• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶ್ರೀನಗರಕ್ಕೆ ದೌಡಾಯಿಸಿದ ಅಮಿತ್​ ಷಾ, ಮೋದಿ ಟೂರ್ ಕ್ಯಾನ್ಸಲ್​..

ಕೃಷ್ಣ ಮಣಿ by ಕೃಷ್ಣ ಮಣಿ
April 23, 2025
in Top Story, ದೇಶ, ಶೋಧ
0
ಶ್ರೀನಗರಕ್ಕೆ ದೌಡಾಯಿಸಿದ ಅಮಿತ್​ ಷಾ, ಮೋದಿ ಟೂರ್ ಕ್ಯಾನ್ಸಲ್​..
Share on WhatsAppShare on FacebookShare on Telegram

ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರು ಹಿಂದೂಗಳನ್ನೇ ಗುರಿಯಾಗಿಸಿ ದಾಳಿ ಮಾಡಿ ಹತ್ಯೆ ಮಾಡುತ್ತಿದ್ದ ಸಂಗತಿ ಮಾಧ್ಯಮಗಳಲ್ಲಿ ಬರ್ತಿದ್ದ ಹಾಗೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ತುರ್ತು ಸಭೆ ನಡೆಸಿ ಶ್ರೀನಗರಕ್ಕೆ ತೆರಳಿದ್ರು. ಶ್ರೀನಗರದಲ್ಲಿ ರಾಜ್ಯಪಾಲರ ರಾಜಭವನದಲ್ಲಿ ವಾಸ್ತವ್ಯ ಹೂಡಿದ ಕೇಂದ್ರ ಗೃಹ ಸಚಿವರು ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ ಸೇರಿದಂತೆ ಸೇನಾ ನಾಯಕರು ಹಾಗು ಸ್ಥಳೀಯ ಪೊಲೀಸ್​ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದರು. ಉಗ್ರರ ಯೋಜನೆ ಸೇರಿದಂತೆ ಉಗ್ರರನ್ನು ಮಟ್ಟ ಹಾಕಲು ಬೇಕಿರುವ ತಂತ್ರಗಳ ಬಗ್ಗೆ ರಾಜ್ಯ ಸರ್ಕಾರದ ಜೊತೆಗೆ ಚರ್ಚೆ ನಡೆಸಿದರು.

ADVERTISEMENT

ಉಗ್ರರ ದಾಳಿ ಆಗ್ತಿದ್ದ ಹಾಗೆ ಜಾಲತಾಣ X ನಲ್ಲಿ ಪೋಸ್ಟ್​ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಷಾ, ಉಗ್ರರಿಗೆ ವಾರ್ನಿಂಗ್‌ ಕೊಟ್ಟಿದ್ದಾರೆ. ಉಗ್ರರಿಗೆ ತಕ್ಕ ಪಾಠ ಕಲಿಸೋ ಕೆಲಸಗಳು ಆಗುತ್ತವೆ. ದಾಳಿ ನಡೆಸಿದ ಯಾರನ್ನೂ ಬಿಡುವುದಿಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಮತ್ತೊಂದು ಕಡೆ ಸೌಧಿಯ ಜೆಡ್ಡಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಮಿತ್ ಷಾಗೆ ಕರೆ ಮಾಡಿ ದಾಳಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ಜಮ್ಮು ಕಾಶ್ಮೀರಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸುವಂತೆ ಪ್ರಧಾನಿ ಸೂಚನೆ ಕೊಟ್ಟ ಬೆನ್ನಲ್ಲೇ ಅಮಿತ್​ ಷಾ ಶ್ರೀನಗರದತ್ತ ತೆರಳಿದ್ದಾರೆ.

ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾರ್ಶಮೀರದಲ್ಲಿ ಉಗ್ರರ ದಾಳಿ ಬಳಿಕ ಸೌಧಿ ಪ್ರವಾಸವನ್ನೇ ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ವಾಪಸ್​ ಆಗಿದ್ದಾರೆ. ಮಂಗಳವಾರ ರಾತ್ರಿಯೇ ಹೊರಟ ಪ್ರಧಾನಿ ಮೋದಿ ಬುಧವಾರ ಮುಂಜಾನೆಗೆ ದೆಹಲಿಗೆ ವಾಪಸ್​ ಆಗಿ ಅಜಿತ್​ ದೋವಲ್​ ಸೇರಿದಂತೆ ಪ್ರಮುಖರ ಜೊತೆಗೆ ಮಹತ್ವದ ಸಭೆ ಮಾಡಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ದಾಳಿ ಆಗಿದ್ರೆ ಪ್ರಧಾನಿ ಮೋದಿ ಸೌದಿ ಅರೇಬಿಯಾ ದೊರೆಗಳ ಆತಿಥ್ಯ ಸ್ವೀಕಾರ ಮಾಡ್ತಿದ್ದಾರೆ ಎನ್ನುವ ಟೀಕೆಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡ್ತಿದ್ದಂತೆ ಎಚ್ಚೆತ್ತುಕೊಂಡ ಪ್ರಧಾನಿ ಭಾರತಕ್ಕೆ ವಾಪಸ್​ ಆಗಿದ್ದಾರೆ.

