ಆಟ ಆಡುವಾಗ ಬಿದ್ದು ಅಥವಾ ಅಪಘಾತದಲ್ಲಿ, ಆಕಸ್ಮಿಕವಾಗಿ ಚಿಕ್ಕಪುಟ್ಟ ಗಾಯವಾದಾಗ ರಕ್ತಸ್ರಾವ ಆಗುವುದು ಸಹಜ .ಇಂತಹ ಸಂದರ್ಭದಲ್ಲಿ ಗಾಬರಿಯಾಗುವ ಬದಲು ತಕ್ಷಣದಲ್ಲಿ ಬ್ಲೀಡಿಂಗ್ ಅನ್ನ ನಿಲ್ಲಿಸಲು ಬಳಸಬಹುದಾದ ಕೆಲವೊಂದು ಉತ್ತಮ ಮನೆಮದ್ದುಗಳು ಯಾವುವು ಅನ್ನೋದರ ಮಾಹಿತಿ ಹೀಗಿದೆ.

ಅರಿಶಿಣ
ಅರಿಶಿಣದಲ್ಲಿ ಸಾಕಷ್ಟು ಔಷಧಿ ಗುಣಗಳು ಇರೋದ್ರಿಂದ ಹೆಚ್ಚು ಕಾಯಿಲೆಗಳಿಗೆ ಉತ್ತಮ ಮದ್ದು ಅಂತ ಹೇಳಿದ್ರೆ ತಪ್ಪಾಗಲ್ಲ. ಬಿದ್ದು ಗಾಯವಾಗಿ ರಕ್ತಸ್ರಾವ ಆಗುತ್ತಿದ್ದರೆ ಆ ಜಾಗದ ಮೇಲೆ ಸ್ವಲ್ಪ ಅರಿಶಿನ ಪುಡಿಯನ್ನು ನೇರವಾಗಿ ಹಚ್ಚಿ ಇದರಿಂದ ಸೋಂಕು ಹರಡುವುದು ಕಡಿಮೆಯಾಗುತ್ತದೆ ತಕ್ಷಣವೇ ಬ್ಲೀಡಿಂಗ್ ನಿಲ್ಲುತ್ತದೆ. ಅರಿಶಿನ ಬ್ಯಾಕ್ಟೀರಿಯ ವಿರುದ್ಧ ಹೋರಾಡುವ ಉತ್ತಮ ಗುಣವನ್ನು ಹೊಂದಿದೆ.

ಕಾಫಿ ಪುಡಿ
ರಕ್ತಸ್ರಾವನ್ನು ತಕ್ಷಣ ನಿಲ್ಲಿಸಬಹುದಾದ ಉತ್ತಮ ಪದಾರ್ಥ ಇದಾಗಿದೆ .ಬಿದ್ದು ಗಾಯವಾದಾಗ ಅದರ ಮೇಲೆ ಕಾಫಿ ಪುಡಿಯನ್ನು ಹಾಕಿದರೆ ಬೇಗನೆ ಬ್ಲೀಡಿಂಗ್ ನಿಲ್ಲುತ್ತದೆ.

ಐಸ್ ಕ್ಯೂಬ್ಸ್
ಬ್ಲೀಡಿಂಗ್ ಅನ್ನ ತಕ್ಷಣನೆ ನಿಲ್ಲಿಸಲು ಸುಲಭ ಮದ್ದು ಇದು ಚರ್ಮದ ಕೋಶಗಳು ಮತ್ತು ಅಂಗಾಂಶಗಳನ್ನು ನಿರ್ಬಂಧಿಸುವ ಮೂಲಕ ಬ್ಲಡ್ ಕ್ಲಾಟ್ ಆಗಲು ಸಹಾಯ ಮಾಡುತ್ತದೆ ಹಾಗಾಗಿ ಗಾಯದ ಮೇಲೆ ಐಸ್ ಕ್ಯೂಬ್ಸ್ ಇರುವುದು ಉತ್ತಮ.

ಉಪ್ಪು
ಉಪ್ಪನ್ನ ಗಾಯದ ಮೇಲೆ ಹಾಕುವುದರಿಂದ ಸ್ವಲ್ಪ ಉರಿ ಹಾಗೂ ನೋವಾಗುತ್ತದೆ ಆದರೂ ಕೂಡ ಪರಿಣಾಮಕಾರಿಯಾಗಿ ಕಾರ್ಯವನ್ನ ನಿರ್ವಹಿಸುತ್ತದೆ. ಗಾಯದಿಂದ ರಕ್ತ ಬರುತ್ತಿದ್ದರೆ ಉಪ್ಪನ್ನು ಹಾಕುವುದರಿಂದ ರಕ್ತವನ್ನು ಹೀರಿಕೊಂಡು ಒಣಗುವಂತೆ ಮಾಡುತ್ತದೆ.ಮತ್ತೆ ಸೋಂಕು ನಿವಾರಣೆ ಆಗುತ್ತದೆ.
