ ಏರಿಕೆ ಮಾಡಲಾಗಿತ್ತು. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.