Santosh lad :ನಿಮ್ಮ ಸಂಬಂಧಿಕರೇ ಎಂಬುದನ್ನು ಖಚಿತಪಡಿಸಿಕೊಳ್ಳಿ, ನೀವು ಎಷ್ಟು ಜನ ಬಂದಿದ್ದೀರಿ..! #kashmir #watch

ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ವಾಪಸ್​ ಆಗ್ತಿದ್ದ ಹಾಗೆ ಹೈಲೆವೆಲ್ ಮೀಟಿಂಗ್ ನಡೆಸಿದ್ದು, ಉಗ್ರರನ್ನ ಮಟ್ಟ ಹಾಕುವ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ನಡುವೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಖಂಡನೆ ವ್ಯಕ್ತಪಡಿಸಿದ್ದು, ಭಾರತದೊಂದಿಗೆ ಅಮೆರಿಕ ಬಲವಾಗಿ ನಿಲ್ಲುತ್ತದೆ. ಭಾರತಕ್ಕೆ ನಮ್ಮ ಸಂಪೂರ್ಣ ಬೆಂಬಲ ಎಂದಿದ್ದಾರೆ. ಕಾಶ್ಮೀರದಿಂದ ಹೊರಬಂದಿರುವ ಸುದ್ದಿ ತೀವ್ರ ಕಳವಳಕಾರಿ.. ಮೃತಪಟ್ಟವರ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರ ಚೇತರಿಕೆಗಾಗಿ ನಾವು ಪ್ರಾರ್ಥಿಸುತ್ತೇವೆ ಎಂದು ಭಾರತ ಪ್ರವಾಸದಲ್ಲಿ ಇರುವ ಅಮೆರಿಕ ಉಪಾಧ್ಯಕ್ಷರು ತಿಳಿಸಿದ್ದಾರೆ.

ಅಷ್ಟು ಮಾತ್ರವಲ್ಲದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​, ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನ್ಯಾತನ್ಯಾವು ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ನಾಯಕರು ಭಾರತದ ಪರವಾಗಿ ದನಿಗೂಡಿಸಿದ್ದಾರೆ. ಉಗ್ರರನ್ನು ಮಟ್ಟ ಹಾಕಲು ನಾವು ಭಾರತದ ಜೊತೆಗೆ ಕೈಜೋಡಿಸುತ್ತೇವೆ ಎಂದಿದ್ದಾರೆ. ಪ್ರಧಶಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲವೊಂದು ಅಂಶಗಳ ಬಗ್ಗೆ ಚರ್ಚೆ ನಡೆದಿರುತ್ತದೆ. ಆದರೆ ಅದನ್ನುಯ ಬಹಿರಂಗವಾಗಿ ಹೇಳುವುದಿಲ್ಲ. ಭಾರತ ಒಂದು ಘಟನೆಗೆ ಪ್ರತಿರೋಧವಾಗಿ ಬೇರೊಂದು ಘಟನೆಗೆ ಸಾಕ್ಷಿಯಾದಾಗ ಮಾತ್ರ ಆ ಸಭೆಯ ಉದ್ದೇಶ ಅರ್ಥ ಆಗಲಿದೆ.

Tags: 2 terrorists in poonch2 terrorists killed2 terrorists killed in encounter operation in kashmiramarnath yatra cancelledamarnath yatra cancellledamit shah removed 370 articleamith shah full speecharmy killed terroristsarticle 370 article cancelledBJPbmc door to door screening in suburbsCongress Partycurfew in srinagarhow to go to shikohabad junction railway stationjammu kashmir terrorist attackkashmir civilians killedkashmir terroristslatest news in englishsrinagarsrinagar airportsrinagar districtsrinagar kashmirsrinagar sharjah direct flightterrorism in Jammu and Kashmirterrorism in kashmirTerrorist Attackterrorist attack in poonchterrorist killed armyterroriststerrorists in kashmirterrorists open fire at bjp candidate's housethe hindu editorial analysis todaytourists leaving sri nagartourists pilgrims advised to leave j&ktwo terrorists killedಬಿಜೆಪಿ
Previous Post

ಕಾಶ್ಮೀರದ ಉಗ್ರರಿಂದ ಹತ್ಯೆ ಆದವರ ಕಥೆ.. ಕಣ್ಣೀರ ವ್ಯಥೆ..

Next Post

ಪಹಲ್ಗಾಮ್ ಉಗ್ರರ ದಾಳಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ವಿವರಣೆ ನೀಡಿದ ಸಚಿವ ಸಂತೋಷ್ ಲಾಡ್

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
Next Post
ಪಹಲ್ಗಾಮ್ ಉಗ್ರರ ದಾಳಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ವಿವರಣೆ ನೀಡಿದ ಸಚಿವ ಸಂತೋಷ್ ಲಾಡ್

ಪಹಲ್ಗಾಮ್ ಉಗ್ರರ ದಾಳಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ವಿವರಣೆ ನೀಡಿದ ಸಚಿವ ಸಂತೋಷ್ ಲಾಡ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada